ಮುಂಬಯಿ: “ಸ್ವಾಮಿ… ಸಂಬಳ ಬಂದು ತಿಂಗಳುಗಳೇ ಕಳೆದಿವೆ. ಕಿಸೆಯಲ್ಲಿ ಒಂಚೂರೂ ಹಣವಿಲ್ಲ. ಬ್ಯಾಂಕ್ ಸಾಲದ ಕಂತು, ಮಕ್ಕಳ ಟ್ಯೂಶನ್, ಶಾಲೆಗಳ ಶುಲ್ಕವನ್ನೂ ಪಾವತಿಸಿಲ್ಲ. ಎಲ್ಲರಂತೆ ಸಿನಿಮಾ, ರೆಸ್ಟೋರೆಂಟ್‌ಗೆ ಹೋಗುತ್ತಿಲ್ಲ. ಮಕ್ಕಳಿನ್ನೂ ಚಿಕ್ಕವರು. ಅವರ ಬಳಿ ನಾನು ಏನನ್ನೂ ಹೇಳಿಲ್ಲ. ಆದರೆ, ಆ ಮಕ್ಕಳಿಗೆ ಅಪ್ಪ ತೊಂದರೆಯಲ್ಲಿದ್ದಾರೆ ಎಂಬುದು ಅರಿವಿಗೆ ಬಂದಿದೆ…’
ದಿಲ್ಲಿ ಹಾಗೂ ಮುಂಬಯಿನಲ್ಲಿ ಪ್ರತಿಭಟನೆ ನಡೆಸಿದ ಜೆಟ್ ಏರ್‌ವೇಸ್‌ನ ಸಾವಿರಾರು ಉದ್ಯೋಗಿಗಳಲ್ಲೊಬ್ಬರು ಮಾಧ್ಯಮವೊಂದಕ್ಕೆ ತಾವು ಅನುಭವಿಸುತ್ತಿರುವ ಮಾನಸಿಕ ಯಾತನೆ ಯನ್ನು ವಿವರಿಸಿದ ಬಗೆಯಿದು. ಸಾಲದ ಶೂಲಕ್ಕೆ ಸಿಲುಕಿ ರುವ ಜೆಟ್ ಏರ್‌ವೇಸ್ ಸಂಸ್ಥೆಯು ಬುಧವಾರ ದಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.
ಕೆಲವರು, “ಮಕ್ಕಳ ಟ್ಯೂಶನ್ ಶುಲ್ಕ ಪಾವತಿಸಿಲ್ಲವಾದ್ದರಿಂದ ತಾವೇ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದೇವೆ’ ಎಂದರೆ, ಮತ್ತೆ ಕೆಲವರು, ತಾವಿರುವ ಅಪಾರ್ಟ್‌ಮೆಂಟ್‌ನ ತಿಂಗಳ ನಿರ್ವಹಣಾ ಶುಲ್ಕವನ್ನೂ ನೀಡುತ್ತಿಲ್ಲವಾದ್ದರಿಂದ ಅಪಾರ್ಟ್‌ಮೆಂಟ್‌ನಲ್ಲಿ ತಮ್ಮ ಕುಟುಂಬವನ್ನು ತಾತ್ಸಾರದಿಂದ ನೋಡಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಹೀಗೆ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವಲ್ಲಿ ಒಬ್ಬೊರದ್ದೂ ಒಂದೊಂದು ರೀತಿಯ ಯಾತನೆ.
ಸಿಇಒ ಅಭಯ: ಇದೆಲ್ಲದರ ನಡುವೆಯೇ, ಕಂಪೆನಿಯ ಉದ್ಯೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬಲು ಪ್ರಯತ್ನಿಸಿರುವ ಜೆಟ್ ಏರ್‌ವೆàಸ್ ವಿನಯ್ ದುಬೆ, ವಿಮಾನ ಸಂಸ್ಥೆಯನ್ನು ಮಾರಾಟ ಮಾಡಲು ಪ್ರಯತ್ನಿಸಲಾಗುತ್ತಿದೆ. ಸದ್ಯದಲ್ಲೇ ಎಲ್ಲವೂ ಸರಿಹೋಗಲಿದೆ ಎಂದಿದ್ದಾರೆ.
ವಿಮಾನಗಳು ಬಾಡಿಗೆಗೆ?: ಈ ನಡುವೆ, ಏ. 17ರಿಂದ ಸ್ತಬ್ಧಗೊಂಡಿರುವ ಜೆಟ್ ಏರ್‌ವೆàಸ್‌ನ ಲಂಡನ್, ದುಬಾೖ, ಸಿಂಗಾಪುರ ನಡುವೆ ಸಂಚರಿಸುತ್ತಿದ್ದ ಜೆಟ್‌ನ ಬೋಯಿಂಗ್ 777 ವಿಮಾನಗಳನ್ನೇ ಅದೇ ಮಾರ್ಗಗಳಲ್ಲಿ ತನ್ನ ಸಂಸ್ಥೆಯಡಿ ಬಳಸಿಕೊಳ್ಳಲು ಏರ್ ಇಂಡಿಯಾ ಚಿಂತನೆ ನಡೆಸಿದೆ. ಅತ್ತ, ಸ್ಪೈಸ್ ಜೆಟ್ ಸಂಸ್ಥೆಯು, ಜೆಟ್ ಏರ್‌ವೆàಸ್‌ನ ಬೋಯಿಂಗ್ 737 ಮಾದರಿಯ ಆರು ವಿಮಾನಗಳನ್ನು ಬಾಡಿಗೆ ಪಡೆಯಲು ತೀರ್ಮಾನಿಸಿದೆ.
ಡಿಜಿಸಿಎ ನೆರವು?
ಜೆಟ್ ಏರ್‌ವೇಸ್ ಸಂಸ್ಥೆಗೆ ಕಾನೂನು ಚೌಕಟ್ಟಿನಡಿ ಮಾಡಬಹುದಾದ ಸಹಾಯ ಮಾಡಲು ಸಿದ್ಧವಿರುವುದಾಗಿ ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ. ಜತೆಗೆ, ಸೇವೆಯನ್ನು ಪುನರಾರಂಭಿಸುವ ಕುರಿತಂತೆ ಪರ್ಯಾಯ ಮಾರ್ಗ ಅಳವಡಿಸಿಕೊಳ್ಳುವಂತೆಯೂ ಏರ್‌ವೆàಸ್‌ಗೆ ಸೂಚಿಸುವುದಾಗಿ ಕಂಪೆನಿ ಹೇಳಿದೆ.
ಮಧ್ಯ ಪ್ರವೇಶಿಸುವುದಿಲ್ಲ: ಹೈಕೋರ್ಟ್
“ಸಂಕಷ್ಟದಲ್ಲಿರುವ ಜೆಟ್ ಏರ್‌ವೇಸ್ ಕಂಪೆನಿಯ ಬಗ್ಗೆ ಮೃದು ಧೋರಣೆ ತಳೆಯುವಂತೆ ಬ್ಯಾಂಕುಗಳ ಸಮೂಹಕ್ಕೆ ಸೂಚನೆ ನೀಡಲು ಕೇಂದ್ರ ಸರಕಾರಕ್ಕೆ ತಾಕೀತು ಮಾಡುವಂತೆ ಸಲ್ಲಿಸಲಾಗಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. “ಈ ರೀತಿ ಸೂಚಿಸಲು ಸಾಧ್ಯವಿಲ್ಲ. ಅಲ್ಲದೆ, ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ’ ಎಂದು ನ್ಯಾಯಾಲಯ ಹೇಳಿದೆ.