Advertisement

ಸೆಲ್ಫಿ: ಜೆಟ್‌ ಏರ್‌ ವೇಸ್‌ 4 ಪೈಲಟ್‌ಗಳ ವಿರುದ್ಧ ಶಿಸ್ತು ಕ್ರಮ

04:51 PM May 30, 2018 | Team Udayavani |

ಹೊಸದಿಲ್ಲಿ : ತರಬೇತಿ ವಿಮಾನ ಹಾರಾಟದಲ್ಲಿದ್ದಾಗ ಸೆಲ್ಪಿ ಕ್ಲಿಕ್ಕಿಸಿಕೊಂಡ ನಾಲ್ವರು ಪೈಲಟ್‌ಗಳ ವಿರುದ್ಧ ಜೆಟ್‌ ಏರ್‌ ವೇಸ್‌ ಶಿಸ್ತು ಕ್ರಮ ತೆಗೆದುಕೊಂಡಿದೆ. ವಿಮಾನದಲ್ಲಿ ಪ್ರಯಾಣಿಕರು ಇಲ್ಲದಿದ್ದ ಹೊರತಾಗಿಯೂ ಪೈಲಟ್‌ಗಳ ಈ ವರ್ತನೆ ಏರ್‌ ಲೈನ ನಿಮಯಗಳ ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ.

Advertisement

ಶಿಸ್ತು ಕ್ರಮಕ್ಕೆ ಒಳಗಾದವರೆಂದರೆ ಜೆಟ್‌ ಏರ್‌ ವೇಸ್‌ನ ಹಿರಿಯ ಶಿಕ್ಷಕ ಮಟ್ಟದ ಕಮಾಂಡರ್‌ ಮತ್ತು ತರಬೇತಿ ಪಡೆಯುತ್ತಿದ್ದ ಮೂವರು ಪೈಲಟ್‌ಗಳು.

ಕಳೆದ ಎಪ್ರಿಲ್‌ 19ರಂದು ಜೆಟ್‌ ಏರ್‌ ವೇಸ್‌ನ ತರಬೇತಿ ವಿಮಾನ ಲೇಹ್‌ನಿಂದ ದಿಲ್ಲಿಗೆ ಮರಳುತ್ತಿದ್ದಾಗ ಆರೋಪಿ ಪೈಲಟ್‌ಗಳು ಹಾರಾಟದ ನಡುವೆಯೇ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ಬಗ್ಗೆ ಜೆಟ್‌ ಏರ್‌ ವೇಸ್‌ ಆಂತರಿಕ ತನಿಖೆಗೆ ಆದೇಶಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next