Advertisement

Jet Airways ಹಾರಾಟ ಸುರಕ್ಷೆ ಅಪಾಯದಲ್ಲಿ : ಇಂಜಿನಿಯರ್‌ಗಳ ಎಚ್ಚರಿಕೆ

06:35 AM Mar 19, 2019 | udayavani editorial |

ಹೊಸದಿಲ್ಲಿ : ಮೂರು ತಿಂಗಳಿಂದ ಸಂಬಳವಿಲ್ಲದೆ ಆರ್ಥಿಕವಾಗಿ ಪರಿತಪಿಸುತ್ತಿರುವ ಜೆಟ್‌ ಏರ್‌ ವೇಸ್‌ ಸಂಸ್ಥೆಯ ವಿಮಾನ ನಿರ್ವಹಣೆ ಇಂಜಿನಿಯರ್‌ಗಳು  ವಾಯುಯಾನ ನಿಯಂತ್ರಣ ಸಂಸ್ಥೆ ಡಿಜಿಸಿಎ ಗೆ ಪತ್ರ ಬರೆದು ಜೆಟ್‌ ಏರ್‌ ವೇಸ್‌ ಹಾರಾಟ ಸುರಕ್ಷೆ ಅಪಾಯದಲ್ಲಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. 

Advertisement

ಮೂರು ತಿಂಗಳಿಂದ ಸಂಬಳವಿಲ್ಲದೆ ತೀವ್ರ ಆರ್ಥಿಕ ಮತ್ತು ಮಾನಸಿಕ ಒತ್ತಡಕ್ಕೆ ಗುರಿಯಾಗಿರುವ ನಮಗೆ ವಾಯುಯಾನ ಸುರಕ್ಷೆಯ ಕರ್ತವ್ಯವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಇಂಜಿನಿಯರ್‌ಗಳು ಡಿಜಿಸಿಎ ಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ತೀವ್ರ ಹಣಕಾಸು ತೊಂದರೆಗೆ ಗುರಿಯಾಗಿರುವ ಜೆಟ್‌ ಏರ್‌ ವೇಸ್‌ ತನ್ನ ಅನೇಕ ವಿಮಾನ ಹಾರಾಟಗಳನ್ನು ರದ್ದುಪಡಿಸುತ್ತಿದ್ದು ನೌಕರರಿಗೆ ಹಲವು ತಿಂಗಳಿಂದ ಸಂಬಳ ಬಾಕಿ ಇರಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next