Advertisement

ಜೆಟ್‌ ಏರ್‌ವೇಸ್‌ ನೌಕರರ ವೇತನ ಅರ್ಧದಷ್ಟು ಕಡಿತ?

05:40 AM Jul 21, 2017 | |

ಮುಂಬಯಿ: ವೆಚ್ಚ ಕಡಿತಕ್ಕೆ ಮುಂದಾಗಿರುವ ದೇಶದ 2ನೇ ಅತಿದೊಡ್ಡ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ ಈಗ, ತನ್ನ ನೌಕರರ ವೇತನವನ್ನು ಶೇ.30ರಿಂದ 50ರಷ್ಟು ಕಡಿತಗೊಳಿಸಲು ಹೊರಟಿದೆ. 

Advertisement

ಹಲವಾರು ಕಿರಿಯ ಶ್ರೇಣಿಯ ಪೈಲಟ್‌ಗಳಿಗೆ, ವೇತನ ಮತ್ತು ಸ್ಟೈಪಂಡ್‌ ಕಡಿತವನ್ನು ಸ್ವೀಕರಿಸಿ ಇಲ್ಲದಿದ್ದರೆ ರಾಜೀನಾಮೆ ನೀಡಿ ಎಂದು ಹೇಳಿದೆ ಎನ್ನಲಾಗಿದೆ. “ವಿಮಾನಗಳ ಸಂಖ್ಯೆ ಮತ್ತು ಸಂಪರ್ಕಗಳನ್ನು ಹೆಚ್ಚಿಸಲು ಒತ್ತು ನೀಡಲಾಗಿದ್ದು, ವೇತನ ಕಡಿತ ಕ್ರಮವನ್ನು ಅನಿವಾರ್ಯವಾಗಿ ತೆಗೆದುಕೊಂಡಿದ್ದೇವೆ’ ಎಂದು ಸಂಸ್ಥೆ ಉದ್ಯೋಗಿಗಳಿಗೆ ನೀಡಿರುವ ಪತ್ರದಲ್ಲಿ ಹೇಳಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next