Advertisement

ಜೆಟ್‌ ಏರ್‌ ವೇಸ್‌ ಅಧ್ಯಕ್ಷ ನರೇಶ್‌ ಗೋಯಲ್‌, ಪತ್ನಿ ಅನಿತಾ ರಾಜೀನಾಮೆ

09:58 AM Mar 26, 2019 | Sathish malya |

ಹೊಸದಿಲ್ಲಿ : ಜೆಟ್‌ ಏರ್‌ ವೇಸ್‌ ಸ್ಥಾಪಕ ಮತ್ತು ಅಧ್ಯಕ್ಷ ನರೇಶ್‌ ಗೋಯಲ್‌ ಮತ್ತು ಅವರ ಪತ್ನಿ ಅನಿತಾ ಗೋಯಲ್‌ ಅವರು ಇಂದು ಸೋಮವಾರ ಕಂಪೆನಿಯ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ.

Advertisement

ಈ ವಿಷಯವನ್ನು ಇಂದು ಜೆಟ್‌ ಏರ್‌ ವೇಸ್‌ ಕಂಪೆನಿ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ಗೆ ಅಧಿಕೃತವಾಗಿ ತಿಳಿಸಿದೆ.

1993ರಲ್ಲಿ ತಮ್ಮ ಪತ್ನಿ ಜತೆ ಜೆಟ್‌ ಏರ್‌ ವೇಸ್‌ ಸ್ಥಾಪಿಸಿದ್ದ ಗೋಯಲ್‌ ಅವರು ಈಗಿನ್ನು ಕಂಪೆನಿಯ ಅಧ್ಯಕ್ಷರಾಗಿರುವುದಿಲ್ಲ.

ಈ ನಡುವೆ ಜೆಟ್‌ ಏರ್‌ ವೇಸ್‌ ನಲ್ಲಿ ಶೇ.24 ಒಡೆತನ ಹೊಂದಿರುವ ಗಲ್ಫ್ ವಿಮಾನಯಾನ ಸಂಸ್ಥೆ ಎತಿಹಾದ್‌ ನ ಓರ್ವ ನಾಮಾಂಕಿತ ನಿರ್ದೇಶಕರು ಮಂಡಳಿಯಿಂದ ಕೆಳಗಿಳಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next