Advertisement

ಜೆಟ್‌ ಏರ್‌ವೇಸ್‌ನ ಸಿಎಫ್ಓ ಅಮಿತ್‌ ಅಗರ್ವಾಲ್‌ ರಾಜೀನಾಮೆ

09:51 AM May 15, 2019 | Team Udayavani |

ಮುಂಬಯಿ: ಆರ್ಥಿಕ ದಿವಾಳಿಯಾಗಿರುವ ಜೆಟ್‌ ಏರ್‌ವೇಸ್‌ ವಿಮಾನಯಾನ ಸಂಸ್ಥೆಯ ಸಿಎಫ್ಓ ಮತ್ತು ಡ್ಯಪುಟಿ ಸಿಇಓ ಅಮಿತ್‌ ಅಗರ್ವಾಲ್‌ ಅವರು ರಾಜೀನಾಮೆ ನೀಡಿದ್ದಾರೆ.

Advertisement

ವೈಯಕ್ತಿಕ ಕಾರಣಕ್ಕಾಗಿ ಅಮಿತ್‌ ಅಗರ್ವಾಲ್‌ ರಾಜೀನಾಮೆ ನೀಡಿದ್ದಾರೆ.13 ಮೇ ಯಿಂದ ಇದು ಅನ್ವಯವಾಗಲಿದೆ ಎಂದು ಜೆಟ್‌ ಏರ್‌ವೆàಸ್‌ ಸ್ಟಾಕ್‌ ಎಕ್ಸ್‌ಚೆಂಜ್‌ನ ಹೇಳಿಕೆಯಲ್ಲಿ ತಿಳಿಸಿದೆ.

8,500 ಕೋಟಿ ರೂಪಾಯಿ ಸಾಲದ ಹೊರೆ ಹೊತ್ತಿರುವ ಜೆಟ್‌ ಏರ್‌ವೆàಸ್‌ ತಾತ್ಕಾಲಿಕವಾಗಿ ವಿಮಾನಗಳ ಹಾರಟವನ್ನು ಸ್ಥಗಿತಗೊಳಿಸಿದೆ.

ವಿಮಾನ ಹಾರಾಟದ ಸ್ಥಗಿತದಿಂದ ಜೆಟ್‌ ಏರ್‌ವೇಸ್‌ ಸಂಸ್ಥೆಯ ಸಾವಿರಾರು ಉದ್ಯೋಗಿಗಳು ಅತಂತ್ರರಾಗಿದ್ದಾರೆ. ಈಗಾಗಲೇ ಹಲವು ಪೈಲಟ್‌ಗಳು, ಹೆಚ್ಚು ಕ್ಯಾಬಿನ್‌ ಸಿಬಂದಿ, ತಾಂತ್ರಿಕ ಸಿಬಂದಿಗಳು ಬೇರೆ ಸಂಸ್ಥೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಹಲವಾರು ಎಂಜನಿಯರ್‌ಗಳು, ಇತರ ಸಿಬಂದಿ ಈಗಾಗಲೇ ಕಂಪನಿಗೆ ಗುಡ್‌ ಬೈ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next