Advertisement

“ಮನುಕುಲದ ಸೇವೆಗಾಗಿ ಅವತರಿಸಿದ ಯೇಸುಸ್ವಾಮಿ’

11:15 PM Nov 24, 2019 | Team Udayavani |

ಉಡುಪಿ: ಉಡುಪಿ ಕೆಥೊಲಿಕ್‌ ಧರ್ಮಪ್ರಾಂತದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಮತ್ತು ಕ್ರಿಸ್ತರಾಜರ ಮಹೋತ್ಸವವು ರವಿವಾರ ಕಲ್ಯಾಣಪುರದ ಮಿಲಾಗ್ರಿಸ್‌ ಕೆಥೆಡ್ರಲ್‌ನಲ್ಲಿ ಜರಗಿತು.

Advertisement

ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೊ ಅವರು ಪರಮಪ್ರಸಾದ ಮೆರವಣಿಗೆ ಮತ್ತು ಪ್ರಧಾನ ಬಲಿಪೂಜೆಯ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.

ಯೇಸು ಸ್ವಾಮಿಯು ತನ್ನ ಸೇವೆಯನ್ನು ಬಯಸಿ ಈ ಜಗತ್ತಿಗೆ ಬಂದುದಲ್ಲ. ಬದಲಾಗಿ ಸೇವೆಯನ್ನು ನೀಡಲು ಬಂದರು. ತನ್ನ ಸೇವಾ ಮನೋಭಾವದೊಂದಿಗೆ ತನ್ನನ್ನು ಶಿಲುಬೆಯಲ್ಲಿ ಸಮರ್ಪಿಸಿಕೊಂಡರು. ಯೇಸು ಸ್ವಾಮಿ ಈ ಭೂಮಿಯಲ್ಲಿ ತನ್ನ ರಾಜ್ಯವನ್ನು ವಿಸ್ತರಿಸಲಿಲ್ಲ. ಬದಲಾಗಿ ನಮ್ಮ ಪಾಪಗಳಿಗೆ ಮುಕ್ತಿ ನೀಡಿದರು. ಅದೇ ಯೇಸು ಸ್ವಾಮಿ ಆಶಿಸಿದ ಶಾಂತಿಯ ರಾಜ್ಯ ಸ್ಥಾಪನೆಗೆ ಪ್ರತಿಯೊಬ್ಬರೂ ಸದಾ ಕಟಿಬದ್ಧರಾಗಿರಬೇಕಾಗಿದೆ ಎಂದರು.

ಪರಮಪ್ರಸಾದವನ್ನು ಸಾಲಂಕೃತ ತೆರೆದ ವಾಹನದಲ್ಲಿ ಮಿಲಾಗ್ರಿಸ್‌ ಕ್ಯಾಥೆಡ್ರಲ್‌ನಿಂದ ಸಂತೆಕಟ್ಟೆ ಮೌಂಟ್‌ ರೋಸರಿ ಚರ್ಚಿನ ತನಕ ಮೆರವಣಿಗೆಯಲ್ಲಿ ನಡೆಸಲಾಯಿತು.ಬಳಿಕ ಅತ್ತೂರು ಸಂತ ಲಾರೆನ್ಸ್‌ ಬೆಸಿಲಿಕಾದ ಸಹಾಯಕ ಧರ್ಮಗುರು ವಂ| ಮೆಲ್ವಿಲ್‌ ರೋಯ್‌ ಲೋಬೋ ಪ್ರವಚನ ನೀಡಿದರು.

ಉಡುಪಿ ಧರ್ಮಪ್ರಾಂತ ವ್ಯಾಪ್ತಿಯ 52 ಚರ್ಚ್‌ಗಳಿಂದ ಸುಮಾರು 2,500ಕ್ಕೂ ಅಧಿಕ ಮಂದಿ ಭಕ್ತರು, 45ಕ್ಕೂ ಅಧಿಕ ಧರ್ಮಗುರುಗಳು, 100ಕ್ಕೂ ಅಧಿಕ ಧರ್ಮಭಗಿನಿಯರು ಭಾಗವಹಿಸಿದ್ದರು.

Advertisement

ಉಡುಪಿ ಧರ್ಮಪ್ರಾಂತದ ವಿಕಾರ್‌ ಜನರಲ್‌ ಮೊ| ಬ್ಯಾಪಿಸ್ಟ್‌ ಮಿನೇಜಸ್‌, ಕುಲಪತಿ ರೆ| ಸ್ಟಾನಿ ಬಿ. ಲೋಬೊ, ಕಾರ್ಕಳ ವಲಯದ ಪ್ರಧಾನ ಧರ್ಮಗುರು ರೆ| ಜೊಸ್ವಿ ಫೆರ್ನಾಂಡಿಸ್‌, ಉಡುಪಿ ವಲಯ ಪ್ರಧಾನ ಧರ್ಮಗುರು ರೆ| ವಲೇರಿಯನ್‌ ಮೆಂಡೊನ್ಸಾ, ಸಂತೆಕಟ್ಟೆ ಮೌಂಟ್‌ ರೋಸರಿ ಚರ್ಚಿನ ಪ್ರಧಾನ ಧರ್ಮಗುರು ರೆ| ಡಾ| ಲೆಸ್ಲಿ ಡಿ’ಸೋಜಾ, ಮಿಲಾಗ್ರಿಸ್‌ ಕ್ಯಾಥೆಡ್ರಲ್‌ನ ಸಹಾಯಕ ಧರ್ಮಗುರು ರೆ| ಕೆನ್ಯೂಟ್‌ ನೊರೊನ್ಹಾ, ಅತ್ತೂರು ಸಂತ ಲಾರೆನ್ಸ್‌ ಬಾಸಿಲಿಕದ ರೆ| ಜೋರ್ಜ್‌ ಡಿ’ಸೋಜಾ ಉಪಸ್ಥಿತರಿದ್ದರು.

ಉಡುಪಿ ಧರ್ಮಪ್ರಾಂತದ ಸೆನೆಟ್‌ ಸಭೆಯ ಕಾರ್ಯದರ್ಶಿ ವಂ| ಅನಿಲ್‌ ಪ್ರಕಾಶ್‌ ವಂದಿಸಿದರು.

ಬಡ ಕುಟುಂಬಗಳಿಗೆ ನಿವೇಶನ
ಮುಂದಿನ 2020ರ ವರ್ಷದಲ್ಲಿ ವಿಶೇಷ ಯೋಜನೆಯನ್ನು ರೂಪಿಸಲಾಗಿದೆ. ಉಡುಪಿ ಧರ್ಮಪ್ರಾಂತ ವ್ಯಾಪ್ತಿಯಲ್ಲಿ ಬರುವ ಚರ್ಚುಗಳಲ್ಲಿ ನಿವೇಶನ ಇದ್ದು ಸ್ವಂತ ಮನೆ ಕಟ್ಟಿಕೊಳ್ಳಲು ಅಶಕ್ತರಾಗಿರುವ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ವಿಶೇಷ ಯೋಜನೆ ಒಂದು ವರ್ಷ ನಿರಂತರವಾಗಿ ನಡೆಯಲಿದೆ. ಧರ್ಮಪ್ರಾಂತದ ಸಂತ ವಿನ್ಸೆಂಟ್‌ ಡಿ. ಪಾವ್‌É ಸೊಸೈಟಿ ಇದರ ನೇತೃತ್ವ ವಹಿಸಿದೆ ಎಂದು ರೈ| ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೊ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next