Advertisement

ಕೇಡು ಬಯಸಿದರೂ ಒಳಿತು ಬಯಸುವ ಯೇಸು ದೇವ : ಅಮರೇಗೌಡ ಪಾಟೀಲ

05:15 PM Dec 25, 2021 | Team Udayavani |

ಕುಷ್ಟಗಿ: ಒಳಿತು ಮಾಡಿದರೂ ಕೇಡು ಬಯಸುವ ಮನುಷ್ಯ ಸ್ವಭಾವದ ದಿನಮಾನಗಳಲ್ಲಿ ಕೇಡು ಬಯಸಿದರೂ ಒಳಿತು ಬಯಸುವ ಯೇಸು ದೇವ ಮಾನವರೆನಿಸಿದ್ದಾರೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.

Advertisement

ಪಟ್ಟಣದ ಹೊರವಲಯದ ಚೀಯೋನ್ ನಗರದಲ್ಲಿ ಬ್ಲೆಸಿಂಗ್ ಸ್ಪಿರ್ಚ್ಯೂವಲ್ ಸೋಷಿಯಲ್ ಮಿನಿಷ್ಟ್ರೀ ಸ್ಪಿರಿಟ್ ಪಿಲ್ಡ್ ಯುನಿವರ್ಸಲ್ ಚರ್ಚ್ ಆತ್ಮಭರಿತ ಸಾರ್ವತ್ರಿಕ ಎಜೆ ಸಭೆಯಲ್ಲಿ ಕ್ರಿಸಮಸ್ ಹಬ್ಬದ ಸಂಭ್ರಮ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೇಸು ಯಾವುದೇ ತಪ್ಪು ಮಾಡದೇ ಇದ್ದರೂ, ಒಬ್ಬ ವ್ಯಕ್ತಿ ಅವರ ವಿರುದ್ದ ರೇಗಾಡಿ ಯೇಸುವಿನ ಬಲ ಕೆನ್ನೆಗೆ ಬಾರಿಸಿದಾಗ ಯೇಸು ಪ್ರತಿಕಾರ ತೋರಿಸದೇ ಎಡ ಕೆನ್ನೆಗೆ ಹೊಡೆಯುವಂತೆ ಕೇಳಿ ಕೊಂಡರು. ನಾವಾದರೆ ಬಲವಾಗಿ ಹೊಡೆದು ಪ್ರತಿಕಾರ ತೋರಿಸಿಕೊಳ್ಳುತ್ತಿದ್ದೆವು ಇದೇ ನಮಗೂ ದೇವಮಾನವರಿಗೆ ಇರುವ ವ್ಯತ್ಯಾಸವಾಗಿದೆ.ಹೀಗಾಗಿ ದೇವ ಮಾನವರನ್ನು ನೆನೆಸಿಪಿ, ಪೂಜಿಸಿದರೆ ಸಾಲದು ಅವರ ಸಂದೇಶಗಳು, ನಡೆ ನುಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಬಡವರು, ತುಳಿತಕ್ಕೆ ಒಳಗಾದವರ ಸಹಾಯ ಮಾಡುವ ಗುಣ ಬೆಳಸಿಕೊಳ್ಳಬೇಕು ಎಂದ ಅವರು,ಗಳಿಸಿರುವ ಸಂಪತ್ತು ಬಡವ, ದೀನದಲಿತರಿಗೆ ಹಂಚಬೇಕು. ವಾರದಲ್ಲಿ ಒಂದು ದಿನ ಯೇಸು ಸ್ಮರಣೆಗೆ ಮೀಸಲಿಡುವುದರಿಂದ ಜೀವನದಲ್ಲಿ ಶಾಂತಿ ನೆಮ್ಮದಿ ಹೊಂದಲು ಸಾದ್ಯವಿಲ್ಲ ಎಂದರು.

ಕ್ರೈಸ್ತ ಪಾದ್ರಿ ಎಸ್.ಕೆ.ಜೋಷ್ ಮಾತನಾಡಿ, ಕ್ರೈಸ್ತನ ಧರ್ಮ, ಸತ್ಯ ಪ್ರತಿ ಮಾನವರಲ್ಲಿ ವಾಸವಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ತಹಶೀಲ್ದಾರ ಎಂ.ಸಿದ್ದೇಶ ಅವರು, ಕ್ರಿಸ್ ಮಸ್ ಶುಭಾಶಯಗಳನ್ನು ತಿಳಿಸಿದರು.ವೇದಿಕೆಯಲ್ಲಿ ಮಹಾಂತೇಶ ಶೆಟ್ಟರ್, ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಪಿ.ರಾಜು, ಸಂಗಮೇಶ ಹಿರೇಗೌಡ್ರು, ಬಸವರಾಜ ಯರದೊಡ್ಡಿ, ಬಾಬ್ಜಿ, ಶಂಕರ್, ಶಿವಮೂರ್ತಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next