ಕನ್ಯಾಕುಮಾರಿ/ಜೈಪುರ: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಆರಂಭವಾಗಿ 4 ದಿನಗಳು ಕಳೆಯುತ್ತಲೇ ಅದಕ್ಕೆ ವಿವಾದ ಅಂಟಿಕೊಂಡಿದೆ. ಕನ್ಯಾಕುಮಾರಿಯಲ್ಲಿನ ವಿವಾದಿತ ಪಾಸ್ಟರ್ ಜಾರ್ಜ್ ಪೊನ್ನಯ್ಯ ರಾಹುಲ್ ಜತೆ ಮಾತುಕತೆ ನಡೆಸಿದ ವೀಡಿಯೋದಲ್ಲಿ “ಜೀಸಸ್ ಮಾತ್ರ ದೇವರು. ಶಕ್ತಿ ಮತ್ತು ಇತರರು ಅಲ್ಲ’ ಎಂದಿರು ವುದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿಯ ಶೆಹಜಾದ್ ಪೂನಾವಾಲಾ, ಸಂಭಿತ್ ಪಾತ್ರಾ ಮತ್ತಿತರರು ವೀಡಿಯೋ ಹಂಚಿಕೊಂಡಿದ್ದಾರೆ.
ತ.ನಾಡಿನ ಪುಲಿಯೂರ್ ಕುರಿಚ್ಚಿಯಲ್ಲಿ ರಾಹುಲ್, ಜಾರ್ಜ್ ಪೊನ್ನ ಯ್ಯರನ್ನು ಭೇಟಿಯಾ ಗಿದ್ದಾರೆ. ಆ ವೇಳೆ ರಾಹುಲ್ “ಜೀಸಸ್ ಅವರೇ ದೇವರಾಗಿದ್ದಾರೆಯೇ? ಇದು ಸರಿಯೇ’ ಎಂದಿದ್ದಾರೆ. ಅದಕ್ಕೆ ಉತ್ತರಿ ಸಿದ ಪಾಸ್ಟರ್, “ಅವರೇ ನೈಜ ದೇವರು. ಅವರು ಮಾನವನ ರೀತಿ ಇರುತ್ತಾರೆ. ಶಕ್ತಿ ಮತ್ತು ಇತರರಂತೆ ಅಲ್ಲ’ ಎಂದು ಹೇಳಿರುವುದು ದಾಖಲಾಗಿದೆ.
ನಿಜ ಬಣ್ಣ ಬಯಲು: ಈ ವೀಡಿಯೋಕ್ಕೆ ಪ್ರತಿ ಕ್ರಿಯೆ ನೀಡಿದ ಬಿಜೆಪಿಯ ಸಂಭಿತ್ ಪಾತ್ರಾ, “ಭಾರತ್ ಜೋಡೋದ ನಿಜ ಬಣ್ಣ ಬಯಲಾ ಗಿದೆ. ಶಕ್ತಿ ದೇವತೆಯನ್ನು ಅವಮಾನಿಸ ಲಾಗಿದೆ. ಕಾಂಗ್ರೆಸ್ ಇಂಥ ಪ್ರಯತ್ನಗಳನ್ನು ನಡೆಸಿರುವುದು ಮೊದಲಲ್ಲ’ ಎಂದರು. ಯಾತ್ರೆಯಲ್ಲಿ ತುಷ್ಟೀ ಕರಣದ ಪ್ರಯತ್ನ ನಡೆಸಲಾಗಿದೆಯೇ ಎಂದು ಸಂಭಿತ್ ಪ್ರಶ್ನಿಸಿದ್ದಾರೆ. ಹಿಂದೂ ವಿರೋಧಿ ಅಭಿಪ್ರಾಯ ವ್ಯಕ್ತಪಡಿಸಿ ದ್ದಕ್ಕೆ ಜಾರ್ಜ್ ಪೊನ್ನಯ್ಯ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು ಎಂದು ಶೆಹಜಾದ್ ಪೂನಾವಾಲಾ ತಿಳಿಸಿದ್ದಾರೆ.
ಕಾಂಗ್ರೆಸ್ ತಿರುಗೇಟು: ಬಿಜೆಪಿಯ ದ್ವೇಷದ ಕಾರ್ಖಾನೆ ರಾಹುಲ್ ವಿರುದ್ಧ ಟ್ವೀಟ್‌ಗಳನ್ನು ಮಾಡಲಾರಂಭಿಸಿದೆ. ಅದಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಹೇಳಿದ್ದಾರೆ. ಇದೇ ವೇಳೆ ಭಾರತ ಜೋಡೋ ಯಾತ್ರೆ ತಮಿಳುನಾಡಿನಿಂದ ಕೇರಳವನ್ನು ಪ್ರವೇಶಿಸಿದೆ. ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರು, ರವಿವಾರ ಯಾತ್ರೆಯನ್ನು ವಿದ್ಯುಕ್ತವಾಗಿ ಸ್ವಾಗತಿಸಲಿದ್ದಾರೆ.
ಯಾರು ಈ ಪಾಸ್ಟರ್?
ಕನ್ಯಾಕುಮಾರಿಯಲ್ಲಿ ಇರುವ ಜನನಯಾಗ ಕ್ರಿಸ್ತವ ಪೆರವೈ ಎಂಬ ಎನ್‌ಜಿಒದ ಮುಖ್ಯಸ್ಥರಾಗಿದ್ದಾರೆ ಜಾರ್ಜ್ ಪೊನ್ನಯ್ಯ. ಕಳೆದ ವರ್ಷದ ಜುಲೈಯಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದರು. ದ್ವೇಷಮಯ ಮಾತುಗಳನ್ನಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ 30ಕ್ಕೂ ಹೆಚ್ಚು ಕೇಸುಗಳು ಅವರ ವಿರುದ್ಧ ದಾಖಲಾಗಿವೆ.
ರಾಹುಲ್ ಬಾಬಾ ಅವರು ಭಾರತವನ್ನು ಜೋಡಿ ಸಲು ಯಾತ್ರೆ ಹಮ್ಮಿಕೊಂಡಿದ್ದೇನೆ ಎನ್ನುತ್ತಾರೆ. ಆದರೆ ದುಬಾರಿ ಬೆಲೆಯ ವಿದೇಶಿ ಟಿ-ಶರ್ಟ್ ಧರಿಸಿ ದೇಶ ಜೋಡಣೆಗೆ ಪಾದಯಾತ್ರೆ ಹೊರಟಿದ್ದಾರೆ. ರಾಹುಲ್ ದೇಶದ ಇತಿಹಾಸ ಓದಿ ತಿಳಿಯಲಿ.
-ಅಮಿತ್ ಶಾ, ಕೇಂದ್ರ ಗೃಹ ಸಚಿವ