Advertisement

ಮಾನವರನ್ನು ಹುಡುಕಿ ಜಗತ್ತಿಗೆ ಬಂದ ಪತಿತ ಪಾವನ ಯೇಸು

11:14 AM Dec 26, 2019 | mahesh |

ಮತ್ತೆ ಕ್ರಿಸ್ತ ಜಯಂತಿ ಬಂದಿದೆ. ಎರಡು ಸಾವಿರ ವರ್ಷಗಳ ಹಿಂದೆ ಮಾನವ ಕುಲಕ್ಕೆ ಈ ಶಾಂತಿ ವಾರ್ತೆ ಹೊಲದಲ್ಲಿ ಕುರಿಗಳನ್ನು ಕಾಯುತ್ತಿ ದ್ದವರಿಗೆ ದೊರಕಿತು. ಲೂಕನು ಬರೆದ ಪ್ರವಾದನ ಗ್ರಂಥದ ಪ್ರಕಾರ, ಕುರಿ ಮಂದೆಯನ್ನು ಕಾಯುತ್ತಿದ್ದ ಕುರು ಬರಿಗೆ ದೇವದೂತನೊಬ್ಬ ಪ್ರತ್ಯಕ್ಷ ನಾಗಿ “ಭಯಪಡಬೇಡಿರಿ, ಇಗೋ ಜನರಿ ಗೆಲ್ಲರಿಗೂ ಪರಮಾನಂದವನ್ನು ತರುವ ಶುಭ ಸಂದೇಶವನ್ನು ತಿಳಿಸುತ್ತೇನೆ’ ಅಂದರು. ಅದುವೇ ದಾವಿದನ ಊರಿನಲ್ಲಿ ನಿಮಗೋಸ್ಕರ ಲೋಕ ಉದ್ಧಾರಕ ಜನಿಸಿದ್ದಾನೆ ಎಂಬ ಶುಭವಾರ್ತೆ. ಆತನೇ ಪ್ರಭು ಕ್ರಿಸ್ತ.

Advertisement

ಮಾನವರನ್ನು ಹುಡುಕಿ ಬಂದ ದೇವರು
ಯೇಸುವಿನ ಜನನದ ಮೂಲದಲ್ಲಿರುವ ತತ್ವ ಪಾಪಿಗಳಾದ ಮಾನವರು ವಿನಾಶಕ್ಕೆ ಒಳಗಾಗಬಾರದು ಎಂಬುದು. ಇದೇ ಉದ್ದೇಶದಿಂದ ದೇವರು ಮಾನವ ರನ್ನು ಹುಡುಕಿಕೊಂಡು ಬಂದನು. ಸಾಧಾರಣವಾಗಿ ಮಾನವರು ದೇವರ ದರ್ಶನಕ್ಕಾಗಿ ಬೇರೆ ಬೇರೆ ಮಾರ್ಗಗಳಿಂದ ಪ್ರಯತ್ನ ಮಾಡುತ್ತಾರೆ. ಆದರೆ ಯೇಸುವಿನ ಜನನದ ವೃತ್ತಾಂತದಲ್ಲಿ ದೇವರೇ ಮಾನವನಾಗಿ ಜನಿಸಿದನು. ಸಾಮಾನ್ಯ ಜನರಾದ ಬಡಗಿ ಯೋಸೇಫ ಮತ್ತು ಮರಿಯ ದಂಪತಿಗಳಲ್ಲಿ ಮಗುವಾಗಿ ಜನಿಸಿದನು.

ಈ ದೇವ ಪ್ರೀತಿಯ ಬಗ್ಗೆ ಯೋಹಾನನು ಹೀಗೆ ಬರೆಯುತ್ತಾನೆ: ದೇವರು ಲೋಕ ವನ್ನು ಎಷ್ಟು ಪ್ರೀತಿಸಿದನೆಂದರೆ ತನ್ನ ಏಕೈಕ ಪುತ್ರನನ್ನೇ ಧಾರೆ ಎರೆದನು. ಲೋಕೋದ್ಧಾರವಾಗಬೇಕೆಂಬುದೇ ಆತನ ಉದ್ದೇಶ ವಾಗಿತ್ತು.

ದೇವರು ಯೇಸುವಿನ ಮೂಲಕ ತನ್ನನ್ನು ಬಡಮಾನವನಾಗಿ ನೀಡಿದ ಪ್ರಯುಕ್ತ ಕ್ರಿಸ್ತ ಜಯಂತಿ ಆಚರಣೆಯಲ್ಲಿ ಕುಸ್ವಾರ್‌ಗಳನ್ನು ತಯಾರಿಸಿ ಇತರರಿಗೆ ಹಂಚುತ್ತೇವೆ. ಕ್ರಿಸ್ತ ಜಯಂತಿಯಲ್ಲಿ ಹಾಡುವ ಕ್ಯಾರಲ್ಸ್‌ ಎಂಬ ಪದವು ಮೂಲ ಗ್ರೀಕ್‌ ಪದವಾದ “ಕೋರಸ್‌’ ಎನ್ನುವ ಪದದಿಂದ ಉದ್ಭವವಾಗಿದೆ. ಇದರ ಅರ್ಥ ನೃತ್ಯ. ಸಾಮಾನ್ಯ ಜನರ ಪ್ರತಿನಿಧಿಗಳಾದ ಕುರುಬರು ದೇವ ಕಂದಮ್ಮನನ್ನು ಹುಡುಕಿದರು ಮತ್ತು ಕಂಡರು, ಆತನಿಗೆ ಎರಗಿದರು. ದೇವರ ಮಹಿಮೆಯನ್ನು ಹಾಡುತ್ತಾ, ಕೊಂಡಾ ಡುತ್ತಾ ಹಿಂದಿರುಗಿದರು.

ಯೇಸು ಹುಟ್ಟುವ ಸಂದರ್ಭದಲ್ಲಿ ಆಗಸದಲ್ಲಿ ವಿಶೇಷ ನಕ್ಷತ್ರವನ್ನು ಕಂಡು ಪೂರ್ವ ದೇಶದ ಜ್ಯೋತಿಷರು ರಾಜ ಕಂದನು ಹುಟ್ಟಿದ್ದಾನೆಂದು ತಿಳಿದು ಆತ ನನ್ನು ಹುಡುಕಿಕೊಂಡು ಬೆತ್ಲಹೇಮಿಗೆ ಬಂದರು. ಅಲ್ಲಿ ಆ ಕಂದನನ್ನು ಕಾಣದೆ ಮುಂದೆ ಆಗಸದಲ್ಲಿ ಕಂಡ ನಕ್ಷತ್ರವು ತೋರಿದ ದಾರಿಯಲ್ಲಿ ಮುಂದುವರಿದರು. ಬೆತ್ಲಹೇಮಿನ ಗೋದಲಿಯ ಬಳಿ ನಿಂತಾಗ ತಾಯಿ ಮರಿಯಳ ಅಪ್ಪುಗೆಯಲ್ಲಿ ಮಲಗಿದ ಬಾಲ ಕಂದನನ್ನು ಕಂಡು ಸಾಷ್ಟಾಂಗ ವೆರಗಿ ಆರಾಧಿಸಿದರು.

Advertisement

ಕ್ರಿಸ್ತ ಜಯಂತಿಯ ಶುಭಾಶಯಗಳು.

ಮತ್ತೂಬ್ಬರಲ್ಲಿ ದೇವರನ್ನು ಕಾಣೋಣ
ಇಂದು ಯೇಸು ಕ್ರಿಸ್ತರ‌ನ್ನು ಎಲ್ಲಿ ಹುಡುಕೋಣ? ಇಂದು ದೇವರ ದರುಶನಕ್ಕಾಗಿ ಮಾನವರು ಬೇರೆ ಬೇರೆ ಪವಿತ್ರ ಸ್ಥಳಗಳಿಗೆ ಭೇಟಿ ಕೊಟ್ಟು ಪರಿಶ್ರಮ ವಹಿಸಿ ದೇವರ ಪ್ರಸನ್ನತೆಯನ್ನು ಅನುಭವಿಸುತ್ತಾರೆ. ಆದರೆ ಒಂದು ವಿಚಾರವನ್ನು ಮರೆಯಕೂಡದು. ಅದೇನೆಂದರೆ ದೇವತನಯನ ಹುಟ್ಟುಹಬ್ಬವನ್ನು ಆಚರಿಸುವಾಗ ಇನ್ನೊಬ್ಬರಲ್ಲಿ ದೇವರನ್ನು ಕಾಣುವ ಸಹೃದಯತೆ ನಮ್ಮದಾಗಲಿ.

ಸುನಿಲ್‌ ಹನ್ಸ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next