Advertisement

Jesus Christ ಆದರ್ಶಗಳು ನಮಗೆ ಮಾರ್ಗದರ್ಶಿ ಬೆಳಕು: ಪ್ರಧಾನಿ ಮೋದಿ

05:44 PM Dec 25, 2023 | Team Udayavani |

ಹೊಸದಿಲ್ಲಿ: ಜೀಸಸ್ ಕ್ರಿಸ್ತನ ಆದರ್ಶಗಳು ನಮಗೆ ಮಾರ್ಗದರ್ಶಿ ಬೆಳಕು ಎಂದು ಪ್ರಧಾನಿ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.

Advertisement

ಸೋಮವಾರ ಡಿ.25 ರಂದು ತಮ್ಮ ನಿವಾಸದಲ್ಲಿ ಕ್ರಿಸ್‌ಮಸ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಯೇಸುಕ್ರಿಸ್ತನ ಜೀವನ ಸಂದೇಶ ಮತ್ತು ದಯೆ ಮತ್ತು ಸೇವೆಯ ಮೌಲ್ಯಗಳನ್ನು ಶ್ಲಾಘಿಸಿದರು.

”ಜೀಸಸ್ ಕ್ರೈಸ್ಟ್ ಎಲ್ಲರಿಗೂ ನ್ಯಾಯವನ್ನು ಹೊಂದಿರುವ ಅಂತರ್ಗತ ಸಮಾಜವನ್ನು ಮಾಡುವಲ್ಲಿ ಕೆಲಸ ಮಾಡಿದರು, ಈ ಆಲೋಚನೆಗಳು ದೇಶದ ಅಭಿವೃದ್ಧಿಗೆ ಮಾರ್ಗದರ್ಶಿ ಬೆಳಕು” ಎಂದರು.

“ಕ್ರಿಸ್ಮಸ್ ನಾವು ಯೇಸುಕ್ರಿಸ್ತನ ಜನ್ಮದಿನವನ್ನು ಆಚರಿಸುವ ದಿನವಾಗಿದ್ದು, ಅವರ ಜೀವನದ ಸಂದೇಶ ಮತ್ತು ಮೌಲ್ಯಗಳನ್ನು ನೆನಪಿಸಿಕೊಳ್ಳುವ ಸಂದರ್ಭ. ಅವರು ದಯೆ ಮತ್ತು ಸೇವೆಯ ಆದರ್ಶಗಳ ಜೀವನ ನಡೆಸಿದರು” ಎಂದರು.

Advertisement

ಕ್ರಿಶ್ಚಿಯನ್ ಸಮುದಾಯದ ಸದಸ್ಯರೊಂದಿಗೆ ಸಂವಾದದಲ್ಲಿ,ಪ್ರಧಾನಿ ಮೋದಿ ಅವರು ತಮ್ಮ ಹಳೆಯ, ನಿಕಟ ಮತ್ತು ಆತ್ಮೀಯ ಸಂಬಂಧಗಳನ್ನು ನೆನಪಿಸಿಕೊಂಡರು. ಬಡವರು ಮತ್ತು ವಂಚಿತರ ಸೇವೆಯಲ್ಲಿ ಕ್ರಿಶ್ಚಿಯನ್ನರು ಯಾವಾಗಲೂ ಮುಂಚೂಣಿಯಲ್ಲಿದ್ದಾರೆ ಎಂದರು.

ಪಿಎಂ ಮೋದಿ ಅವರು ಪೋಪ್ ಅವರನ್ನು ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡು, ಅದು ಸ್ಮರಣೀಯ ಕ್ಷಣವಾಗಿತ್ತು ಎಂದರು. ”ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು, ನಾವು ಸಾಮಾಜಿಕ ಸಾಮರಸ್ಯ, ಜಾಗತಿಕ ಸಹೋದರತ್ವ, ಹವಾಮಾನ ಬದಲಾವಣೆ ಮತ್ತು ಅಂತರ್ಗತ ಅಭಿವೃದ್ಧಿಯಂತಹ ವಿಷಯಗಳನ್ನು ಚರ್ಚಿಸಿದ್ದೇವು” ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next