Advertisement

ಕ್ರೆಡಾೖ ಉಡುಪಿ ಅಧ್ಯಕ್ಷರಾಗಿ ಜೆರ್ರಿ ವಿನ್ಸೆಂಟ್‌ ಡಯಾಸ್‌

03:45 AM Jul 19, 2017 | Harsha Rao |

ಉಡುಪಿ : ಮಾಂಡವಿ ರಿಯಲ್‌ ಎಸ್ಟೇಟ್‌ ಡೆವಲಪರ್ ಆಡಳಿತ ನಿರ್ದೇಶಕ ಡಾ|ಜೆರ್ರಿ ವಿನ್ಸೆಂಟ್‌ ಡಯಾಸ್‌ ಅವರು ಕ್ರೆಡಾೖ ಉಡುಪಿ ವಿಭಾಗದ ಅಧ್ಯಕ್ಷ ರಾಗಿ ಅಧಿಕಾರ ಸ್ವೀಕರಿಸಿದರು. ಹೊಟೇಲ್‌ ಕಿದಿಯೂರ್‌ ಸಭಾಂಗಣ ದಲ್ಲಿ ನಡೆದ ಸಮಾರಂದಲ್ಲಿ ಕ್ರೆಡಾೖ ಕರ್ನಾಟಕದ ಸಭಾಪತಿ ವಿ.ಎಲ್‌. ಜಗದೀಶಬಾಬು ಭಾಗವಹಿಸಿದ್ದರು.

Advertisement

ಕ್ರೆಡಾೖ ದೃಷ್ಟಿಯಲ್ಲಿ ಉಡುಪಿಗೆ ಮಹ ತ್ವದ ಸ್ಥಾನವಿದೆ. ರಿಯಲ್‌ ಎಸ್ಟೇಟ್‌ ವ್ಯಾಪಾರಸ್ಥರು ಪಾರದರ್ಶ ಕತೆ ಮತ್ತು ನೈತಿಕ ಮೌಲ್ಯ ವನ್ನು ಕಾಪಾಡಿ ಕೊಂಡು ಬರಬೇಕು. ಗ್ರಾಹಕರ ಹಿತವೇ ನಮ್ಮ ಮುಖ್ಯ ಧ್ಯೇಯ. ಎಲ್ಲ ನಿರ್ಮಾಣ ಕಾರರು ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸಬೇಕು ಮತ್ತು ಉದ್ಯೋಗ ಸೃಷ್ಟಿಗೆ ಕೊಡುಗೆ ಸಲ್ಲಿಸಬೇಕು ಎಂದು ಜಗದೀಶಬಾಬು ಹೇಳಿದರು.

ಭವಿಷ್ಯದಲ್ಲಿ ಆರ್ಥಿಕ ವ್ಯವಸ್ಥೆಯಲ್ಲಿ ಜಿಎಸ್‌ಟಿ ಪ್ರಮುಖ ಪಾತ್ರ ವಹಿಸಲಿದೆ. ನಾವು ರಾಷ್ಟ್ರ ನಿರ್ಮಾಣಕ್ಕಾಗಿ ಕಾರ್ಪೊ
ರೇಟ್‌ ಸಮುದಾಯ ಹೊಣೆಗಾರಿಕೆ ಯನ್ನು (ಸಿಎಸ್‌ಆರ್‌) ಉತ್ತೇಜಿಸ ಬೇಕಾಗಿದೆ ಎಂದರು.

ಉಡುಪಿಗೆ ಮೂರನೇ ಸ್ಥಾನ ಕ್ರೆಡಾೖ ಬೆಂಗಳೂರಿನಲ್ಲಿ ಆರಂಭ
ವಾಗಿ ದೇಶದ ವಿವಿಧೆಡೆ ಹರಡಿ ಕೊಂಡಿದೆ. ರಿಯಲ್‌ ಎಸ್ಟೇಟ್‌ ವ್ಯವ ಹಾರದಲ್ಲಿ ಉಡುಪಿ ರಾಜ್ಯದಲ್ಲಿ ಮೂರನೆಯ ಸ್ಥಾನದಲ್ಲಿದೆ ಎಂದು ಕ್ರೆಡಾೖ ಕರ್ನಾಟಕದ ಅಧ್ಯಕ್ಷ ಶಂಕರ ಶಾಸಿŒ ಹೇಳಿದರು. 

ಇ ಪೋರ್ಟಲ್‌ ಸಿಸ್ಟಮ್‌, ಹಸುರೀಕರಣದಂತಹ ಯೋಜನೆಗಳನ್ನು ಮುಂದಿನೆರಡು ವರ್ಷಗಳಲ್ಲಿ ಕೈಗೆತ್ತಿ ಕೊಳ್ಳುವುದಾಗಿ ನೂತನ ಕಾರ್ಯದರ್ಶಿ ಜೋಯನ್‌ ಲುವಿಸ್‌ ಪ್ರಕಟಿಸಿದರು. 

Advertisement

ಗ್ರಾಹಕರಿಗೆ ನೆರವಾಗಲೆಂದೇ ನಾವು ಉಡುಪಿ ಬಿಲ್ಡರ್ ಅಸೋಸಿಯೇಶನ್‌ ಆರಂಭಿಸಿದೆವು. ಜಿಎಸ್‌ಟಿ ಕುರಿತು ಅರಿತುಕೊಂಡು ಮುನ್ನಡೆಯಲಿದ್ದೇವೆ ಎಂದು ಜೆರ್ರಿ ವಿನ್ಸೆಂಟ್‌ ಡಯಾಸ್‌ ಹೇಳಿದರು.
ಸಾಯಿರಾಧಾ ಗ್ರೂಪ್‌ನ ಮನೋಹರ ಶೆಟ್ಟಿ ಉಪಾಧ್ಯಕ್ಷರು, ನಿಸಿ ಇನ್‌ಫಿನಿಟಿ ಪ್ರೈ.ಲಿ.ನ ಜೋಯನ್‌
ಲುವಿಸ್‌ ಪ್ರಧಾನ ಕಾರ್ಯದರ್ಶಿ, ಅರ್ಚನಾ ಪ್ರಾಜೆಕ್ಟ್‌ನ ಅಮಿತ್‌ ನಾಯಕ್‌, ನಂದಕುಮಾರ್‌ ಅಸೋಸಿ
ಯೇಟ್ಸ್‌ನ ನಂದಕುಮಾರ್‌ ಜತೆ
ಕಾರ್ಯದರ್ಶಿ, ಕೀರ್ತಿ ಕನ್‌ಸ್ಟ್ರಕ್ಷನ್ಸ್‌ನ
ಸುಧೀರ್‌ ಶೆಟ್ಟಿ ಖಜಾಂಚಿ, ಕಲ್ಕೂರ ಡೆವಲಪರ್ನ ರಂಜನ್‌ ಕಲ್ಕೂರ ಸಾರ್ವ ಜನಿಕ ಸಂಪರ್ಕ ಸಮನ್ವ ಯಕಾರರಾಗಿ ಆಯ್ಕೆಯಾದರು.
ಕ್ರೆಡಾೖ ಲಾಂಛನವನ್ನು ಬಿಡುಗಡೆ ಗೊಳಿಸಲಾಯಿತು. ಕ್ರೆಡಾೖ ಕರ್ನಾ ಟಕದ ಪದಾಧಿಕಾರಿಗಳಾದ ಆಸ್ಟಿನ್‌ ರೋಚ್‌, ಪುಷ್ಪರಾಜ್‌ ಜೈನ್‌, ಹೇಮಂತ್‌, ಮಂಗಳೂರಿನ ಡಿ.ಬಿ. ಮೆಹ¤ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next