Advertisement

ಅಜರ್‌ ವಿರುದ್ಧ ಬಲವಂತದ ನಿರ್ಣಯ ಮಂಡನೆ ಬೇಡ: ಅಮೆರಿಕಕ್ಕೆ ಚೀನ

09:17 AM Mar 29, 2019 | Team Udayavani |

ಬೀಜಿಂಗ್‌ : ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥನಾಗಿರುವ ಮಸೂದ್‌ ಅಜರ್‌ ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ನಿಟ್ಟಿನಲ್ಲಿ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕರಡು ನಿರ್ಣಯವನ್ನು ಬಲವಂತದಿಂದ ಮಂಡಿಸುವುದನ್ನು ತಪ್ಪಿಸಬೇಕು ಮತ್ತು ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಚೀನ ಅಮೆರಿಕಕ್ಕೆ ಹೇಳಿದೆ.

Advertisement

ಸಂವಾದ ಮತ್ತು ಮಾತುಕತೆಯ ಮೂಲಕವೇ ನಿರ್ಣಯವನ್ನು ಮಂಡಿಸುವ ಕ್ರಮಕ್ಕೆ ತಕ್ಕುದಾದ ರೀತಿಯಲ್ಲಿ ಇದು ನಡೆಯುತ್ತಿಲ್ಲ. ಇದರಿಂದಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉಗ್ರ ನಿಗ್ರಹ ಸಮಿತಿಯ ಅಧಿಕಾರ ಕುಗ್ಗುವಂತಾಗಿದೆ. ಭದ್ರತಾ ಮಂಡಳಿಯ ಸದಸ್ಯರಲ್ಲಿನ ಒಗ್ಗಟ್ಟು ಮತ್ತು ಏಕತೆಗೆ ಇದು ಪೂರಕವಾಗಿಲ್ಲ; ಇದರಿಂದಾಗಿ ವಿಷಯವು ಇನ್ನಷ್ಟು ಸಂಕೀರ್ಣಗೊಳ್ಳಲಿದೆ ಎಂದು ಚೀನದ ವಿದೇಶ ಸಚಿವಾಲಯದ ವಕ್ತಾರ ಗೆಂಗ್‌ ಶುವಾಂಗ್‌ ಅವರು ವಾಷಿಂಗ್ಟನ್‌ನಲ್ಲಿ ಸುದ್ದಿ ಗೋಷ್ಠಿಯಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next