Advertisement
ಗೋಕರ್ಣ, ಮುರ್ಡೇಶ್ವರ, ಗಂಗಾವಳಿ ನೀರು ಇನ್ನು ಗೋವಾದ ಬೀಚ್‌ಗಳಲ್ಲಿ ಜೆಲ್ಲಿ ಮೀನುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ. ಇದರಿಂದ ಪ್ರವಾಸಿಗರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಜೆಲ್ಲಿ ಮೀನುಗಳಿರುವ ಪ್ರದೇಶಗಳಲ್ಲಿ ಜನರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಬೀಚ್‌ಗಳಲ್ಲಿ ಪ್ರವಾಸಿಗರು ಎಚ್ಚರಿಕೆ ವಹಿಸುವ ಅಗತ್ಯವಿದೆ.
Related Articles
Advertisement
ಈ ಜೆಲ್ಲಿಫಿಶ್ ಈಜಾಡುವವರಿಗೆ ಮಾತ್ರವಲ್ಲ, ಇದು ಮುಖ್ಯವಾಗಿ ಮೀನಿನ ಮೊಟ್ಟೆಗಳನ್ನು ತಿನ್ನುತ್ತದೆ. ಹೀಗಾಗಿ ಇದರ ಸಂಖ್ಯೆ ಹೆಚ್ಚಿದರೆ ಸಹಜವಾಗಿಯೇ ಮತ್ಯಕ್ಷಾಮ ಉಂಟಾಗುತ್ತದೆ. ಹಾಗೇ ಇದು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರೆ ಮೀನುಗಳು ತಮ್ಮ ಪಥವನ್ನು ಬದಲಿಸಿ ಬೇರೆ ಕಡೆ ತೆರಳುವುದರಿಂದ ಸಹಜವಾಗಿಯೇ ಮೀನುಗಾರರು ನಷ್ಟ ಅನುಭವಿಸಬೇಕಾಗುತ್ತದೆ. ಆದರೆ ಇಂತಹ ಅಪಾಯಕಾರಿ ಜೆಲ್ಲಿಫಿಶ್‌ಗಳನ್ನು ಭಕ್ಷಿಸುವ ಏಕೈಕ ಜೀವಿಯೆಂದರೆ ಅದು ಕಡಲಾಮೆಯಾಗಿದೆ. ಸಮುದ್ರದಲ್ಲಿ ಕಡಲಾಮೆಗಳ ಸಂಖ್ಯೆ ಹೆಚ್ಚಾದರೆ ಇಂತಹ ಜೆಲ್ಲಿಫಿಶ್‌ಗಳ ಸಂಖ್ಯೆ ಕೂಡ ಕ್ಷೀಣಿಸುತ್ತದೆ. ಹೀಗಾಗಿ ಮೀನುಗಾರರು ತಮ್ಮ ಬಲೆಗೆ ಕಡಲಾಮೆ ಸಿಕ್ಕರೂ ಅದನ್ನು ಪುನಃ ನೀರಿಗೆ ಬಿಡುತ್ತಾರೆ. ಹಾಗೇ ಅರಣ್ಯ ಇಲಾಖೆಯವರು ಕೂಡ ಇದರ ಮಹತ್ವವನ್ನು ಅರಿತು ಇದು ಮೊಟ್ಟೆ ಹಾಕಿದ ನಂತರ ಸುತ್ತಲೂ ರಕ್ಷಣಾ ಕವಚ ಹಾಕಿ ಅದು ಮರಿಯಾಗಿ ಹೊರಬಂದ ನಂತರ ಅದನ್ನು ಮತ್ತೆ ಸಮುದ್ರಕ್ಕೆ ಬಿಡುತ್ತಾರೆ. ಕೇವಲ ಒಂದು ತಿಂಗಳಲ್ಲಿ ಕಾರವಾರದಿಂದ ಮುರ್ಡೇಶ್ವರದವರೆಗೆ ಸಾಕಷ್ಟು ಕಡಲಾಮೆಗಳ ಗೂಡುಗಳು ಕಂಡುಬಂದಿದ್ದು, ಅದನ್ನು ಸಂರಕ್ಷಿಸಿ ಮತ್ತೆ ಸಮುದ್ರಕ್ಕೆ ಬಿಡುತ್ತಿದ್ದಾರೆ. ಜೆಲ್ಲಿ ಮೀನುಗಳು ಪ್ರಪಂಚದಾದ್ಯಂತ ಮತ್ತು ಎರಡೂ ಧ್ರುವ ಪ್ರದೇಶಗಳಲ್ಲಿಯೂ ಕಂಡುಬರುತ್ತವೆ. ಜೆಲ್ಲಿ ಮೀನುಗಳು ಮೇಲ್ಮೈ ನೀರಿನಿಂದ ಆಳ ಸಮುದ್ರದವರೆಗೆ ಕಂಡುಬರುತ್ತವೆ. ಸ್ಕೈಫೋಜೋವಾನ್ಸ್ ಉಪ್ಪುನೀರಿನ ಜೆಲ್ಲಿ ಮೀನುಗಳು ಪ್ರತ್ಯೇಕವಾಗಿ ಸಮುದ್ರದಲ್ಲಿವೆ. ಆದರೆ ಹೈಡ್ರೋಜೋವಾದಂತಹ ಜೆಲ್ಲಿ ಮೀನುಗಳು ಸಿಹಿ ನೀರಿನಲ್ಲಿಯೂ ಕಂಡುಬರುತ್ತದೆ. ಇದು ಮನುಷ್ಯನಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
– ಡಾ. ಬಾಬನ್ ಇಂಗೋಲ್ ಹಿರಿಯ ಸಾಗರ ವಿಜ್ಞಾನಿ ನಾಗರಾಜ ಎಂ.