Advertisement

ನಂ.1ನಿಂದ ನಿರ್ಗಮನ

12:38 AM Oct 26, 2019 | Team Udayavani |

ಸಿಯಾಟಲ್‌: ಈ ಭೂಮಿಯ ಅತಿ ಶ್ರೀಮಂತ ವ್ಯಕ್ತಿ ಎಂದೇ ಪರಿಗಣಿಸಲ್ಪಟ್ಟಿದ್ದ ಖ್ಯಾತ ಆನ್‌ಲೈನ್‌ ಮಾರಾಟ ಸಂಸ್ಥೆಯಾದ ಅಮೆಜಾನ್‌ನ ಸಂಸ್ಥಾಪಕ ಜೆಫ್ ಬೆಝೋಸ್‌ ಅವರಿಂದ ಆ ಹೆಗ್ಗಳಿಕೆ ಜಾರಿಹೋಗಿದೆ. ಈಗ, ಅದು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ ಗೇಟ್ಸ್‌ ಪಾಲಾಗಿದೆ. ಅಮೆಜಾನ್‌ನ 3ನೇ ತ್ತೈಮಾಸಿಕದ ವಹಿವಾಟು ವರದಿ ಹೊರಬಿದ್ದಿದ್ದು ಅದರಲ್ಲಿ ಷೇರು ಮೌಲ್ಯ ಶೇ. 7ರಷ್ಟು ಕುಸಿದಿರುವುದು ಬಹಿರಂಗವಾಗಿದೆ. ಹೀಗಾಗಿ, ಬೆಝೋಸ್‌ಗೆ 49,000 ಕೋಟಿ ರೂ. ನಷ್ಟವಾಗಿದೆ. ಇದೀಗ ಅವರ ಆಸ್ತಿ ಮೌಲ್ಯ 7.35 ಲಕ್ಷ ಕೋಟಿ ರೂ.ಗಳಿಗೆ ಇಳಿದಿದೆ. 7.48 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಬಿಲ್‌ಗೇಟ್ಸ್‌ ಸಹಜವಾಗಿ ನಂ. 1 ಪಟ್ಟಕ್ಕೇರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next