Advertisement
ಪ್ರತಿದಿನವೂ ಹೊಸದಾಗಿ ಮೂಡಣದಲ್ಲಿ ಮೂಡಿಬರುವ ನೇಸರನಂತೆ “ಜೀವಯಾನ’ವೂ ದಿನಂಪ್ರತಿಯ ಹೊಸ ಬದುಕಿಗೆ ಖುಷಿ ನೀಡುವ ವಿಚಾರಗಳೊಂದಿಗೆ ಈ ಅಂಕಣ ಮೂಡಿಬರಲಿದೆ.
ಗುರುದೇವಾ, ನನ್ನ ಮಗನಿಗೆ ಸಿಹಿತಿಂಡಿ ತಿನ್ನುವುದು ಚಟದಂತೆ ಆಗಿಬಿಟ್ಟಿದೆ. ದಿನಂಪ್ರತಿ ಸಿಹಿಗಾಗಿ ನನ್ನನ್ನು ಪೀಡಿಸುತ್ತಾನೆ. ಅವನಿಗೆ ಜಿಲೇಬಿ, ಮಿಠಾಯಿ, ಹೋಳಿಗೆ ಕೊಟ್ಟು ಕೊಟ್ಟು ಸಾಕಾಗಿದೆ. ಮೇಲಾಗಿ ನಾನೇನೂ ಸ್ಥಿತಿವಂತಳಲ್ಲ. ಪ್ರತೀ ದಿನ ಇವನಿಗೆ ಸಿಹಿ ತಿಂಡಿ ಕೊಡುವುದೆಲ್ಲಿಂದ? ಅಲ್ಲದೆ ಸಿಹಿ ತಿಂದು ಅವನ ಹಲ್ಲುಗಳೂ ಹಾಳಾಗಿವೆ. ನಾನು ಹೇಳಿದರೆ ಕೇಳುತ್ತಿಲ್ಲ, ನೀವಾದರೂ ಹೇಳಿ ಎಂದಳು ಆಕೆ.
Related Articles
Advertisement
ಎರಡು ವಾರ ಕಳೆದವು. ತಾಯಿ ಮಗನೊಂದಿಗೆ ಮತ್ತೆ ಪರಮಹಂಸರ ಬಳಿ ಬಂದಳು. ಆಗ ಶ್ರೀ ರಾಮಕೃಷ್ಣ ಪರಮ ಹಂಸರು ಹುಡುಗನನ್ನು ವಾತ್ಸಲ್ಯದಿಂದ ಹತ್ತಿರ ಕುಳ್ಳಿರಿಸಿ ಕೊಂಡು ಅತಿಯಾಗಿ ಸಿಹಿ ತಿನ್ನುವುದರಿಂದ ಆಗುವ ತೊಂದರೆ, ಅಮ್ಮನಿಗೆ ಉಂಟಾಗುವ ಕಷ್ಟಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. ಅವರ ಮಾತುಗಳು ಬಾಲಕನ ಹೃದಯಕ್ಕೆ ನಾಟಿದವು. ಇನ್ನು ಮುಂದೆ ದಿನವೂ ಅಮ್ಮನನ್ನು ಸಿಹಿಗಾಗಿ ಪೀಡಿಸುವುದನ್ನು ಬಿಟ್ಟುಬಿಡುತ್ತೇನೆ ಎಂದು ಒಪ್ಪಿಕೊಂಡ ಆತ. ರಾಮಕೃಷ್ಣರು ಅವನನ್ನು ಹರಸಿ, ಆಟವಾಡಲು ಹೊರಕ್ಕೆ ಕಳುಹಿಸಿದರು.
“ನೀವು ಇದನ್ನು ಮೊನ್ನೆಯೇ ಹೇಳಬಹುದಿತ್ತಲ್ಲ ಗುರುದೇವಾ’ ಎಂದು ಮಗ ಹೊರಗೆ ಹೋದ ಮೇಲೆ ಅವನಮ್ಮ ಪ್ರಶ್ನಿಸಿದಳು. ರಾಮಕೃಷ್ಣ ಪರಮಹಂಸರು ಮುಗುಳ್ನಕ್ಕು ಹೇಳಿದರು, “ದಿನವೂ ಸಿಹಿ ತಿನ್ನುವ ಅಭ್ಯಾಸ ನನಗೂ ಇತ್ತು. ಎರಡು ವಾರಗಳ ಹಿಂದೆ ನೀವು ಬಂದಾಗ ಅದೇ ನನಗೆ ಸಮಸ್ಯೆ ಯಾದದ್ದು. ನಾನೇ ಪ್ರತೀ ದಿನ ಸಿಹಿ ತಿನ್ನುವವನಾಗಿ “ನೀನು ತಿನ್ನಬಾರದು’ ಎಂದು ಅವನಿಗೆ ಉಪದೇಶಿಸುವುದು ಹೇಗೆ? ನಮ್ಮ ನಡೆಯೂ ನುಡಿಯೂ ಒಂದೇ ಆಗಿದ್ದಾಗ ಮಾತ್ರ ಮಾತಿಗೆ ಬೆಲೆ. ಆಗ ಮಾತ್ರ ಮಾತು ಪ್ರಾಮಾಣಿಕವಾಗಿರುತ್ತದೆ, ಪರಿಣಾಮ ಬೀರುತ್ತದೆ’ ಎಂದರು ಶ್ರೀ ರಾಮಕೃಷ್ಣರು.