Advertisement

ಖುಷಿ ಖುಷಿಯ ಸಂಬಂಧಗಳ ಬದುಕು

02:17 AM Sep 21, 2020 | Hari Prasad |

ಈ ಬದುಕು ಸಂಬಂಧಗಳದ್ದು. ಪ್ರತಿಯೊಬ್ಬ ಮನುಷ್ಯನಿಗೂ ಸಂಬಂಧಗಳು ಬೇಕು, ಅವು ಚೆನ್ನಾಗಿರಬೇಕು.

Advertisement

ಹೀಗೆ ಮನುಷ್ಯ ಸಂಸಾರ ಜೀವಿ, ಸಮೂಹಜೀವಿ. ನಮ್ಮಲ್ಲಿ ಕೆಲವರು ಮದುವೆಯಾಗದೆ ಇರಬಹುದು, ಸಂಸಾರ ಹೂಡದೆ ಇರಬಹುದು; ಆದರೆ ಅಂಥವರೂ ತಮ್ಮ ಸುತ್ತ ಇರುವ ವಸ್ತುಗಳು, ಜನರು, ಪ್ರಾಣಿಗಳ ಜತೆಗೆ ಸಂಬಂಧ ಹೊಂದಿರುತ್ತಾರೆ.

ಈ ಸಂಬಂಧವನ್ನು ಸದಾಕಾಲ ಚೆನ್ನಾಗಿ ಇರಿಸಿಕೊಳ್ಳುವುದು ಅಥವಾ ಕೆಡಿಸಿಕೊಳ್ಳು ವುದು ನಮ್ಮ ಆಯ್ಕೆಗೆ ಸಂಬಂಧಪಟ್ಟದ್ದು. ನಮಗ್ಯಾರಿಗೂ ನಮ್ಮ ಸುತ್ತಲಿನವರ ಜತೆಗೆ, ಹೆಂಡತಿ ಮಕ್ಕಳ ಜತೆಗೆ, ಅಪ್ಪ – ಅಮ್ಮನೊಂದಿಗೆ ಜಗಳ ಮಾಡಿಕೊಂಡಿರುವುದಕ್ಕೆ ಇಷ್ಟವಿರುವುದಿಲ್ಲ. ಆದರೂ ಕೆಲವೊಮ್ಮೆ ಇದಾಗುತ್ತದೆ. ಅದು ಹೇಗೆ?

ನಮ್ಮ ಅನೇಕ ಸಂಬಂಧಗಳನ್ನು ಗಮನಿಸಿ. ಆರಂಭದಲ್ಲಿ ಚೆನ್ನಾಗಿರುತ್ತೇವೆ. ಬರಬರುತ್ತಾ ಹಳಸಲು ಆರಂಭವಾಗುತ್ತದೆ. ನಮ್ಮ ವೈರಿ ನಮ್ಮ ಜತೆಗೆ ಜಗಳವಾಡಿದರೆ, ಇರಿಯಲು ಬಂದರೆ ಅದು ಸಹಜ. ಆದರೆ ಮನೆಯಲ್ಲಿ ಪತ್ನಿಯ ಜತೆಗೆ, ಗೆಳೆಯನ ಜತೆಗೆ ವಿರಸವಾದರೆ ಅದಕ್ಕೇನು ಕಾರಣ? ಇದಕ್ಕೆ ಮೂಲ ಕಾರಣ ಎಂದರೆ ನಾವು ಸಂಬಂಧಗಳನ್ನು ಬೆಳೆಸಿ ಕೊಳ್ಳುವುದು ಹಾಗೆ ಮಾಡ ಬೇಕು ಎಂಬ ಉದ್ದೇಶದಿಂದ. ಅದು ನಮ್ಮ ಆಯ್ಕೆಯಾಗಿರುವುದಿಲ್ಲ. ಸಂಬಂಧ ಇರಬೇಕು ಎಂಬ ‘ಕಾರಣ’ದಿಂದ ನಾವು ಬೆಳೆಸಿಕೊಳ್ಳುವ ಸಂಬಂಧಗಳು ಬೇಗನೆ ಹಳಸಿಹೋಗುತ್ತವೆ.

ಇದೊಂದು ತರಹ ನುಂಗಲೂ ಆಗದ, ಉಗುಳಲೂ ಆಗದ ಸ್ಥಿತಿ. ನಮಗೆ ವಿರಸ ಮತ್ತು ಸಮರಸಗಳ ನಡುವೆ ಆಯ್ಕೆ ಮಾಡಿಕೊಳ್ಳಲು ಬಂದರೆ ನಾವು ಆಯ್ದುಕೊಳ್ಳುವುದು ಯಾವುದನ್ನು? ಸಮರಸವನ್ನೇ ತಾನೇ? ಆದರೂ ಸಂಬಂಧ ಗಳ ವಿಚಾರದಲ್ಲಿ ವಿರಸ ಯಾಕೆ ಉಂಟಾಗು ತ್ತದೆ? ಅವು ನಮ್ಮ ನಿಯಂತ್ರಣದಲ್ಲಿ ಇಲ್ಲದ್ದ ರಿಂದಲೇ ಹಾಗಾಗುತ್ತದೆ. ನಮ್ಮ ಮನಸ್ಸು, ಭಾವನೆಗಳು, ಶಕ್ತಿ ಮತ್ತು ದೇಹ ಹೀಗೆಯೇ ಇರಬೇಕು ಎಂದು ನಾವು ಬಯಸುವಂತೆ ಇಲ್ಲದ್ದರಿಂದಲೇ ವಿರಸಗಳು ಹುಟ್ಟಿಕೊಳ್ಳುತ್ತವೆ. ಅವು ಬಾಹ್ಯ ಘಟನೆಗಳು, ಸನ್ನಿವೇಶಗಳಿಂದ ನಿಯಂತ್ರಿಸಲ್ಪಡುವುದರಿಂದ ಹಾಗಾಗುತ್ತದೆ. ಹೊರಗಿನ ಘಟನೆಗಳು, ಸನ್ನಿವೇಶಗಳು ನಮ್ಮನ್ನು ನಿಯಂತ್ರಿಸಲು ನಾವು ಬಿಡುತ್ತೇವೆ ಎಂದರೆ ಅದು ಜೀತವೇ ತಾನೇ?

Advertisement

ನಾವು ಏನು, ಯಾರು ಎಂಬ ವಿಚಾರದಲ್ಲಿ ನಮ್ಮೊಳಗೆಯೇ ಒಂದು ಬಗೆಯ ಸ್ವಾತಂತ್ರ್ಯದ ವಾತಾವರಣ ಇದ್ದರೆ ಮಾತ್ರ ಸುಂದರ ಸಂಬಂಧಗಳು ರೂಪು ಗೊಳ್ಳಲು ಸಾಧ್ಯ. ಇಲ್ಲ ವಾದರೆ ಸಮಾಜ ಬಯಸು ತ್ತದೆ ಎಂದೋ, ಇನ್ಯಾರೋ ಹೇಳಿದ್ದಾರೆ ಎಂದೋ ನಾವು ಸಂಬಂಧಗಳನ್ನು ಸ್ಥಾಪಿಸಿಕೊಳ್ಳುತ್ತೇವೆ. ಒತ್ತಾಯವಾಗಿ, ಕಡ್ಡಾಯವಾಗಿ ಸ್ಥಾಪಿಸಿಕೊಂಡ ಸಂಬಂಧಕ್ಕೆ ಅನಿವಾರ್ಯವಾಗಿ ಗಂಟು ಬೀಳುವ ಜೋತು ಬೀಳುವುದಾಗುತ್ತದೆ.

ಸಂಬಂಧಗಳನ್ನು ಹೇಗೆ ಸುಂದರವಾಗಿ ಇರಿಸಿಕೊಳ್ಳಬಹುದು ಎಂಬ ಬಗ್ಗೆ ಸದ್ಗುರು ಒಂದು ಕತೆ ಹೇಳುತ್ತಾರೆ. ಲಾವೊ ತ್ಸು ಎಂಬ ಸಂತ ಮರಣ ಶಯ್ಯೆಯಲ್ಲಿದ್ದಾಗ ಶಿಷ್ಯನೊಬ್ಬ ಕೇಳಿದನಂತೆ, ‘ಗುರುಗಳೇ, ನೀವು ಯಾವತ್ತೂ ಯಾರ ಜತೆಗೂ ಮುನಿಸಿಕೊಂಡದ್ದನ್ನು ನಾನು ಕಂಡಿಲ್ಲ. ಏನಿದರ ರಹಸ್ಯ?’

ಲಾವೊ ತ್ಸು ನಕ್ಕು ಹೇಳಿದರಂತೆ, “ಬೆಳಗ್ಗೆ ಎದ್ದ ಕೂಡಲೇ ನನಗೆ ನಾನೇ ಎರಡು ಆಯ್ಕೆಗಳನ್ನು ಮುಂದಿಟ್ಟುಕೊಳ್ಳುತ್ತೇನೆ – ಒಂದು ಇವತ್ತು ಎಲ್ಲರ ಜತೆಗೆ ಜಗಳ ಮಾಡುತ್ತ ಇರುವುದು; ಇನ್ನೊಂದು ಎಲ್ಲರ ಜತೆಗೆ ಖುಷಿಯಾಗಿ ಇರುವುದು. ಬಳಿಕ ನನಗೆ ನಾನೇ ಎರಡನೆಯದನ್ನು ಆಯ್ದುಕೊಳ್ಳುತ್ತೇನೆ.’ ನಮ್ಮ ಬದುಕು ಕೂಡ ಹೀಗೆಯೇ ಎಲ್ಲರ ಜತೆಗೆ ಲವಲವಿಕೆಯ, ಖುಷಿ ಖುಷಿಯದಾಗಲಿ.

(ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next