ಇವತ್ತಿನ ಬಹುತೇಕ ಎಲ್ಲ ಸಿನೆಮಾ ಗಳಲ್ಲಿಯೂ ಒಬ್ಬರು ಇನ್ನೊಬ್ಬರನ್ನು ಗುಂಡಿಕ್ಕಿ ಕೊಲ್ಲುವ, ಹಾದಿ ಬೀದಿಗಳಲ್ಲಿ ಹೊಡೆದಾಟ ನಡೆಸುವ ದೃಶ್ಯಗಳು ಇದ್ದೇ ಇರುತ್ತವೆ. ಮಕ್ಕಳು ಆಡುವ ವೀಡಿಯೋ ಗೇಮ್‌ಗಳನ್ನು ಗಮನಿಸಿ – ಗುಂಡು ಹಾರಿಸುವ, ಪೆಟ್ಟುಗುಟ್ಟಿನ ಆಟಗಳೇ ಹೆಚ್ಚು. ಯಾವುದಾದರೂ ಗೊಂಬೆ ಅಂಗಡಿಗೆ ಹೋಗಿ ನೋಡಿ – ಅರ್ಧಕ್ಕರ್ಧ ಆಟಿಕೆ ಬಂದೂಕುಗಳು ತುಂಬಿರುತ್ತವೆ. ಯುದ್ಧಗಳು, ಕೊಲೆ, ಬಡಿದಾಟಗಳನ್ನು ನಾವು ರೋಚಕವಾಗಿ ಕನಸು ಕಾಣುತ್ತೇವೆ. ಇಂದು ಜಗತ್ತಿನಲ್ಲಿ ಬಹುತೇಕ ಎಲ್ಲವೂ ಹಿಂಸಾತ್ಮಕವಾಗಿವೆ. ಹಿಂಸಾ ವಿನೋದ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ನಮ್ಮ ಸಂಗೀತ, ನಮ್ಮ ನೃತ್ಯ, ನಮ್ಮ ಸಂಸ್ಕೃತಿ – ನಮ್ಮ ಬದುಕು ಒಳಗೊಳ್ಳುವ ಎಲ್ಲದರಲ್ಲೂ ಹಿಂಸೆಗೆ ಹೆಚ್ಚು ಪ್ರಾಮುಖ್ಯ ಲಭಿಸ ತೊಡಗಿದೆ. ಆಗೊಮ್ಮೆ ಈಗೊಮ್ಮೆ ಅದು ಬೀದಿಯಲ್ಲಿ ಚೆಲ್ಲಾಡಿದರೆ ಅದರಲ್ಲಿ ಅಚ್ಚರಿಪಡುವಂಥದ್ದೇನೂ ಇಲ್ಲ.
ಬಸ್‌ನಲ್ಲಿ ಹೋಗುವಾಗ, ಪಾರ್ಕಿನಲ್ಲಿ ಕುಳಿತಿರುವಾಗ, ಕಚೇರಿಯಲ್ಲಿ ನಿಮ್ಮ ಹತ್ತಿರ ಕುಳಿತವನ ಉಪಸ್ಥಿತಿಯನ್ನು ಇರುವ ಹಾಗೆಯೇ ಎಷ್ಟು ಹೊತ್ತು ಸ್ವೀಕರಿಸಬಲ್ಲಿರಿ ಎಂಬ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಳ್ಳಿ. ಅವನ ಬಗ್ಗೆ ಸಿಟ್ಟಾಗದೆ, ಈಷ್ಯೆì ಪಡದೆ, ಕೆಟ್ಟ ಆಲೋಚನೆ ಮಾಡದೆ ಅವನ ಇರವನ್ನು ಪ್ರಾಂಜಲವಾಗಿ ಎಷ್ಟು ಹೊತ್ತು ಸ್ವೀಕರಿಸ ಬಲ್ಲಿರಿ? ಏನನ್ನೂ ಯೋಚಿಸದೆ ಸುಮ್ಮನಿ ರುವುದು ಬಹಳ ಸ್ವಲ್ಪ ಕಾಲ ಮಾತ್ರ ಸಾಧ್ಯ ನಮಗೆ. ಅವಕಾಶ ಸಿಕ್ಕಿದಾಗೆಲ್ಲ ಮನಸ್ಸಿನ ಒಳಗಿನಿಂದ ಅಸೂಯೆ, ಸಿಟ್ಟು, ಚಡ ಪಡಿಕೆ, ಅಸಹನೆ ಹೊಗೆಯಾಡುತ್ತಲೇ ಇರುತ್ತದೆ. ಹಿಂಸೆ ಅನ್ನುವುದು ನಮ್ಮ ಒಳಗೆಯೇ ಇದೆ, ಅದು ನಮ್ಮ ಅವಿಭಾಜ್ಯ ಅಂಗ. ಇದನ್ನು ನಾವು ಆರಿಸ ಬೇಕು. ಈ ಒಳಗಿನ ಬೆಂಕಿಯನ್ನು ಆರಿಸದೆ ಬೀದಿಯಲ್ಲಿ ಹೊತ್ತಿ ಉರಿಯು ತ್ತಿರುವ ಕಿಚ್ಚನ್ನು ಆರಿಸಲಾಗದು. ಆರಿಸಿದರೂ ಅದು ಆಗಾಗ ಮತ್ತೆ ಭುಗಿಲೇಳುತ್ತಲೇ ಇರುತ್ತದೆ.
ನಮ್ಮೊಳಗೆ ಅಗಾಧ ಶಕ್ತಿ ಸಾಮರ್ಥ್ಯ ಗಳಿವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ಶಕ್ತಿ ಸಾಮರ್ಥ್ಯ ಗಳು ಸರಿಯಾದ ದಾರಿಯಲ್ಲಿ ಹರಿಯಲು ಅವಕಾಶ ಸಿಗದೆ ಇದ್ದರೆ ಅವು ಹಿಂಸಾತ್ಮಕ ಕ್ರಿಯೆಗಳಾಗಿ ಅಭಿವ್ಯಕ್ತಿಗೊಳ್ಳುತ್ತವೆ. ಹಿಂಸಾತ್ಮಕ ಕೃತ್ಯ ಅಂದರೆ ಎಲ್ಲ ಸಂದರ್ಭ ಗಳಲ್ಲಿಯೂ ಕೊಲ್ಲು ವುದು ಎಂದೇ ಅರ್ಥ ವಲ್ಲ. ಕೋಪ ಬರು ವುದು, ಅಸಹನೆ, ಚಡ ಪಡಿಕೆ, ಕಿರಿಕಿರಿ – ಇವೆಲ್ಲವೂ ಹಿಂಸೆಯ ಬಗೆಬಗೆಯ ರೂಪಗಳು. ಇದನ್ನು ಅದರ ಬೇರು ಸಹಿತವಾಗಿ ಕಿತ್ತೂಗೆಯ ದಿದ್ದರೆ ಶಾಂತಿ ನೆಲೆಸುವುದು ಅಸಾಧ್ಯ. ಯೋಗ, ಧ್ಯಾನ, ಪ್ರಾಣಾಯಾಮ ಅಂದರೆ ಬೇರೇನೂ ಅಲ್ಲ, ನಮ್ಮ ಶಕ್ತಿ ಸಾಮರ್ಥ್ಯಗಳಿಗೆ ಸರಿಯಾದ ಅಭಿವ್ಯಕ್ತಿಯ ದಾರಿಯನ್ನು ತೋರಿಸ ುವುದು. ನಾವು ಬದುಕು ಎಂದು ಕರೆ ಯುವ ನಮ್ಮೊಳಗಿನ ಶಕ್ತಿ ಸಾಮರ್ಥ್ಯಗಳ ಅಭಿವ್ಯಕ್ತಿಗೆ ಸರಿಯಾದ ದಾರಿ ಸಿಗದೆ ಇದ್ದಾಗ ಅದು ಸಹಜವಾಗಿ ಹಿಂಸೆಯ ರೂಪದಲ್ಲಿ ಹೊರ ಹೊಮ್ಮುತ್ತವೆ.
ನಮ್ಮ ಒಳಗೆ ಇರುವ ಹಿಂಸೆಯನ್ನು ನಿವಾರಿಸುವ ವೈಯಕ್ತಿಕ ಪರಿವರ್ತನೆಗಾಗಿ ಕೆಲಸ ಮಾಡದೆ ಇದ್ದರೆ ಶಾಂತಿ ಇರು ವುದಿಲ್ಲ. ಇದು ರಸ್ತೆಯ ಮೇಲೆ ಜನರು ಗುಂಪುಗೂಡಿ ಮಾಡುವಂಥದ್ದಲ್ಲ. ನಾವೆಲ್ಲರೂ ವೈಯಕ್ತಿಕ ಮಟ್ಟದಲ್ಲಿ ಈ ಬಗ್ಗೆ ಬದ್ಧತೆಯಿಂದ ಕೆಲಸ ಮಾಡಬೇಕು. ಇದು ಘೋಷಣೆ, ಕ್ರಾಂತಿಯಿಂದ ಸಾಧ್ಯ ವಾಗುವುದಿಲ್ಲ. ನಮ್ಮ ಸಮಾಜದ ಎಲ್ಲ ಹಂತಗಳಲ್ಲಿ ಶಾಂತಿಯಿಂದ ಕೂಡಿದ ಮನುಷ್ಯರನ್ನು ಸೃಷ್ಟಿಸುವ ಕಾರ್ಯ ಜೀವನಪರ್ಯಂತ ನಡೆಯುತ್ತಿರಬೇಕು. ವ್ಯಕ್ತಿ ವ್ಯಕ್ತಿಗಳ ಹೃದಯಗಳನ್ನು ತಿಳಿಗೊಳಿ ಸುವುದು ಸಾಧ್ಯವಾದರೆ ಶಾಂತಿ ಎನ್ನು ವುದು ಸಾಕಾರವಾಗುತ್ತದೆ. ಇದನ್ನು ಸಾಧ್ಯವಾಗಿಸಲು ನಮ್ಮನ್ನು ನಾವು ಅರ್ಪಿಸಿಕೊಂಡರೆ ನಮ್ಮ ಜೀವಿತಾವಧಿಯಲ್ಲೇ ಈ ಭೂಮಿಯ ಮೇಲೆ ಅಭೂತ ಪೂರ್ವವಾದದ್ದು ಘಟಿಸಲು ಸಾಧ್ಯ.
( ಸಾರ ಸಂಗ್ರಹ)