ಹೊಸದಿಲ್ಲಿ: ಭಾರತದ ಮಾರುಕಟ್ಟೆಗೆ ಅಮೆರಿಕದ ಎಸ್‌ಯುವಿ ತಯಾರಿಕೆ ಕಂಪೆನಿ ಜೀಪ್ ಕಾಲಿಟ್ಟು ವರ್ಷವೇ ಕಳೆಯಿತು. ಇದೀಗ ಅದು ಇನ್ನಷ್ಟು ಮಾದರಿಯನ್ನು ಇಲ್ಲಿನ ಮಾರುಕಟ್ಟೆಗೆ ಬಿಡುಗಡೆ ಮಾಡಲು ಉದ್ದೇಶಿಸಿದೆ.
ಜೀಪ್ ಕಂಪಾಸ್ ಸೂಪರ್‌ಹಿಟ್ ಆಗಿದ್ದು, ರ್‍ಯಾಂಗ್ಲರ್ ಸಹರಾ ಜೆಎಲ್ ಮಾದರಿಯನ್ನೂ ಶುಕ್ರವಾರ ಬಿಡುಗಡೆ ಮಾಡಿದೆ. 2017ರಲ್ಲೇ ಇದರ ಮೂಲ ಮಾದರಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಸದ್ಯ ಭಾರತದಲ್ಲಿ ಬಿಡುಗಡೆಯಾಗಿತ್ತು. ಸದ್ಯ ಸುಧಾರಿತ ಆವೃತ್ತಿಯನ್ನು ಭಾರತದಲ್ಲೂ ಬಿಡುಗಡೆಗೊಳಿಸಲಾಗಿದೆ.
5 ಡೋರ್‌ನ ಈ ಎಸ್‌ಯುವಿ ರ್‍ಯಾಂಗ್ಲರ್ ಅನ್‌ಲಿಮಿಟೆಡ್ ಹೆಸರಿನಲ್ಲಿದ್ದು, ಸಂಪೂರ್ಣ ಎಲ್‌ಇಡಿ ಲೈಟ್‌ಗಳು, ಅತ್ಯಾಧುನಿಕ ಡ್ಯಾಶ್‌ಬೋಡ್, 8.4 ಇಂಚಿನ ಟಚ್‌ಸ್ಕ್ರೀನ್ ಇರುವ ಇನ್ಫೋ ಎಂಟರ್‌ಟೈನ್‌ಮೆಂಟ್ ಸಿಸ್ಟಂ, ಲೆದರ್ ಸೀಟುಗಳು, ಸಂಪೂರ್ಣ ಸುರಕ್ಷತೆಗೆ ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಅಷ್ಟೇ ಅಲ್ಲ, 4 ವೀಲ್ ಡ್ರೈವ್ ಲೋ-ಹೈ ಮಾದರಿ ಹೊಂದಿದ್ದು, ಟ್ರಾಕ್ಷನ್ ಕಂಟ್ರೋಲ್ ಕೂಡ ಇದೆ.
8 ಸ್ಪೀಡ್ ಆಟೋಮ್ಯಾಟಿಕ್ ಗಿಯರ್ ಬಾಕ್ಸ್ ಹೊಂದಿದ್ದು, 18 ಇಂಚಿನ ವೀಲ್ ಹೊಂದಿದೆ. 2 ಲೀಟರ್‌ನ ಟರ್ಬೋ ಚಾರ್ಜ್ ಎಂಜಿನ್ ಹೊಂದಿದ್ದು, 285 ಅಶ್ವಶಕ್ತಿ ಹೊಂದಿದೆ. ಇದು 3 ಸಾವಿರ ಆಪ್‌ಪಿಎಂನಲ್ಲಿ 400 ಎನ್.ಎಂ. ಟಾರ್ಕ್ ಉತ್ಪಾದನೆ ಮಾಡುತ್ತದೆ. 215 ಎಂ.ಎಂ. ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಎಂತಹ ಕಠಿನ ರಸ್ತೆ, ಗುಡ್ಡಗಾಡು ಪ್ರದೇಶದಲ್ಲೂ ಸಂಚರಿಸುವ ಸಾಮರ್ಥ್ಯ ಹೊಂದಿದೆ. ದಿಲ್ಲಿಯಲ್ಲಿ ಎಕ್ಸ್‌ಶೋ ರೂಂ ದರ 63.94 ಲಕ್ಷ ರೂ. ಆಗಿದೆ.