Advertisement
ವಾಲ್ಮೀಕಿಯದ್ದಲ್ಲವೆಂದು ಹೇಳಲಾಗುವ ಉತ್ತರ ರಾಮಾಯಣದಲ್ಲಿ ರಾಮ, ಶೂದ್ರ ತಪಸ್ವಿಯಾದ ಶಂಬೂಕನನ್ನು ಕೊಲ್ಲುವ ಕಥೆಯೊಂದಿದೆ. ರಾಮರಾಜ್ಯದಲ್ಲಿ ಬ್ರಾಹ್ಮಣನ ಮಗನೊಬ್ಬ ಅಕಾಲಿಕವಾಗಿ ಮರಣ ಹೊಂದಿ¨ªಾನೆ. ಶೂದ್ರನೊಬ್ಬನು ತಪಸ್ಸು ಮಾಡುತ್ತಿರುವುದೇ ಇಂಥ ಅಪಚಾರವು ರಾಮರಾಜ್ಯದಲ್ಲಿ ಸಂಭವಿಸಿದ್ದಕ್ಕೆ ಕಾರಣವೆಂದು ರಾಮನಿಗೆ ಯಾರೋ ತಿಳಿಸುತ್ತಾರೆ. ಮಂದಿಯ ಮಾತಿಗೆ ಬೆಲೆಕೊಟ್ಟು ಸೀತೆಯನ್ನೇ ಕಾಡಿಗೆ ಕಳಿಸಿದ್ದ ರಾಮ, ಈಗಲೂ ಕಾಡಿಗೆ ತೆರಳಿ ತಪಸ್ಸು ಮಾಡುತ್ತಿರುವ ಶಂಬೂಕನನ್ನು ಕೊಲ್ಲುತ್ತಾನೆ. ರಾಮನ ಕೈಯಿಂದ ದಕ್ಕಿದ ಸಾವೇ ಶಂಬೂಕನ ಬಿಡುಗಡೆಯೆಂದೂ ಶೂದ್ರ ತಪಸ್ವಿಯು ರಾಮನ ಕೈಯಿಂದ ಹತನಾದ ಕೂಡಲೇ ಆತ ದಿವ್ಯಪುರುಷನಾಗಿ ಬದಲಾಗಿ ಶಾಶ್ವತ ಲೋಕಕ್ಕೆ ತೆರಳಿದನೆಂದೂ ಕಥೆ ತಿಳಿಸುತ್ತದೆ.
ಓವೊ ಬಲಗೈಯೆ, ಹಾರುವನ ಸತ್ತ ಮಗನ ಬದುಕಿಸಲು
ತೂರಿಬಿಡು ಕತ್ತಿ ಶೂದ್ರಮುನಿಯತ್ತ |
ನೀನು ರಾಮನ ತೋಳು, ತುಂಬು ಬಸಿರಿಗೆ ನೊಂದ
ಸೀತೆಯನು ತೊರೆದಂಥ ನಿನಗೆಂಥ ಕರುಣೆ ||10||
(ಮತ್ತೆ ರಾಮನ ಕತೆ- ಬನ್ನಂಜೆಯವರ ಅನುವಾದದಲ್ಲಿ)
Related Articles
Advertisement
ಕವಿಯ ಈ ಸೂಕ್ಷ್ಮತೆ ಓದುಗನಿಗೂ ಇದ್ದಾಗ ಮಾತ್ರ ಈ ಮಾತು ಅವನನ್ನು ತಲುಪಬಹುದು, ಇಲ್ಲದಿದ್ದರೆ ಇಲ್ಲ. ತನ್ನ ಓದುಗನಿಗೆ ಇಂಥಾ ಸಹೃದಯತೆ ಇದೆಯೋ ಇಲ್ಲವೋ ತಿಳಿಯುವುದು ಕೂಡ ಕವಿಗೆ ಸಾಧ್ಯವಾಗದೆಯೂ ಹೋಗಬಹುದು. ಆಡಿದ ಮಾತು ತಾನು ತಲುಪಬೇಕಾದಲ್ಲಿ ತಲುಪಿತೋ ಇಲ್ಲವೋ ತಿಳಿಯುವ ಅದೃಷ್ಟವಾದರೂ ಸಿಗುವುದು ಎಎಲ್ಲೋ ಕೆಲವರಿಗೆ ಮಾತ್ರ. ಈ ಕುರಿತು ಭವಭೂತಿಯೇ ಆಡಿದ ಮಾತೊಂದಿದೆಯಂತೆ. ಅದರಲ್ಲಿ ಕವಿ ಹೇಳುತ್ತಾನೆ: “ನಾನು ಆಡಿದ್ದನ್ನು ಅರಿಯುವ ಸಹೃದಯಿಯೊಬ್ಬ ನನಗೆ ಸಿಕ್ಕೇ ಸಿಗುತ್ತಾನೆ. ಅಂಥವನು ಇಲ್ಲಿಲ್ಲದಿದ್ದರೆ ಮತ್ತೆಲ್ಲಾದರೂ ಇರಬಹುದು, ಈಗಲ್ಲದಿ¨ªಾರೆ ಮುಂದೆ ಇನ್ನೆಂದಾದರೂ ಬರಬಹುದು. ಯಾಕೆಂದರೆ ಭೂಮಿ ವಿಸ್ತಾರವಾಗಿದೆ, ಕಾಲ ಅನಂತವಾಗಿದೆ’ ಇಂಥ ಅದ್ಭುತ ನಿರಾಳತೆಯೊಂದು ಹುಟ್ಟಲು ಕವಿಯ ಮನ ಒಂದೋ ಅತೀವ ವಿಶ್ವಾಸದಲ್ಲಿ ಅಥವಾ ಘೋರ ಸಂದೇಹದಲ್ಲಿ ಸಿಲುಕಿ¨ªಾಗಿರಬೇಕೇನೋ! ಈ ಆತಂಕ ಕೇವಲ ಕವಿಗಷ್ಟೇ ಅಲ್ಲ, ಆ ಕಾಲಕ್ಕೆ ಹೊಸತು’ ಎಂಬ ಯೋಚನೆಯೊಂದು ಮೂಡುವ ಎಲ್ಲ ಮನಗಳದ್ದೂ ಕೂಡ. ಆದರೆ ಯಾವುದೇ ವಿಚಾರವೊಂದು ಯಾರದೋ ಮನದಲ್ಲಿ ಬಂತೆಂದರೆ ಆ ಕಾಲ ಅದನ್ನು ಆಗಮಾಡಿದೆ ಎಂದೇ ಅರ್ಥ ಎನಿಸುತ್ತಿದೆ. ಅದನ್ನು ಅರ್ಥ ಮಾಡಿಕೊಳ್ಳುವವರು ಆ ಕಾಲದಲ್ಲೇ ಇದ್ದಾರೆ ಆದರೆ ಅವರು ಸಿಗುತ್ತಾರೋ ಇಲ್ಲವೋ ಎನ್ನುವುದು ಸಂದೇಹ. ಮಾತಿಗೆ ಕೇಳುವ ಕಿವಿಯೊಂದು ಬೇಕು, ಅರಿತು ಮಿಡಿಯುವ ಮನವೊಂದು ಬೇಕು. ಸಿಕ್ಕರೆ ಸರಿ, ಸಿಗದಿದ್ದರೂ ಮನದಲ್ಲಿ ಮೂಡಿದ ಮಾತು, ಹೊರಬರಲೇ ಬೇಕು.
ಪ್ರಕ್ಷಿಪ್ತ ಬರೆದ ಕವಿಯ ಮನದಲ್ಲೂ ಆದ ಎಲ್ಲ ಅನಾಹುತಗಳ ಕುರಿತು ಹೇವರಿಕೆ ಇದೆ. ರಾಮನಿಗೆ ಲವ-ಕುಶರು ದೊರೆತು, ಸೀತೆಯನ್ನು ರಾಮ ಕ್ಷಮಿಸುವಂತೆ ಕೇಳಿಕೊಂಡ ಮೇಲೂ ರಾಮನ ಜೊತೆಗೆ ನಡೆದು ಬಿಡಲು ಸೀತೆ ಒಪ್ಪುವುದಿಲ್ಲ. ರಾಮನ ಮೇಲಿನ ಪ್ರೀತಿ ಅವಳೆದೆಯಲ್ಲಿ ಈಗಲೂ ಜೀವಂತ. ಪ್ರೀತಿ ಕಡಲಿನ ಹಾಗೆ. ಅಲ್ಲಿ ಮುತ್ತುರತ್ನವೂ ಇದೆ, ಬೆಂಕಿಯುಗುಳುವ ಜ್ವಾಲಾಮುಖೀಯೂ ಇದೆ. ಕಳೆದುಕೊಂಡವರೆಲ್ಲರೂ ಮತ್ತೆ ಒಬ್ಬರಿಗೊಬ್ಬರು ಸಿಕ್ಕಿ, ಸಮಾಗಮವಾಗಿ ಅಯೋಧ್ಯಗೆ ತೆರಳಿ ನೆಮ್ಮದಿಯಿಂದ “ಕಡೆಗೆ ಎಲ್ಲರೂ ಸುಖವಾಗಿದ್ದರು’ ಎಂದು ಕವಿ ಕತೆಯನ್ನು ಮುಗಿಸಿಬಿಡದೆ, ಸೀತೆ ರಾಮನಿಗೆ ಬೆನ್ನು ಹಾಕಿ ನಡೆದು ತನ್ನ ತಾಯಿಯ ಮಡಿಲಿನಲ್ಲಿ ಸೇರಿಹೋದಳು ಎನ್ನುತಾನೆ. ಜನಪದದ ಮನದಲ್ಲಿ ರಾಮ ಕಡೆಗೆ ನದಿಯಲ್ಲಿ ಹಾರಿಕೊಂಡು ಸಾಯುತ್ತಾನೆ.
ಎಲ್ಲಾ ಕಾಲದಲ್ಲೂ ಇಂಥ ಸೂಕ್ಷ್ಮಗಳಿಗೆ ಮಿಡಿಯುವ ಮನವೊಂದು ಜನಪದದ ಹೃದಯದಾಳದಲ್ಲೆಲ್ಲೋ ಹುದುಗಿರುತ್ತದೆ ಎಂಬ ನಂಬಿಕೆಗೆ, ಇಂಥಾ ಕತೆಗಳ ನೂರಾರು ಸಾವಿರಾರು ರೂಪಗಳು ಕಾಲಾಂತರಗಳಲ್ಲಿ ಒಂದನ್ನೊಂದು ಆತುಕೊಂಡು ಬಿಡದೆ ಸಾಗಿಬರುವುದೇ ಸಾಕ್ಷಿ. ಬದುಕಿನ ಅಸಂಗತತೆ, ಪ್ರೀತಿಯ ತಲ್ಲಣಗಳು, ಮಾನವ ಜೀವನ ಏಕಕಾಲಕ್ಕೆ ಕ್ಷುಲ್ಲಕವೂ ಮಹತ್ತೂ ಆಗಿ ತೋರುವ ವಿಸ್ಮಯ ಇದಾವುದನ್ನೂ ಗಮನಿಸದೆ, ಇದನ್ನು ಕೇವಲ ರಾಮನ ದೌರ್ಬಲ್ಯವೆಂದೋ ಸೀತೆಯಂಥಾ ಹೆಣ್ಣುಗಳ ಕಣ್ಣೀರ ಕಥೆಯೆಂದೋ ಗಂಡಸರ ಅಹಂಕಾರ-ಹೆಂಗಸರ ಕಷ್ಟ ಎಂದೋ ಗುರುತಿಸ ಹೊರಟಾಗ ಮಾತ್ರ, ಮಾತಿನ ಸೂಕ್ಷ್ಮಾತಿಸೂಕ್ಷ್ಮ ತಿಳುವಳಿಕೆಗಳೆಲ್ಲ ಮೊಂಡಾಗಿ ಅದು ಸುಮ್ಮನೆ ದಣಿಯುವಂತಾಗುತ್ತದೆ.
ಕಾಲವನ್ನೇ ಜೀಕಿ, ಜೋಕಾಲಿಯಾಡುತ್ತ ಜನಪದದ ಬೆರಗು, ಅರಿವು ಮಾತಿನ ಮೂಲಕವೇ ತನ್ನತ್ತ ಸುಯ್ದು ಬರುವಾಗ ಅದು ಪಿಸುಗುಡುವ ಇನ್ಯಾವುದೋ ಗುಟ್ಟೊಂದಕ್ಕೆ ಕಿವಿಗೊಡುವ ಮನಸ್ಸು, ಸೂಕ್ಷ್ಮತೆೆ ಸದಾ ಕಾಲವೂ ಸಹೃದಯನಿಗಿರಲಿ. ಕೇಳುಗನ ಮನದಾಳದ ಈ ಆದ್ರìತೆ ಮಾತನ್ನು ಎಂದೂ ಬಿಡದೆ ಪೊರೆದಿರಲಿ.
– ಮೀರಾ ಪಿ. ಆರ್., ನ್ಯೂಜೆರ್ಸಿ