ಹೊಸದಿಲ್ಲಿ : ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ)ವು ಜೆಇಇ ಮೈನ್ ಪೇಪರ್ 2 ಫೆಬ್ರವರಿ ಪರೀಕ್ಷೆಯ ಫಲಿತಾಂಶವನ್ನು ಗುರುವಾರ ಪ್ರಕಟಿಸಿದೆ. ಫಲಿತಾಂಶದ ಜತೆಗೆ ಅಂತಿಮ ಆನ್ಸರ್ ಕೀಗಳನ್ನೂ ಪ್ರಕಟಿಸಲಾಗಿದೆ. ಜೆಇಇ ಮೈನ್ ಫೆಬ್ರವರಿ ಆವೃತ್ತಿಗೆ ಹಾಜರಾದ ಅಭ್ಯರ್ಥಿಗಳು
jeemain.nta.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ಮತ್ತು ಆನ್ಸರ್ ಕೀಗಳನ್ನು ವೀಕ್ಷಿಸಬಹುದು.
ವಿಮಾಕ್ಷೇತ್ರ: ಶೇ. 74 ಎಫ್ಡಿಐಗೆ ಗರಿಷ್ಠ ಮಿತಿ ಮಾತ್ರ
ಹೊಸದಿಲ್ಲಿ: ವಿಮಾ ಕಂಪೆನಿಗಳಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕೆ (ಎಫ್ಡಿಐ)ಗೆ ವಿಧಿಸಲಾಗಿರುವ ಶೇ. 74ರ ಮಿತಿಯು ಕಡ್ಡಾಯವಲ್ಲ, ಅದು ಗರಿಷ್ಠ ಮಿತಿ ಮಾತ್ರ ಎಂಬುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಹೇಳಿದ್ದಾರೆ.
ಗರಿಷ್ಠ ಮಿತಿಯನ್ನು ಹೆಚ್ಚಿಸಲಾಗಿದೆ ಎಂದರೆ ಎಲ್ಲ ವಿಮಾ ಕಂಪೆನಿಗಳಿಗೆ ಅಲ್ಲಿಯ ವರೆಗೆ ಎಫ್ಡಿಐ ಇರುತ್ತದೆ ಎಂದಲ್ಲ. ಪ್ರತೀ ವಿಮಾ ಕಂಪೆನಿಯೂ ತಮಗೆಷ್ಟು ಬೇಕು ಎಂಬುದನ್ನು ನಿರ್ಧರಿಸಿಕೊಳ್ಳಬಹುದು ಎಂದು ನಿರ್ಮಲಾ ಸ್ಪಷ್ಟಪಡಿಸಿದ್ದಾರೆ. ಆದರೆ ಶೇ. 74ರ ಗರಿಷ್ಠ ಮಿತಿಯನ್ನು ಮೀರುವಂತಿಲ್ಲ ಎಂದಿದ್ದಾರೆ. ವಿಮಾ ಕ್ಷೇತ್ರದಲ್ಲಿ ಎಫ್ಡಿಐ ಹೆಚ್ಚಿಸುವ ವಿಮಾ (ತಿದ್ದುಪಡಿ) ಮಸೂದೆ -2021ನ್ನು ರಾಜ್ಯಸಭೆ ಗುರುವಾರ ಅಂಗೀಕರಿಸಿದೆ.