Advertisement

ಜೆಇಇ ಮೈನ್ಸ್‌ ಪರೀಕ್ಷಾ ಫ‌ಲಿತಾಂಶ ಪ್ರಕಟ; ಹೊಸ ದಾಖಲೆ

06:49 PM Aug 08, 2022 | Team Udayavani |

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ನಡೆಸುವ “ಜೆಇಇ- ಮೈನ್ಸ್‌’ ಪರೀಕ್ಷೆಯ ಫ‌ಲಿತಾಂಶ ಹೊರಬಿದ್ದಿದ್ದು, 24 ವಿದ್ಯಾರ್ಥಿಗಳು ಶೇ. 100ರಷ್ಟು ಅಂಕಗಳನ್ನು ಪಡೆದಿದ್ದಾರೆ. ಇವರಲ್ಲಿ ಕರ್ನಾಟಕದ ಅಭ್ಯರ್ಥಿ ಬೋಯ ಹರ್‌ಸೇನ್‌ ಸಾತ್ವಿಕ್‌ ಕೂಡ ಒಬ್ಬರು.

Advertisement

ಜೆಇಇ-ಮೈನ್ಸ್‌ ಇತಿಹಾಸದಲ್ಲಿ ಇಷ್ಟು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪರಿಪೂರ್ಣ ಅಂಕಗಳನ್ನು ಪಡೆದಿರುವುದು ಇದೇ ಮೊದಲು. ಇನ್ನುಳಿದಂತೆ, ಆಂಧ್ರಪ್ರದೇಶ ಹಾಗೂ ತೆಲಂಗಾಣದ 5, ರಾಜಸ್ಥಾನದ 4, ಉತ್ತರ ಪ್ರದೇಶದ ಇಬ್ಬರು ಹಾಗೂ ಮಹಾರಾಷ್ಟ್ರ, ಅಸ್ಸಾಂ, ಬಿಹಾರ, ಪಂಜಾಬ್‌, ಕೇರಳ, ಜಾರ್ಖಂಡ್‌ನ‌ ತಲಾ ಒಬ್ಬರು ಅಭ್ಯರ್ಥಿ ಶೇ. 100ರಷ್ಟು ಅಂಕಗಳನ್ನು ಪಡೆದಿದ್ದಾರೆ.

10.26 ಲಕ್ಷ ಮಂದಿ ವಿದ್ಯಾರ್ಥಿಗಳು ಜೆಇಇ-ಮೈನ್ಸ್‌ನ ಎರಡೂ ಪರೀಕ್ಷೆಗಳಿಗೆ ನೋಂದಾಯಿಸಿಕೊಂಡಿದ್ದರೂ, 9.05 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 4.04 ಲಕ್ಷ ಮಂದಿ ಎರಡೂ ಪರೀಕ್ಷೆಗೆ ಹಾಜರಾಗಿದ್ದರು ಎಂದು ಎನ್‌ಟಿಎ ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next