ಬೆಂಗಳೂರು: ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜು ಗಳು ಹಾಗೂ ಐಐಟಿ ಪ್ರವೇಶ ಕ್ಕಾಗಿ ನಡೆಸುವ ಜೆಇಇ ಮುಖ್ಯ ಪರೀಕ್ಷೆ-2022 (ಸೆಷನ್-2) ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರಿನ ವಿದ್ಯಾರ್ಥಿ ಬೋಯಾ ಹರೇನ್ ಸಾತ್ವಿಕ್ ರಾಜ್ಯದ ಟಾಪರ್ ಆಗಿದ್ದಾರೆ.
ಸಾತ್ವಿಕ್ ರಾಷ್ಟ್ರ ಮಟ್ಟದಲ್ಲಿ 10ನೇ ರ್‍ಯಾಂಕ್ ಪಡೆದಿದ್ದು, ರಾಜ್ಯದಲ್ಲಿ ಶೇ. 100 ಅಂಕ ಪಡೆದಿರುವ ಏಕೈಕ ವಿದ್ಯಾರ್ಥಿಯಾಗಿದ್ದಾನೆ. ಸಾತ್ವಿಕ್ ಜೆಇಇ ಮೇನ್ಸ್- 1ರಲ್ಲಿ ಕೂಡ ಮೊದಲ ರ್‍ಯಾಂಕ್ ಪಡೆದಿದ್ದ 14 ವಿದ್ಯಾರ್ಥಿಗಳಲ್ಲಿ ಒಬ್ಬನಾಗಿದ್ದ.
ಸಾತ್ವಿಕ್ ಸಹಕಾರ ನಗರದಲ್ಲಿರುವ ನಾರಾಯಣ ಕೋ-ಸಿಂಧುಭವನ ಶಾಲೆಯ ವಿದ್ಯಾರ್ಥಿ. ಇವರ ಜತೆಗೆ ಇದೇ ಶಾಲೆಯ ಮಹೇಶ್‌ಕುಮಾರ್ ವಿ. ರಾಷ್ಟ್ರಮಟ್ಟದಲ್ಲಿ 47ನೇ ರ್‍ಯಾಂಕ್ ಪಡೆದಿದ್ದು ಹಾಗೂ ರಾಜ್ಯಕ್ಕೆ 2ನೇ ರ್‍ಯಾಂಕ್ ಪಡೆದಿದ್ದಾನೆ. ಶಿಶಿರ್ ಆರ್.ಕೆ. ರಾಷ್ಟ್ರ ಮಟ್ಟದಲ್ಲಿ 56ನೇ ರ್‍ಯಾಂಕ್ ಪಡೆದಿದ್ದಾರೆ. ಈ ಮೂವರೂ ವಿದ್ಯಾರ್ಥಿಗಳು ಬಾಂಬೆ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡಬೇಕೆಂಬ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.
ಸಾತ್ವಿಕ್‌ನ ಪೋಷಕರು ಮೂಲತಃ ಆಂಧ್ರಪ್ರದೇಶದ ಹಿಂದೂಪುರ ದವರಾಗಿದ್ದು, ಅವರ ತಂದೆ ದೈಹಿಕ ಶಿಕ್ಷಣ ಶಿಕ್ಷಕರಾಗಿ¨ªಾರೆ ಮತ್ತು ತಾಯಿ ಹಿಂದೂಪುರದ ಶಾಲೆಯಲ್ಲಿ ಜೀವಶಾಸ್ತ್ರ ಸಹಾಯಕರಾಗಿ¨ªಾರೆ.
ಸಿಬಿಎಸ್‌ಇ 12ನೇ ತರಗತಿಯಲ್ಲಿ ಶೇ.95ರಷ್ಟು ಅಂಕ ಪಡೆದಿದ್ದು, ಸಿಬಿಎಸ್‌ಇ 2ನೇ ಅವಧಿಯ ಪರೀಕ್ಷಾ ಫಲಿತಾಂಶಕ್ಕೆ ಕಾಯುತ್ತಿದ್ದೇನೆ. ಓದಿನ ಜತೆಗೆ ಒತ್ತಡ ನಿವಾರಣೆಗಾಗಿ ಕ್ರಿಕೆಟ್ ಮತ್ತು ಸಂಗೀತ ಆಲಿಸುವುದು ನನ್ನ ಹವ್ಯಾಸ. ಇಂಡಿ ಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.
ಶಿಶಿರ್ ಆರ್.ಕೆ. ಕೆ-ಸಿಇಟಿ ಬಿ. ಫಾರ್ಮಾದಲ್ಲಿ ಮೊದಲ ರ್‍ಯಾಂಕ್ ಹಾಗೂ ಎಂಜಿನಿಯರಿಂಗ್‌ನಲ್ಲಿ 4ನೇ ರ್‍ಯಾಂಕ್ ಪಡೆದಿದ್ದಾನೆ. ಈತ ಕೂಡ ಬಾಂಬೆ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಕಲಿಯುವ ಹಂಬಲ ವ್ಯಕ್ತಪಡಿಸಿದ್ದಾರೆ.