ನವದೆಹಲಿ : ಕೇಸರಿ ಪಕ್ಷ ತನ್ನ ಮಾಜಿ ಮಿತ್ರಪಕ್ಷದ ವಿವಿಧ ಘಟಕಗಳ ಸದಸ್ಯರನ್ನು ಓಲೈಸುವುದನ್ನು ಮುಂದುವರೆಸಿದ್ದು, ದಾದ್ರಾ ನಗರ ಹವೇಲಿ, ದಮನ್ ಮತ್ತು ದಿಯುವಿನ ಒಂದು ಡಜನ್‌ಗೂ ಹೆಚ್ಚು ಜೆಡಿಯು ನಾಯಕರು ಭಾನುವಾರ ಔಪಚಾರಿಕವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.
ಇದನ್ನೂ ಓದಿ: ಗುಜರಾತ್ ಚುನಾವಣೆ: ಆಪ್, ಬಿಜೆಪಿ ವಾಗ್ವಾದ
ಜೆಡಿಯು ಮುಖಂಡರು ಮತ್ತು ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ನಿತೀಶ್ ಕುಮಾರ್ ಅವರು ಮೈತ್ರಿ ಕಡಿದುಕೊಂಡ ನಂತರ ಮತ್ತು ಬಿಹಾರದಲ್ಲಿ ಮಹಾಘಟಬಂಧನ್ 2.0 ಸರ್ಕಾರವನ್ನು ರಚಿಸಲು ಆರ್‌ಜೆಡಿಯೊಂದಿಗೆ ಕೈ ಜೋಡಿಸಿದ ನಂತರ ಜೆಡಿಯು ನಾಯಕರ ಬಿಜೆಪಿಗೆ ಸೇರ್ಪಡೆ ಮುಂದುವರಿದಿದೆ. ಇದಕ್ಕೂ ಮುನ್ನ ಮಣಿಪುರ ಮತ್ತು ಅರುಣಾಚಲ ಪ್ರದೇಶ ಘಟಕಗಳ ಜೆಡಿಯು ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಕೇಂದ್ರಾಡಳಿತ ಪ್ರದೇಶದ 16 ಜೆಡಿಯು ನಾಯಕರು ಭಾನುವಾರ ತಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಹೇಳಿದ್ದಾರೆ.