Advertisement

ಪುರಸಭೆ ಚುನಾವಣೆಗೆ ಜೆಡಿಎಸ್‌ ತಾಲೀಮು

11:21 AM May 05, 2019 | Team Udayavani |

ನವಲಗುಂದ: ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆ ನಿಮಿತ್ತ ಜೆಡಿಎಸ್‌ ನಗರ ಘಟಕದ ಸಭೆ ಪಕ್ಷದ ಕಚೇರಿಯಲ್ಲಿ ನಡೆಯಿತು.

Advertisement

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್‌.ಎಚ್. ಕೋನರಡ್ಡಿ ಮಾತನಾಡಿ, ಈ ಬಾರಿ ನವಲಗುಂದ ಪುರಸಭೆಯಲ್ಲಿ ಜೆಡಿಎಸ್‌ ವಿಜಯ ಪತಾಕೆ ಹಾರಿಸಲೇಬೇಕಿದೆ. ಪಟ್ಟಣ ಅಭಿವೃದ್ಧಿ ಪಡಿಸುವವರು ಪುರಸಭೆ ಸದಸ್ಯರಾಗಬೇಕು ಎಂದು ಹೇಳಿದರು.

ಸಮ್ಮಿಶ್ರ ಸರಕಾರದ ಅವಧಿಯಲ್ಲಿ ನವಲಗುಂದ ಪುರಸಭೆಯನ್ನು ಇಡೀ ರಾಜ್ಯಕ್ಕೆ ಮಾದರಿಯಾಗಿಸಲು ಜೆಡಿಎಸ್‌ ಕಂಕಣಬದ್ಧವಾಗಿದೆ. ಪಟ್ಟಣದ ಹಾಗೂ ಬಡವರ ಅಭಿವೃದ್ಧಿ ಚಿಂತನೆ ಮಾಡುವ ಸದಸ್ಯರನ್ನು ಪುರಸಭೆಗೆ ಆಯ್ಕೆ ಮಾಡಲು ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ವತಿಯಿಂದ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳಿಗೆ ಪಟ್ಟಣದ ಜನತೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧ್ಯಕ್ಷ ಬಿ.ಬಿ. ಗಂಗಾಧರಮಠ ಮಾತನಾಡಿ, ಈ ಹಿಂದೆ ನವಲಗುಂದ ಕ್ಷೇತ್ರದ ಶಾಸಕರಾಗಿದ್ದ ಎನ್‌.ಎಚ್. ಕೋನರಡ್ಡಿ ಅವರು ತಮ್ಮ ಅವಧಿಯಲ್ಲಿ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕೈಗೊಂಡಿದ್ದಾರೆ. ಹೈಟೆಕ್‌ ಬಸ್‌ನಿಲ್ದಾಣ, ಬಸವೇಶ್ವರ ನಗರದಲ್ಲಿ ದ್ವಿಪಥ ರಸ್ತೆ, ನವಲಗುಂದ-ಹಳ್ಳಿಕೇರಿ ರಸ್ತೆ ನಿರ್ಮಾಣ, ನೀಲಮ್ಮನ ಕೆರೆಯಿಂದ ಐಬಿ ವರೆಗೆ ದ್ವಿಪಥ ರಸ್ತೆ, ವಸತಿ ರಹಿತರಿಗೆ ಆಶ್ರಯ ಯೋಜನೆಯಡಿ ಒಟ್ಟು 1200 ಕುಟುಂಬಗಳಿಗೆ ಸೂರು ಒದಗಿಸುವ ಯೋಜನೆ, ಸಿದ್ಧರಾಮೇಶ್ವರ ನಗರ ಸಮಗಾರ ಸಮಾಜಕ್ಕೆ 45 ಲಕ್ಷ ಸಮುದಾಯ ಭವನ, ಜಮಖಾನದಾರ ಓಣಿಯಲ್ಲಿ ಹನುಮಂತ ದೇವರ ಸಮುದಾಯ ಭವನ, ಮಂಜುನಾಥ ನಗರ ಸಮುದಾಯ ಭವನಕ್ಕೆ 60 ಲಕ್ಷ ನೀಡಲಾಗಿದೆ ಎಂದು ವಿವರಿಸಿದರು.

ತಾಲೂಕಾಧ್ಯಕ್ಷ ವೀರಣ್ಣ ನೀರಲಗಿ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶಿವಲೀಲಾ ಬೋರಶೆಟ್ಟರ, ನಗರ ಘಟಕದ ಅಧ್ಯಕ್ಷ ದೇವೇಂದ್ರಪ್ಪ ಹಳ್ಳದ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ಟಾಸ ದೇವರಿಡು, ಎಪಿಎಂಸಿ ಸದಸ್ಯ ದ್ಯಾಮಣ್ಣ ಹೊನಕುದರಿ, ಕಾರ್ಯಾಧ್ಯಕ್ಷ ಸೈಫುದ್ದಿನ್‌ ಅವರಾದಿ, ಪ್ರಧಾನ ಕಾರ್ಯದರ್ಶಿ ಆನಂದ ಹವಳಕೋಡ, ಪುರಸಭೆ ಮಾಜಿ ಅಧ್ಯಕ್ಷ ಜೀವನ ಪವಾರ, ಪ್ರಕಾಶ ಶಿಗ್ಲಿ, ಕಾಶೀಮ್‌ಸಾಬ್‌ ಅಲ್ಲಿಬಾಯಿ, ಶರಣು ಹಿರೇಮಠ, ಶೇಖಪ್ಪ ಗೊಂದಳೆ, ಆರೂಢಪ್ಪ ಕಾತರಕಿ, ಅಪ್ಪಣ್ಣಾ ನದಾಫ, ಮೈಲಾರಪ್ಪ ವೈದ್ಯ, ನಂದಿನಿ ಹಾದಿಮನಿ, ಮಲ್ಲವ್ವಾ ತೋಟದ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next