Advertisement

ಜೆಡಿಎಸ್ ಫೀನಿಕ್ಸ್ ನಂತೆ ಎದ್ದು ಬರಲಿದೆ: ಟಿ.ಎ.ಶರವಣ

05:05 PM Nov 02, 2021 | Team Udayavani |

ಬೆಂಗಳುರು: ಪ್ರಸ್ತುತ ಸಿಂಧಗಿ ಮತ್ತು ಹಾನಗಲ್ ಉಪಚುನಾವಣೆಯಲ್ಲಿ ಜನ ಕೊಟ್ಟ ತೀರ್ಪನ್ನು ತಲೆ ಬಾಗಿ ಸ್ವೀಕರಿಸುತ್ತೇವೆ. ಪ್ರಜಾಸತ್ತೆಯಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು, ಅವರ ಕೃಪೆಗೆ ಪಾತ್ರವಾಗುವ ನಮ್ಮ ಪ್ರಯತ್ನ ಅವಿರತವಾಗಿ ಮುಂದುವರೆಯಲಿದೆ ಎಂದು ಜೆಡಿಎಸ್ ಹಿರಿಯ ನಾಯಕ ಟಿ.ಎ.ಶರವಣ ಹೇಳಿದ್ದಾರೆ.

Advertisement

ಅಪ್ಪಟ ಪ್ರಾದೇಶಿಕ ಒಲವು, ನಿಲುವಿನ ಜೊತೆ ಜೆಡಿಎಸ್ ತನ್ನ ಹೋರಾಟವನ್ನು ನಿರಂತರವಾಗಿ ಮುಂದುವರೆಸಲಿದೆ. ಸೈದ್ಧಾಂತಿಕವಾಗಿ ಯೂ ತನ್ನ ಜಾತ್ಯತೀತ ತತ್ವ ಸಿದ್ದಾಂತಕ್ಕೆ ಬದ್ಧವಾಗಿದೆ ಎಂದು ಶರವಣ ಹೇಳಿದ್ದಾರೆ.

ಈ ಚುನಾವಣೆ ಸೋಲಿನಿಂದ ಧೃತಿಗೆಡುವ ಅಗತ್ಯವಿಲ್ಲ. ಇದು ಉಪಚುನಾವಣೆ. ಆಡಳಿತ ಪಕ್ಷ ಬಿಜೆಪಿ, ಮತ್ತು ಕಾಂಗ್ರೆಸ್ ಹಣಬಲ, ಅಧಿಕಾರ ಬಲದ ರಾಜಕೀಯ ಮಾಡಿದ್ದು ಗೊತ್ತೇ ಇದೆ. ಅಂತಹ ಅನೈತಿಕ ರಾಜಕಾರಣದಲ್ಲಿ ಜೆಡಿಎಸ್ ನಂಬಿಕೆ ಇಲ್ಲ. ನಮ್ಮದೇನಿದ್ದರೂ ಜನಪರ ಎಂದು ಶರವಣ ವಿಶ್ಲೇಷಿಸಿದ್ದಾರೆ.

ಎರಡು ಕ್ಷೇತ್ರಗಳ ಫಲಿತಾಂಶ ಮುಂದಿಟ್ಟು ಪಕ್ಷದ ಸಾಮರ್ಥ್ಯ ಅಳೆಯಲು ಸಾಧ್ಯವಿಲ್ಲ. ಬರುವ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ , ಬಿಜೆಪಿ ಬಣ್ಣ ಬಯಲಾಗಲಿದ್ದು, ನಿಶ್ಚಿತವಾಗಿ ಜನ ನಮ್ಮ ಜತೆ ಬರುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ದ್ವೇಷ, ಜಾತಿ-ಧರ್ಮದ ರಾಜಕಾರಣ ಬಹಳ ದಿನ ನಡೆಯಲ್ಲ: ಶೋಭಾ ಕರಂದ್ಲಾಜೆ

Advertisement

ಜೆಡಿಎಸ್ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ನ ಜನದ್ರೋಹಿ ರಾಜಕಾರಣ ಮೀರಿ, ಪ್ರಾದೇಶಿಕ ಶಕ್ತಿಯಾಗಿ ಜನ ಮನ್ನಣೆ ಪಡೆದು, ಫೀನಿಕ್ಸ್ ಪಕ್ಷಿಯಂತೆ ಎದ್ದು ಬರಲಿದೆ ಎಂದು ಆಶಾಭಾವನೆ ವ್ಯಕ್ತ ಪಡಿಸಿದ್ದಾರೆ.

ತಮ್ಮ ಬಗ್ಗೆ ತಪ್ಪು ಭಾವನೆ ಬರುವಂತೆ ಕಾಂಗ್ರೆಸ್ ಮತ್ತು ಬಿಜೆಪಿ ಅಪಪ್ರಚಾರ ಮಾಡಿದ್ದೂ ಕೂಡ ತಮ್ಮ ಪಕ್ಷದ ಹಿನ್ನಡೆಗೆ ಕಾರಣ ಎಂದಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next