Advertisement

ಜೀವ ನದಿ ಉಳಿಸಲು ಜೆಡಿಎಸ್‌ ಸನ್ನದ್ಧ

02:57 PM Apr 18, 2022 | Team Udayavani |

ಮೂಡಿಗೆರೆ: ರಾಜ್ಯದಲ್ಲಿ ಉಗಮವಾಗುವ ಜೀವನದಿಯ ನೀರು ಸರಿಯಾದ ಪ್ರಮಾಣದಲ್ಲಿ ಬಳಕೆಯಾಗದೇ ಇರುವುದರಿಂದ ನೀರಿನ ಅಭಾವ ಸೃಷ್ಟಿಯಾಗಿದೆ. ಇದರಿಂದ ನೀರಾವರಿಗೆ ಇನ್ನಷ್ಟು ತೊಂದರೆಯಾಗಿದೆ. ಹಾಗಾಗಿ ಜೀವನದಿಯನ್ನು ಉಳಿಸಲುವ ಸಲುವಾಗಿ ಜೆಡಿಎಸ್‌ ಸನ್ನದ್ಧವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.

Advertisement

ಶನಿವಾರ ತಾಲೂಕಿನ ಗೋಣಿಬೀಡು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಜೆಡಿಎಸ್‌ ಜನತಾ ಜಲದಾರೆ ರಥ ಜಾಲನೆಗೆ ಪೂಜೆ ನಡೆಸಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ರಾಜ್ಯದ ಜೀವನದಿಗಳಿಂದ ನೀರು ಪೋಲಾಗುತ್ತಿರುವ ಬಗ್ಗೆ ಮನಗಂಡು ನದಿಗಳನ್ನು ಉಳಿಸಿ ರೈತರು ಮಾತ್ರವಲ್ಲ ಎಲ್ಲಾ ಕಾರ್ಯಗಳಿಗೆ ಉಪಯೋಗವಾಗಲು ನದಿಗಳನ್ನು ಉಳಿಸಲು ಜನತಾ ಜಲಧಾರೆ ಕಾರ್ಯಕ್ರಮ ರಾಜ್ಯಾದ್ಯಂತ ನಡೆಸುತ್ತಿದ್ದಾರೆ. ನಮ್ಮ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮುಂದಿನ ಚುನಾವಣೆಯಲ್ಲಿ 5 ವರ್ಷ ಅವಧಿ ಆಡಳಿತ ನಡೆಸಲು ಜನರು ಅವಕಾಶ ನೀಡಿದರೆ ರಾಜ್ಯದ ಎಲ್ಲಾ ನದಿ ಹಾಗೂ ಉಪ ನದಿಗಳನ್ನು ಉಳಿಸಿ ಹಸಿರು ಕ್ರಾಂತಿ ಮಾಡಲಾಗುವುದು. ಇಲ್ಲವಾದರೆ ಜೆಡಿಎಸ್‌ ಪಕ್ಷವನ್ನೇ ವಿಸರ್ಜಿಸಲಾಗುವುದು ಎಂದು ಹೇಳಿದ್ದಾರೆ. ಅವರು ಮಾತಿಗೆ ತಪ್ಪುವುದಿಲ್ಲ. ಹಾಗಾಗಿ ಮುಂದಿನ ಅವಧಿಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಲು ಜನತೆ ಅವಕಾಶ ಕೊಡಬೇಕೆಂದು ಮನವಿ ಮಾಡಿದರು.

ಮಾಜಿ ಸಚಿವ ಬಿ.ಬಿ. ನಿಂಗಯ್ಯ ಮಾತನಾಡಿ, ರಾಜ್ಯದಲ್ಲಿ 15 ನದಿ ಹಾಗೂ ನೂರಾರು ಉಪನದಿಗಳಿವೆ. ಅವುಗಳಿಂದ ಶೇ.25 ರಷ್ಟು ಮಾತ್ರ ನೀರು ಬಳಕೆಯಾದರೆ, ಶೇ.75ರಷ್ಟು ನೀರು ವ್ಯರ್ಥವಾಗುತ್ತಿದೆ. ನದಿಗಳ ನೀರು ಎಲ್ಲೂ ವ್ಯರ್ಥವಾಗಬಾರದು. ನದಿ ನೀರು ಸಮಸ್ತ ಜನರಿಗೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ರಾಜ್ಯಾಧ್ಯಂತ ಜನತಾ ಜಲದಾರೆ ರಥದ ಮೂಲಕ ಜನರಿಗೆ ಅರಿವು ಮೂಡಿಸುವ ಸಲುವಾಗಿ ಇಂದಿನಿಂದ ಪ್ರವಾಸ ಪ್ರಾರಂಭಿಸುತ್ತವೆ ಎಂದು ಮಾಹಿತಿ ನೀಡಿದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ರಂಜನ್‌ ಅಜಿತ್‌ ಕುಮಾರ್‌, ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ. ಸುರೇಶ್‌, ಹೋಬಳಿ ಅಧ್ಯಕ್ಷ ಪ್ರಹ್ಲಾದ್‌, ಮುಖಂಡರಾದ ಬಿ.ಎಂ. ತಿಮ್ಮೇಗೌಡ, ಗಬ್ಬಳ್ಳಿ ಚಂದ್ರೇಗೌಡ, ಬಿ.ಎಂ.ಭೈರೇಗೌಡ, ಮಂಡಿ ಜಯರಾಂ ಗೌಡ, ಸುರೇಶ್‌ ಹಂತೂರು, ಪ್ರೇಮ್‌, ದೇವಿಪ್ರಸಾದ್‌, ಮಂಜಪ್ಪ, ರಾಮೇಗೌಡ ವಾಲಕರಟಿ, ಅಶೋಕ್‌ಗೌಡ, ಲೋಹಿತ್‌, ಜ್ಯೋತಿ ವಿಠಲ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next