Advertisement

ಒಂದೂ ದಿನ ಪ್ರಚಾರ ಮಾಡದೆ ಗೆಲ್ಲುವೆ​​​​​​​

06:05 AM Apr 15, 2018 | Team Udayavani |

ಮೈಸೂರು: “ನಾನು ಒಂದೂ ದಿನ ಪ್ರಚಾರ ಮಾಡದೆ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಗೆಲ್ಲಬಲ್ಲೆ’ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ.

Advertisement

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಅವರು ಭರ್ಜರಿ ರೋಡ್‌ ಶೋ ನಡೆಸಿ, ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ಪರ ಮತಯಾಚಿಸಿದರು. “ಒಂದು ದಿನ ಅವರ ಕ್ಷೇತ್ರದಲ್ಲಿ ಪ್ರವಾಸ ಮಾಡಿದರೆ ಕುಮಾರಸ್ವಾಮಿಯನ್ನು ಸೋಲಿಸಬಲ್ಲೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, “ನಾನು ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಿಗೆ ಒಂದು ದಿನವೂ ಪ್ರಚಾರಕ್ಕೆ ಹೋಗುವುದಿಲ್ಲ. ಸಿದ್ದರಾಮಯ್ಯ ಬೇಕಿದ್ದರೆ ಅಲ್ಲಿ ಒಂದು ತಿಂಗಳು ಇದ್ದು ಪ್ರಚಾರ ಮಾಡಲಿ, ಯಾರು ಗೆಲ್ಲುತ್ತಾರೆ ನೋಡೋಣ. ನಾನು ಕಿಂಗ್‌ ಮೇಕರ್‌ ಆಗಲ್ಲ. ನನ್ನನ್ನು ಕಿಂಗ್‌ ಮಾಡಲು ರಾಜ್ಯದ ಜನತೆ ತೀರ್ಮಾನಿಸಿದ್ದಾರೆ’ ಎಂದು ಸವಾಲು ಹಾಕಿದರು.

ಇಂಡಿಯಾ ಟುಡೇ ಸಮೀಕ್ಷೆ ಬಗ್ಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್‌ ಅಮಿನ್‌ಮಟ್ಟು ಅವರು ಇಂಡಿಯಾ ಟುಡೇಯವರ ಜತೆ ಕುಳಿತು ಯಾವ ರೀತಿ ಸಮೀಕ್ಷೆ ನಡೆಸಿದ್ದಾರೆಂಬ ಮಾಹಿತಿ ನನ್ನ ಬಳಿಯಿದೆ. ಸಮೀಕ್ಷೆಯಲ್ಲಿ ನಮ್ಮ ಪಕ್ಷಕ್ಕೆ ನೀಡಿರುವ ಸ್ಥಾನಗಳ ಬಗ್ಗೆ ನನ್ನ ತಕರಾರಿಲ್ಲ. ಆದರೆ, ನಿಮಗೆ ಸ್ಪಾÂಂಪ್‌ ಪೇಪರ್‌ ಮೇಲೆ ಬರೆದುಕೊಡಲು ಸಿದ್ಧನಿದ್ದೇನೆ. ಜೆಡಿಎಸ್‌ 100 ಸ್ಥಾನ ಗಳಿಸಿದರೆ, ಕಾಂಗ್ರೆಸ್‌ 40 ಸ್ಥಾನಗಳಿಗೆ ಕುಸಿಯಲಿದೆ. 2004ರ ಚುನಾವಣೆಯಲ್ಲಿ ಯಾವ ಸಮೀಕ್ಷೆಗಳೂ ನಮ್ಮ ಪಕ್ಷದ ಹೆಸರನ್ನು ಹೇಳದೆ, ಕೇವಲ ಎರಡು ಸ್ಥಾನಗಳಿಗೆ ಸೀಮಿತಗೊಳಿಸಿದ್ದವು. ಆದರೆ, ಆ ಚುನಾವಣೆಯಲ್ಲಿ ಜೆಡಿಎಸ್‌ 52 ಸ್ಥಾನ ಗಳಿಸಿತ್ತು ಎಂದರು.

ಭರ್ಜರಿ ರೋಡ್‌ ಶೋ
ಬೆಳಗ್ಗೆ 11ಕ್ಕೆ ಹಿನಕಲ್‌ಗೆ ಆಗಮಿಸಿದ ಕುಮಾರಸ್ವಾಮಿ, ಗ್ರಾಮದ ಶ್ರೀನನ್ನೇಶ್ವರ ಸ್ವಾಮಿ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಕುಮಾರಪರ್ವ ಯಾತ್ರೆಗಾಗಿ ಸಿದ್ಧಪಡಿಸಿರುವ ವಿಕಾಸ ವಾಹಿನಿಯನ್ನು ಏರಿದರು. ನಂತರ ಕೋಟೆ ಹುಂಡಿ, ದಾರಿಪುರ, ಬರಡನಪುರ, ಹಾರೋಹಳ್ಳಿ, ಗುಜ್ಜೆàಗೌಡನಪುರ, ಮಂಡನಹಳ್ಳಿ, ಮದ್ದೂರು ಹುಂಡಿ, ಮದ್ದೂರು, ಚುಂಚರಾಯನ ಹುಂಡಿ, ಎಸ್‌.ಕಲ್ಲಹಳ್ಳಿ ಗ್ರಾಮಗಳಲ್ಲಿ ರೋಡ್‌ ಶೋ ನಡೆಸಿ, ಜಿ.ಟಿ.ದೇವೇಗೌಡರ ಪರ ಮತಯಾಚನೆ ಮಾಡಿದರು.

ಮೈಸೂರು ಸೇರಿ ರಾಜ್ಯದ ನಾಲ್ಕು ಕಡೆಗಳಲ್ಲಿ ಚುನಾವಣಾ ಪ್ರಚಾರಕ್ಕೆ ಬಿಎಸ್‌ಪಿ ವರಿಷ್ಠರಾದ ಮಾಯಾವತಿ ಬರುತ್ತಾರೆ. ಹಾಗೆಯೇ, ತೆಲುಗು ಕನ್ನಡಿಗರ ಮತ ಕ್ರೋಢೀಕರಣಕ್ಕಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್‌ ಅವರನ್ನು ಪ್ರಚಾರಕ್ಕೆ ಕರೆತರಲಾಗುವುದು.
– ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ.

Advertisement
Advertisement

Udayavani is now on Telegram. Click here to join our channel and stay updated with the latest news.

Next