Advertisement

ಕೆಎಂಎಫ್ ನಿರ್ದೇಶಕ ಸ್ಥಾನ ಜೆಡಿಎಸ್‌ ಪಾಲು

05:10 AM Jun 03, 2020 | Lakshmi GovindaRaj |

ಮಂಡ್ಯ: ಜಿಲ್ಲಾ ಹಾಲು ಒಕ್ಕೂಟದಿಂದ ಕೆಎಂಎಫ್ ನಿರ್ದೇಶಕ ಸ್ಥಾನಕ್ಕೆ ಜೆಡಿಎಸ್‌ ಬೆಂಬಲಿತ ನಿರ್ದೇಶಕ ವಿ.ಎಂ.ವಿಶ್ವನಾಥ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಣದ ಮೇಲಾಟ, ಬಿಜೆಪಿ ಆಂತರಿಕ ಕಲಹದ ಪರಿಣಾಮ ಚುನಾವ  ಣೆಯೇ ನಡೆಯದೇ ವಿ.ಎಂ.ವಿಶ್ವನಾಥ್‌ ನಿರ್ದೇಶಕ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಹಾಲು ಒಕ್ಕೂಟದಲ್ಲಿ ಜೆಡಿಎಸ್‌-7, ಕಾಂಗ್ರೆಸ್‌-3, ಬಿಜೆಪಿ-1, ಪಕ್ಷೇತರ-1 ಹಾಗೂ ಮೂವರು ಸರ್ಕಾರದ ನಾಮನಿರ್ದೇಶಿತ  ನಿರ್ದೇಶಕರು ಇದ್ದಾರೆ.

Advertisement

ಒಕ್ಕೂಟದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ ಕಾಂಗ್ರೆಸ್‌ ನಿರ್ದೇಶಕರ ಬೆಂಬಲ ಪಡೆದು ಕೊಂಡರೂ ಅಧ್ಯಕ್ಷ ಸ್ಥಾನ ಅಲಂಕರಿಸುವಲ್ಲಿ ಬಿಜೆಪಿ ಎಡವಿಬಿದ್ದಿತ್ತು. ಅದೇ ರೀತಿ ಕೆಎಂಎಫ್  ನಿರ್ದೇಶಕ ಸ್ಥಾನವನ್ನೂ ಜೆಡಿಎಸ್‌ ವಶಕ್ಕೆ ಒಪ್ಪಿಸಿ ಬಿಜೆಪಿ ಮುಖಭಂಗಕ್ಕೆ ಒಳಗಾಗಿದೆ. ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಎಸ್‌.ಪಿ.ಸ್ವಾಮಿ ಅಧ್ಯಕ್ಷ ಸ್ಥಾನ  ಅಲಂಕರಿಸುವ ಕನಸು ಕಂಡಿದ್ದರು. ಅದಕ್ಕಾಗಿ ಬಿಜೆಪಿ ಪಕ್ಷ ಸೇರಿ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರು, ಮೂವರು ಸರ್ಕಾರದ ನಾಮ ನಿರ್ದೇಶಿತ ಸದಸ್ಯರು, ಓರ್ವ ಬಿಜೆಪಿ ಬೆಂಬಲಿತ ಅಭ್ಯರ್ಥಿಯೊಂದಿಗೆ 8 ಮತ ಗಳನ್ನು ಪಡೆದು ವಿಜಯ  ಸಾಧಿಸುವ ಲೆಕ್ಕಾಚಾರ ದಲ್ಲಿದ್ದರು.

ಜೆಡಿಎಸ್‌ ರಣತಂತ್ರ: ಚುನಾವಣೆ ದಿನ ಜೆಡಿ ಎಸ್‌ ರಣತಂತ್ರ ರೂಪಿಸಿ ಬಿಜೆಪಿ ಅಭ್ಯರ್ಥಿ ವಿರು ದಟಛಿ ನಾಮನಿರ್ದೇಶಿತ ನಿರ್ದೇಶಕರೊಬ್ಬರು ಮತ ಚಲಾಯಿಸುವಂತೆ ಮಾಡಿದ್ದರು. ಪರಿಣಾಮ ಜೆಡಿಎಸ್‌ ಅಧ್ಯಕ್ಷ-ಉಪಾಧ್ಯಕ್ಷ ಪಟ್ಟ  ಅಲಂಕರಿಸಿತ್ತು. ಆ ಸಮಯದಲ್ಲಿ ಸ್ವಾಮಿ ಅವರನ್ನು ಚುನಾವ ಣೆಯಲ್ಲಿ ಬೆಂಬಲಿಸಿದರೆ ಕೆಎಂಎಫ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡುವುದಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗೆದ್ದಿದ್ದ ರೂಪಾಗೆ ವರಿಷ್ಠರು ಭರವಸೆ ನೀಡಿದ್ದರು.  ಅದರಂತೆ ಕೆಎಂಎಫ್ ನಿರ್ದೇಶಕ ಸ್ಥಾನಕ್ಕೆ ರೂಪಾ ಅವರನ್ನೇ ಕಣಕ್ಕಿಳಿಸಿ ಗೆಲ್ಲಿಸಲು ಬಿಜೆಪಿ ನಿರ್ಧರಿಸಿದ್ದು, ನಾಮ ಪತ್ರ ಸಲ್ಲಿಸುವಂತೆ ರೂಪಾ ಅವರನ್ನು ಸಂಪರ್ಕಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯ ಣಗೌಡರು  ತ್ನಿಸಿದ್ದರು ಎಂದು ತಿಳಿದು ಬಂದಿದೆ.

ಸ್ಪರ್ಧಿಸದಂತೆ ಸೂಚನೆ: ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವಿಗೆ ಸಹಕರಿ ಸಿದ್ದ ಜೆಡಿಎಸ್‌ ಶಾಸಕ ಡಿ.ಸಿ.ತಮ್ಮಣ್ಣ ಅವರ ನಿಷ್ಠೆ ಯಲ್ಲಿ ಬಿಜೆಪಿ ಬೆಂಬಲಿತ ನಿರ್ದೇಶಕಿ ರೂಪಾ ಇದ್ದರೆಂಬ ಮಾತುಗಳು  ಕೇಳಿಬಂದಿವೆ. ಚುನಾವ ಣೆಗೆ ಸ್ಪರ್ಧಿಸದಂತೆ ಶಾಸಕ ತಮ್ಮಣ್ಣ ಪರೋಕ್ಷವಾಗಿ ರೂಪಾಗೆ ಸೂಚನೆ ನೀಡಿದ್ದರಿಂದ ಸ್ಪರ್ಧೆಗೆ ಹಿಂದೇಟು ಹಾಕಿದ್ದರೆನ್ನಲಾಗಿದೆ. ರೂಪಾ ಕೆಎಂಎಫ್ ನಿರ್ದೇಶಕ ಸ್ಥಾನಕ್ಕೆ ಉತ್ಸಾಹ ತೋರಿ ದ್ದರೆ, ವರಿಷ್ಠರು  ಇದನ್ನು ಗಂಭೀರವಾಗಿ ಪರಿಗಣಿಸಿ ದ್ದರೆ ಆ ಹುದ್ದೆಯನ್ನು ಬಿಜೆಪಿ ಅಲಂಕರಿಸಲು ಅವ ಕಾಶವಿತ್ತು. ಕೆಎಂಎಫ್ ನಿರ್ದೇಶಕ ಸ್ಥಾನವನ್ನು ಪ್ರತಿಷ್ಠೆಯಾಗಿ ಬಿಜೆಪಿ ಪರಿಗಣಿಸಲಿಲ್ಲವಾದ್ದರಿಂದ ವಿಶ್ವನಾಥ್‌ ಸುಲಭವಾಗಿ ಹುದ್ದೆಗೇರಿದರು.

Advertisement

Udayavani is now on Telegram. Click here to join our channel and stay updated with the latest news.

Next