Advertisement

ಕಾಯಂ ಪೌರಾಯುಕ್ತರ ನೇಮಕಕ್ಕೆ ಒತ್ತಾಯಿಸಿ ಜೆಡಿಎಸ್‌ ಪ್ರತಿಭಟನೆ

03:35 PM Jul 08, 2022 | Team Udayavani |

ಶಹಾಬಾದ: ನಗರಸಭೆಯಲ್ಲಿ ಪ್ರಭಾರಿ ಪೌರಾ ಯುಕ್ತರ ಬದಲಿಗೆ ಕಾಯಂ ಪೌರಾಯುಕ್ತರನ್ನು ನಿಯೋಜಿಸಬೇಕೆಂದು ಒತ್ತಾಯಿಸಿ ಜೆಡಿಎಸ್‌ ವತಿಯಿಂದ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ್‌ ಮಾತನಾಡಿ, ನಗರಸಭೆಗೆ ಕಾಯಂ ಪೌರಾಯುಕ್ತರನ್ನು ನೇಮಕಗೊಳಿಸದ ಕಾರಣ ಪ್ರಭಾರ ಪೌರಾಯುಕ್ತರಾಗಿ ಕಲಬುರಗಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಸವರಾಜ ಹೆಬ್ಟಾಳ ಅವರನ್ನು ನಿಯೋಜಿಸಲಾಗಿದೆ. ಕಳೆದ ಎರಡು ತಿಂಗಳಿನಿಂದ ಅವರು ಪ್ರಭಾರಿ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಪ್ರತಿದಿನ ನಗರಸಭೆಗೆ ಬರುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಖಾತೆ ಬದಲಾವಣೆ ಸೇರಿದಂತೆ ಇನ್ನಿತರ ಸಾರ್ವಜನಿಕರ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗದ ಕಾರಣ ಸಾರ್ವಜನಿಕರು ಪ್ರತಿದಿನ ಪರದಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ಪ್ರಭಾರ ಪೌರಾಯುಕ್ತರನ್ನು ಬದಲಾಯಿಸಿ ಕಾಯಂ ಆಗಿ ನಿಯೋಜಿಸುವಂತೆ ಒತ್ತಾಯಿಸಿದರು.

ಜಿಲ್ಲಾ ಯುವ ಘಟಕ ಅಧ್ಯಕ್ಷ ಮಹ್ಮದ್‌ ಅಲಿಂ ಇನಾಮದಾರ್‌ ಮಾತನಾಡಿ, ನಗರಸಭೆಯಲ್ಲಿ ಕಾಯಂ ಪೌರಾಯುಕ್ತರಿಗೆ ನೇಮಕ ಮಾಡಿದರೇ ಸಾರ್ವಜನಿಕರ ಕೆಲಸಗಳು ಸರಳವಾಗಿ ಆಗುತ್ತವೆ. ಆದರೆ ಶಾಸಕರು ಕಾಯಂ ಪೌರಾಯುಕ್ತರನ್ನು ನೇಮಿಸದೇ ತಮ್ಮ ಸಂಬಂಧಿಕ ಬಸವರಾಜ ಹೆಬ್ಟಾಳ ಅವರನ್ನು ಪ್ರಭಾರಿ ಪೌರಾಯುಕ್ತರನ್ನಾಗಿ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಾರ್ಡ್‌ ನಂ.23ರಲ್ಲಿ ಕಳಪೆ ಕಾಮಗಾರಿಗಳಾಗಿವೆ. ಹಣವಿಲ್ಲದೇ ಖಾತಾ ಹಾಗೂ ಮುಟೇಷನ್‌ ತೆಗೆದುಕೊಳ್ಳುವಂತಿಲ್ಲ. ನಗರಸಭೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಆದ್ದರಿಂದ ಕಾಯಂ ಪೌರಾಯುಕ್ತರನ್ನು ನೇಮಿಸಬೇಕು. ಇದಕ್ಕೆ ಸ್ಪಂದಿಸದಿದ್ದರೆ ಶಾಸಕರ ಮನೆ ಮುಂದೆ ಮತ್ತು ಜಿಲ್ಲಾ ಕೇಂದ್ರದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

Advertisement

ನಂತರ ಗ್ರೇಡ್‌-2 ತಹಶೀಲ್ದಾರ್‌ ಗುರುರಾಜ ಸಂಗಾವಿ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜೆಡಿಎಸ್‌ ಅಧ್ಯಕ್ಷ ರಾಜಮಹ್ಮದ ರಾಜಾ, ಮಹಾ ಪ್ರಧಾನಕಾರ್ಯದರ್ಶಿ ಬಸವರಾಜ ಮಯೂರ, ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಅಧ್ಯಕ್ಷ ಮಲ್ಲಿಕಾರ್ಜುನ ಸಂಗಾಣಿ, ಮಲ್ಲಿಕಾರ್ಜುನ ಹಳ್ಳಿ, ನಗರಸಭೆ ಸದಸ್ಯ ಅಮ್ಜದ್‌ ಹುಸೇನ್‌, ಶ್ರೀನಿವಾಸ ಜಮಾದಾರ, ಸುಭಾಷ ಸಾಕರೆ, ಸುನೀಲ ಚವ್ಹಾಣ, ವಿಜಯಲಕ್ಷ್ಮೀ ಬಂಗರಗಿ, ರಿಯಾಜ್‌ ಜಮಾದಾರ, ವೆಂಕಟೇಶ ದಂಡಗುಲಕರ, ಮೈಲಾರಿ ದಿವಾಕರ, ಯೂಸುಫ್‌ ಸಾಹೇಬ್‌, ಬಸವರಾಜ ದಂಡಗುಳಕರ, ಅ.ಜಬ್ಟಾರ, ಶ್ರೀಧರ ಕೊಲ್ಲೂರ, ಮಹ್ಮದ್‌ ಚಾಂದ ವಾಹೀದಿ, ಉಬೆದುಲ್ಲಾ, ಅಬ್ದುಲ್‌ ರಶೀದ್‌, ಹೀರಾ ಪವಾರ್‌, ಹನುಮಾನ ಕಾಂಬಳೆ, ಮಹೇಬೂಬ ಗೋಗಿ, ಸುನೀಲ ಸೂರ್ಯವಂಶಿ, ಮಹ್ಮದ್‌ ಅಜರ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next