Advertisement

ತೈಲ ಬೆಲೆ ಏರಿಕೆ ಖಂಡಿಸಿ ಜೆಡಿಎಸ್‌ ಪ್ರತಿಭಟನೆ

08:55 PM Jun 24, 2021 | Team Udayavani |

ಗಜೇಂದ್ರಗಡ: ಪಟ್ಟಣದ ಶ್ರೀ ಕಾಲಕಾಲೇಶ್ವರ ವೃತ್ತದಲ್ಲಿ ಜೆಡಿಎಸ್‌ ತಾಲೂಕು ಘಟಕದಿಂದ ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಸೈಕಲ್‌, ಅಡುಗೆ ಸಿಲಿಂಡರ್‌ ಪ್ರದರ್ಶಿಸಿ ಬುಧವಾರ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

Advertisement

ಜೆಡಿಎಸ್‌ ತಾಲೂಕು ಅಧ್ಯಕ್ಷ ಮಕು¤ಮಸಾಬ ಮುಧೋಳ ಮಾತನಾಡಿ, ಲಾಕ್‌ಡೌನ್‌ ನಡುವೆಯೇ ತೈಲ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಜನರನ್ನು ಸಂಕಷ್ಟಕ್ಕೆ ನೂಕಿದೆ. ಇದರಿಂದ ದಿನ ಬಳಕೆ ಆಹಾರ ಸಾಮಗ್ರಿಗಳ ಬೆಲೆಯೂ ಹೆಚ್ಚಾಗುತ್ತಿದೆ. ಜನಸಾಮಾನ್ಯರೆಲ್ಲ ಬೀದಿಗೆ ಬೀಳುವ ದುಃಸ್ಥಿತಿ ಬಂದೊದಗಿದೆ. ತೈಲ ಬೆಲೆ ಏರಿಸುವ ಮೂಲಕ ಕೋವಿಡ್‌ ಸಂಕಷ್ಟದಲ್ಲಿಯೂ ಜನರ ಬದುಕನ್ನು ಇನ್ನಷ್ಟು ದುಸ್ಥರ ಮಾಡಿದೆ. ಕಚ್ಚಾ ತೈಲದ ಬೆಲೆ ಇಕೆಯಾದರೂ ಟ್ಯಾಕ್ಸ್‌ ಹೆಚ್ಚಿಸಿ, ಅದರ ಲಾಭ ಗ್ರಾಹಕರಿಗೆ ಸಿಗದಂತೆ ವಂಚಿಸಿದೆ ಎಂದು ಆರೋಪಿಸಿದರು.

ನಾವು ಚುನಾವಣೆ ರ್ಯಾಲಿ ಮಾಡುತ್ತಿಲ್ಲ. ಜನರ ಸಮಸ್ಯೆ ಮುಂದಿಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದೇವೆ. ವಿದ್ಯುತ್‌ ದರ ಹೆಚ್ಚಿಸಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನ ಸಾಮಾನ್ಯರ ಸಂಕಷ್ಟ ಅರಿವಾಗದ ಸರ್ಕಾರಕ್ಕೆ  ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್‌ ಮುಖಂಡ ಸಂಗಪ್ಪ ಯಲಬುಣಚಿ ಮಾತನಾಡಿ, ಬಿಜೆಪಿ ಸರ್ಕಾರ ಜನಪರ ಆಡಳಿತ ನೀಡುತ್ತಿಲ್ಲ. ಉಳ್ಳವರ ಕೈಗೊಂಬೆಯಂತೆ ವರ್ತಿಸುತ್ತಿದೆ. ಜನರ ಸಂಕಷ್ಟ ಕೇಳುವವರಿಲ್ಲ. ಬಿಜೆಪಿ ಸರ್ಕಾರಕ್ಕೆ ಕಡಿವಾಣ ಹಾಕಲು ಜನಸಾಮಾನ್ಯರು ಮುಂದಾಗಬೇಕಿದೆ ಎಂದರು.

ನಂತರ ತಹಶೀಲ್ದಾರ್‌ ಕಚೇರಿಗೆ ಸೈಕಲ್‌ ಮೂಲಕ ತೆರಳಿ ಶಿರಸ್ತೇದಾರ್‌ ಎ.ಎಫ್‌. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಪತ್ತೆಸಾಬ ತಹಶೀಲ್ದಾರ, ರವಿ ಮೋಹಿತೆ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next