Advertisement

ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್‌ ಪ್ರತಿಭಟನೆ

12:08 PM Mar 23, 2021 | Team Udayavani |

ಬಾಗಲಕೋಟೆ: ಪೆಟ್ರೋಲ್‌, ಡಿಸೇಲ್‌ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್‌ ಯುವ ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆಕಾರ್ಯಕರ್ತರು ನಗರದ ಬಸವೇಶ್ವರ ವೃತ್ತದ ಮುಖ್ಯ ರಸ್ತೆಯಲ್ಲೇ ಕಟ್ಟಿಗೆ ಒಲೆಯ ಮೂಲಕ ಅಡುಗೆ ಮಾಡಿ ಗಮನ ಸೆಳೆದರು.

Advertisement

ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಹನಮಂತ ಮಾವಿನಮರದ ಹಾಗೂ ಯುವ ಘಟಕದ ಅಧ್ಯಕ್ಷ ಗೋಪಾಲ ಲಮಾಣಿನೇತೃತ್ವದಲ್ಲಿ ಪಕ್ಷದ ಕಚೇರಿಯಿಂದ ಪ್ರತಿಭಟನೆಮೆರವಣಿಗೆ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿ,ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.ಇದೇ ವೇಳೆ ಬಸವೇಶ್ವರ ವೃತ್ತದ ಮಧ್ಯದಲ್ಲಿ ಕಟ್ಟಿಗೆಯ ಮೂಲ ಒಲೆ ಹೂಡಿ, ಅನ್ನ ತಯಾರಿಸಿದರು. ಬೆಲೆ ಏರಿಕೆಯಿಂದ ಸಾಮಾನ್ಯ ಬಡ ಜನರು ನಿತ್ಯದ ಜೀವನ ನಡೆಸುವುದು ಕಷ್ಟಕರವಾಗಿದೆ. ಅಡುಗೆ ಅನಿಲಬೆಲೆ ಏರಿಕೆಯಿಂದ ಬಡ ಜನರು ನಿತ್ಯ ಮನೆಯಲ್ಲಿಒಲೆ ಹೊತ್ತಿಸುವುದು ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ನವನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ನರೇಂದ್ರಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು. ಈ ವೇಳೆ ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಡಿಸೇಲ್‌, ಪೆಟ್ರೋಲ್‌, ಅಡುಗೆ ಅನಿಲ ಹಾಗೂ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ ನೀತಿಯಿಂದ ಜನರ ನೆಮ್ಮದಿಯ ಜೀವನ ಹಾಳು ಮಾಡಿದೆ. ದೇಶದಲ್ಲಿ ಕೊರೊನಾ ಎಂಬ ಹೆಮ್ಮಾರಿ ಜನರಜೀವನದ ಜತೆಗೆ ಚೆಲ್ಲಾಟವಾಗಿದೆ. ಇದ್ದ ಕುಲಕಸಬನ್ನುಕಳೆದುಕೊಂಡು ಜನರು ಬೀದಿಗೆ ಬಂದಿದ್ದಾರೆ.ಜೀವನೋಪಾಯಕ್ಕೆ ಅವಕಾಶ ಒದಗಿಸಬೇಕಾದಸರ್ಕಾರಗಳು, ಜನರ ರಕ್ತ ಹೀರುತ್ತಿವೆ ಎಂದು ಆರೋಪಿಸಿದರು.

ಪೆಟ್ರೋಲಿಯಂ ಕಚ್ಚಾತೈಲ ಬೆಲೆಯುಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆ ದರವಿದೆ.ಆದರೂ, ಕೇಂದ್ರ ಸರ್ಕಾರ ಗ್ಯಾಸ್‌, ಡಿಸೇಲ್‌,ಪೆಟ್ರೋಲ್‌ ಬೆಲೆಗಳನ್ನು ದಿನದಿಂದ ದಿನಕ್ಕೆ ಏರಿಕೆಮಾಡುತ್ತಿದ್ದು, ಇದರಿಂದ ಗೃಹ ಉಪಯೋಗಿ ವಸ್ತುಗಳಬೆಲೆ ಏರಿಕೆಯಾಗಿದೆ. ಹೀಗಾಗಿ ಮಧ್ಯಮ, ಬಡ ವರ್ಗದಜನತೆಗೆ ತೀವ್ರ ಸಮಸ್ಯೆಯಾಗಿದೆ. ಕೇಂದ್ರ ಮತ್ತು ರಾಜ್ಯಸರ್ಕಾರಗಳು, ಬೆಲೆ ಏರಿಕೆ ನಿಯಂತ್ರಿಸುವ ಬದಲು, ಬಡ ಜನರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ ಎಂದರು.

ದಿನಬಳಕೆ ವಸ್ತುಗಳಾದ ಅಡುಗೆ ಎಣ್ಣೆ, ಬೇಳೆ ಕಾಳು, ಮಸಾಲೆ ಪದಾರ್ಥ, ಅಕ್ಕಿ, ರಾಗಿ ಮುಂತಾದವಸ್ತುಗಳ ಬೆಲೆಗಳು ಕೇಂದ್ರ ಸರ್ಕಾರದ ದ್ವಂದ್ವನಿಲುವಿನಿಂದ ಗಗನಕ್ಕೇರುತ್ತಿವೆ. ಇದನ್ನು ನಿಯಂತ್ರಿಸುವಬದಲು ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಉಪಚುನಾವಣೆಗಳ ರ್ಯಾಲಿಗಳಲ್ಲಿ ಮಗ್ನರಾಗಿದ್ದಾರೆ. ಇವರಿಗೆಜನರ ಸಮಸ್ಯೆಗಿಂತ ತಮ್ಮ ಪಕ್ಷದ ರಾಜಕೀಯವೇ ಹೆಚ್ಚಾಗಿದೆ ಎಂದು ಟೀಕಿಸಿದರು.

Advertisement

ಸರ್ಕಾರ, ಬೆಲೆ ಏರಿಕೆ ನಿಯಂತ್ರಿಸಬೇಕು. ಇಂಧನಬೆಲೆ ಕಡಿಮೆಗೊಳಿಸಿ, ಅದರ ಮೇಲೆ ವಿಧಿಸಿದ ತೆರಿಗೆಬಿಳಿಸಬೇಕು. ಬಡವರ ಮೇಲಿನ ಹೊರೆ ಕಡಿಮೆಗೊಳಿಸಿ,ನೆಮ್ಮದಿಯ ಬದುಕು ನಡೆಸುವಂತೆ ಮಾಡಬೇಕು.ಇಲ್ಲದಿದ್ದರೆ ಜೆಡಿಎಸ್‌ನಿಂದ ಉಗ್ರ ಹೋರಾಟನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾಭಜಂತ್ರಿ, ಪಕ್ಷದ ಪ್ರಮುಖರಾದ ಶಿವಪ್ರಸಾದ ಗದ್ದಿ,ಶರಣು ಹುರಕಡ್ಲಿ, ನಾರಾಯಣ ಘೋರ್ಪಡೆ,ಕೃಷ್ಣಾ ಪಾಟೀಲ, ಪ್ರಭುರಾಜ ಪಾಟೀಲ,ಹನಮಂತ ಗಾಣಿಗೇರ, ಬಾಲಪ್ಪ ಹುನಗುಂಡಿ,ವಿಜಯಮಹಾಂತೇಶ ಗದ್ದನಕೇರಿ, ರಾಜಕುಮಾರನ್ಯಾಮಗೌಡ, ರಂಗಪ್ಪ ಮಳೆಯಪ್ಪಗೋಳ, ಭಜಬಲಿಕೆಂಗಾಲಿ, ಸುರೇಶ ಅರ್ಜುನ ಮಡಿವಾಳರ, ಚನಬಸಪ್ಪ ಕತಾಟೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆಯಿಂದ ಸಕರು-ಸಾಗಣೆ ದರ ಕೂಡ ಹೆಚ್ಚಾಗುತ್ತದೆ. ಇದರಿಂದ ಮನೆಯಲ್ಲಿ ನಿತ್ಯ ಬಳಸುವ ಕಿರಾಣಿ ಸಾಮಗ್ರಿಯಿಂದ ಹಿಡಿದು ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ ಬಡ ಜನರು, ಜೀವನ ನಡೆಸುವುದೇ ಕಷ್ಟಕರವಾಗಿದೆ.ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಬಡ ಜನರ ಕಷ್ಟ ಅರ್ಥವಾಗುತ್ತಿಲ್ಲ. ಇಂತಹಸರ್ಕಾರಕ್ಕೆ ಮಹಿಳೆಯರು ನಿತ್ಯವೂ ಶಾಪ ಹಾಕುತ್ತಿದ್ದಾರೆ. -ರೇಣುಕಾ ಭಜಂತ್ರಿ, ಜಿಲ್ಲಾ ಅಧ್ಯಕ್ಷೆ, ಜೆಡಿಎಸ್‌ ಮಹಿಳಾ ಘಟಕ

ಬೆಲೆ ಏರಿಕೆ ನಿಯಂತ್ರಿಸದಿದ್ದರೆ ಬಡಜನರು ಇನ್ನಷ್ಟು ಬೀದಿಗೆ ಬರಲಿದ್ದಾರೆ. ಕೋವಿಡ್ ದಿಂದ ಈಗಾಗಲೇ ಜನರು ತೀವ್ರ ಸಂಕಷ್ಟಎದುರಿಸಿದ್ದಾರೆ. ಈಗ ಪ್ರತಿಯೊಂದು ವಸ್ತುಗಳ ಬೆಲೆಏರಿಕೆಯಿಂದ ಸಾಮಾನ್ಯ ಜನರು ಹೇಗೆ ಬದುಕ ನಡೆಸಬೇಕು ಎಂಬ ಕನಿಷ್ಠ ಜ್ಞಾನವೂ ಸರ್ಕಾರಕ್ಕಿಲ್ಲ. ಬಡವರ ಹೊಟ್ಟೆ ಮೇಲೆ ಹೊಡೆದು ತೆರಿಗೆ ಸಂಗ್ರಹಮಾಡುವ ದುಸ್ಥಿತಿ ಸರ್ಕಾರಕ್ಕೆ ಬಂದಿದೆಯೇ. ಇಂತಹ ಬಿಜೆಪಿ ಸರ್ಕಾರಕ್ಕೆ ಜನರು ಮುಂದೆ ತಕ್ಕ ಪಾಠ ಕಲಿಸುತ್ತಾರೆ. -ಹನಮಂತ ಮಾವಿನಮರದ, ಜೆಡಿಎಸ್‌ ಜಿಲ್ಲಾ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next