ಕಲಬುರಗಿ: ಅತಿವೃಷ್ಟಿ ಮತ್ತು ಪ್ರವಾಹದಿಂದ ಸಮಸ್ಯೆಗೆ ಸಿಲುಕಿ ಸಂಕಟ ಅನುಭವಿಸುತ್ತಿರುವ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಜೆಡಿಎಸ್ ಪಕ್ಷದಿಂದ ಜಿಲ್ಲಾಧಿಕಾರಿ ಕಚೇರಿ ಎದುರುಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಭೀಕರ ಪ್ರವಾಹ ಉಂಟಾಗಿ ಜಿಲ್ಲೆಯ ನದಿ ಪಾತ್ರದ ಜನರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಬೆಳೆ ನಾಶವಾಗಿ ರೈತರು ದಿಕ್ಕು ತೋಚದಂತೆ ಆಗಿದ್ದಾರೆ. ನೆರೆಯಿಂದ ಹಾನಿಯಾದ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕೆಂದುಪ್ರವಾಹದಲ್ಲಿ ನಾಶವಾದ ಹಾಳಾದ ತೊಗರಿ ಬೆಳೆ ಪ್ರದರ್ಶಿಸುವಮೂಲಕ ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರವಾಹದಿಂದ ಜಲಾವೃತವಾದ ಗ್ರಾಮಸ್ಥರ ಪ್ರತಿ ಕುಟುಂಬಕ್ಕೂ 25 ಸಾವಿರ ರೂ. ನೆರವು ಕಲ್ಪಿಸಬೇಕು.ಭೀಮಾ, ಕಾಗಿಣಾ, ಅಮರ್ಜಾ, ಮುಲ್ಲಾಮಾರಿ ನದಿಗಳ ಪ್ರವಾಹ ಬಾಧಿತ ಗ್ರಾಮಗಳನ್ನು ಸ್ಥಳಾಂತರಿಸಿ ನವಗ್ರಾಮಗಳನಿರ್ಮಾಣ ಮಾಡಬೇಕು. ಮೇಲಾಗಿ ಪ್ರವಾಹದಿಂದ ಈಗಾಗಲೇ ಜನರು ತತ್ತರಿಸಿದ್ದಾರೆ. ಇದರ ನಡುವೆಯೂವಿದ್ಯುತ್ ದರ ಹೆಚ್ಚಳ ಮಾಡಿದ್ದು, ಖಂಡನೀಯವಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಹ ಸಂತ್ರಸ್ತರಿಗೆ ಸರ್ಕಾರ ನೆರವಿಗೆ ಧಾವಿಸುವ ಕೆಲಸ ಮಾಡಬೇಕು. ವಿದ್ಯುತ್ ದರ ಏರಿಕೆ ಆದೇಶ ಹಿಂಪಡೆಯಬೇಕು. ರಾಜ್ಯದಲ್ಲಿ 9ನೇ ತರಗತಿಯಿಂದ ಪಿಯುಸಿ ವ್ಯಾಸಾಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆಉಚಿತ ಲ್ಯಾಪ್‌ಟಾಪ್ ವಿತರಿಸಬೇಕೆಂದು ಜಿಲ್ಲಾಧಿಕಾರಿಗಳು ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್, ಮುಖಂಡರಾದ ಮನೋಹರ ಪೋದ್ದಾರ, ಶಂಕರ ಕಟ್ಟಿ ಸಂಗಾವಿ, ಗುರುನಾಥ ಪೂಜಾರಿ, ವಿಠಲ್ ಜಾಧವ್, ಹಣಮಂತ ಸನಗುಂದಿ, ಸಿದ್ದಪ್ಪ, ರಾಜಾಸಾಬ ಮತ್ತಿತರರು ಪಾಲ್ಗೊಂಡಿದ್ದರು.