Advertisement

ಯಲ್ಲಾಪುರದಲ್ಲಿ ಸ್ಥಳೀಯ ಸಂಸ್ಥೆ  ಚುನಾವಣೆಗೆ ಜೆಡಿಎಸ್‌ ತಯಾರಿ

05:46 PM Jul 19, 2018 | Team Udayavani |

ಜೆಡಿಎಸ್‌ ಕ್ಷೇತ್ರಾಧ್ಯಕ್ಷ ಅರುಣಕುಮಾರ ಗೊಂದಳಿ ಮಾತನಾಡಿ, ಸ್ಥಳೀಯ ಸಂಸ್ಥೆ ಚುನಾವಣೆಯನ್ನು ತಾಲೂಕು ಮುಖಂಡರ ನೇತೃತ್ವದಲ್ಲಿ ಎದುರಿಸುತ್ತೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಎ. ರವೀಂದ್ರನಾಥ ನಾಯ್ಕರನ್ನು ದೂರವಿಟ್ಟು, ಜಿಲ್ಲಾಧ್ಯಕ್ಷರ ಮಾರ್ಗದರ್ಶನದಂತೆ ಪಕ್ಷಕ್ಕಾಗಿ ದುಡಿದ ಕಾರ್ಯರ್ಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಆದ್ಯತೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕಿದೆ. ಇದರಿಂದ ಸ್ಥಳೀಯ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದರು.

Advertisement

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿಯ ಕುರಿತು ರಾಜ್ಯದ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ನಡೆದುಕೊಂಡ ರೀತಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಬೇಸರ ಉಂಟುಮಾಡಿದೆ. ಕಾರ್ಯಕರ್ತರನ್ನು ಸರಿಯಾಗಿ ಬಳಸಿಕೊಳ್ಳದೇ ಮತ್ತು ತಮ್ಮ ವೈಯಕ್ತಿಕ ಕೆಲವು ತಪ್ಪು ನಿರ್ಧಾರಗಳಿಂದ ಅಲ್ಪ ಮತಗಳಿಸಲು ಕಾರಣವಾಗಿದೆ. ಅದಕ್ಕೆ ಅಭ್ಯರ್ಥಿಯೇ ನೇರ ಹೊಣೆಯಾಗಿದ್ದಾರೆ. ಹೋರಾಟ ಮನೋಭಾವನೆಯಿಂದ ಬೆಳೆದ ವ್ಯಕ್ತಿ ಎಂಬ ಕಾರಣಕ್ಕೆ ರವೀಂದ್ರನಾಥ ನಾಯ್ಕರನ್ನು ಗುರುತಿಸಿ ಪಕ್ಷ ಟಿಕೆಟ್‌ ನೀಡಿತ್ತು. ಅದನ್ನು ಅವರು ಸದುಪಯೋಗ ಪಡೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಇನ್ನಷ್ಟು ಸಂಘಟನೆ ಮಾಡಬೇಕಿದೆ ಎಂದರು.

ತಾಲೂಕು ಕಾರ್ಯಾಧ್ಯಕ್ಷ ಎನ್‌.ವಿ. ಭಟ್ಟ ದೇವಸ, ನಗರ ಘಟಕಾಧ್ಯಕ್ಷ ರವಿಚಂದ್ರ ನಾಯ್ಕ, ಕಾರ್ಮಿಕ ಘಟಕಾಧ್ಯಕ್ಷ ಚೂಡಾಮಣಿ ನಾಯ್ಕ, ಪ್ರಮುಖರಾದ ನಿಸ್ಸಾರ ಅಹಮ್ಮದ್‌ ಶೇಖ್‌, ಸರಸ್ವತಿ ಗುನಗಾ, ಫಾರುಖ್‌ ಖಾನ್‌, ರೇವಣಸಿದ್ಧ, ರಾಘು ದೇವಾಡಿಗ, ನೂರ್‌ ಅಹಮ್ಮದ್‌ ಕಿರವತ್ತಿ, ಜಾಫರ್‌ ಹಂಡಿ, ಸುಧಾಕರ ನಾಯ್ಕ, ರಾಘವೇಂದ್ರ ರಾಯ್ಕರ, ನಾಗೇಶ ನಾಯ್ಕ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next