Advertisement

ಜೆಡಿಎಸ್ ಪಕ್ಷಕ್ಕೆ ಸಾವಿಲ್ಲ, ಫೀನಿಕ್ಸ್ ನಂತೆ ಮತ್ತೆ ಎದ್ದುಬರುತ್ತದೆ: ಶಾಸಕ ಕೆ.ಮಹದೇವ್

08:26 PM Feb 25, 2023 | Team Udayavani |

ಪಿರಿಯಾಪಟ್ಟಣ : ಜೆಡಿಎಸ್ ಪಕ್ಷಕ್ಕೆ ಸಾವಿಲ್ಲ ಅದು ಫೀನಿಕ್ಸ್ ನಂತೆ ಎದ್ದುಬಂದು ರಾಜ್ಯದ ಅಧಿಕಾರದ ಗದ್ದುಗೆ ಏರಲಿದೆ ಎಂದು ಶಾಸಕ ಕೆ.ಮಹದೇವ್ ವಿಶ್ವಾಸ ವ್ಯಕ್ತಪಡಿಸಿದರು.

Advertisement

ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಶನಿವಾರ ಹಮ್ಮಿಕೋಡಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ,ಕಾಂಗ್ರೆಸ್ ನವರಿಗೆ ದುರಾಸೆ ಹೆಚ್ಚು, ಇವರು ದೇಶ, ರಾಜ್ಯದಲ್ಲೇ ಮುಕ್ತವಾಗುತ್ತಿದ್ದಾರೆ ಇನ್ನು ಇಲ್ಲಿ ಉಳಿಯಲು ಸಾಧ್ಯವೇ, ಜೆಡಿಎಸ್ ಕಾರ್ಯಕರ್ತರು ಸಿಂಹದ ಮರಿಗಳು ಎದೆಗುಂದುವ ಅವಶ್ಯಕತೆ ಇಲ್ಲ, ನಾನು ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತಕೇಳಿ ಅದನ್ನು ಬಿಟ್ಟು ವಿರೋಧಿಗಳ ಟೀಕೆಗೆ , ಪ್ರಶ್ನೆಗಳಿಗೆ ಉತ್ತರ ಕೊಡುವ ತಾಕತ್ ಇಲ್ಲದಿದ್ದರೆ ಸೀರೆ ಉಟ್ಟು ಮನೆಯಲ್ಲಿಯೇ ಮಲಗುವಂತೆ ಸೂಚನೆ ನೀಡಿದ ಅವರು, ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಆದರೂ ನನ್ನ ಬಗ್ಗೆ ಮಾಜಿ ಶಾಸಕ ಕೆ.ವೆಂಕಟೇಶ್ ಹಾಗೂ ಅವರ ಕಾರ್ಯಕರ್ತರು ಅಪಪ್ರಚಾರ ಮಾಡುತ್ತಿದ್ದಾರೆ ಇವರಿಗೆ ನಮ್ಮ ಕಾರ್ಯಕರ್ತರು ಸೂಕ್ತ ಉತ್ತರ ನೀಡಲು ಮುಂದಾಗಬೇಕು ಎಂದರು.

ಈ ಹಿಂದೆ ಜೆಡಿಎಸ್ ನಲ್ಲಿದ್ದ ಕೆ.ವೆಂಕಟೇಶ್ ಅಧಿಕಾರಕ್ಕಾಗಿ ಹಣದ ಸೂಟ್ ಕೇಸ್ ಗೆ ಆಸೆಪಟ್ಟು 1989 ರಲ್ಲಿ ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ರಾಮಕೃಷ್ಣ ಹೆಗಡೆ ಹಿಂದೆ ಓಡಿ ಹೋದರು ಆದರೂ ಅವರನ್ನು ಮತ್ತೆ ದೇವೇಗೌಡರ ಬಳಿಗೆ ಕರೆತಂದು ಟಿಕೆಟ್ ಕೊಡಿಸಿದೆವು ಆದರೆ 2004 ರಲ್ಲಿ ಅದೇ ಚಾಳಿ ಮುಂದುವರಿಸಿ ಜೆಡಿಎಸ್ ಪಕ್ಷಕ್ಕೆ ಮೋಸ ಮಾಡಿರುವುದು ಎಲ್ಲರಿಗೂ ತಿಳಿದಿದೆ. ಇಂತವರ ನೀತಿಪಾಠ ನಮಗೆ ಬೇಡಾ ಎಂದು ಕಿಡಿ ಕಾರಿದ ಅವರು ಇವರು ಶಾಸಕರಾಗಿದ್ದಾಗ ಅಧಿಕಾರಿಗಳನ್ನು ಪ್ರತಿ ತಿಂಗಳು ಹಣಕ್ಕಾಗಿ ಪೀಡಿಸುತ್ತಿದ್ದರು. ಆದರೆ ನಾನು ನಿಷ್ಕಲ್ಮಶವಾಗಿ ಆಡಳಿತ ನಡೆಸಿದ್ದೇನೆ. ಈ ಬಗ್ಗೆ ದೇವಸ್ಥಾನದಲ್ಲಿಯೇ ಪ್ರಮಾಣಕ್ಕೆ ಮಾಡುತ್ತೇನೆ ಆದ್ದರಿಂದ ಕಾರ್ಯಕರ್ತರು ಯಾವುದೇ ಗೊಂದಲಗಳಿಗೆ ಒಳಗಾಗದೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ನೀಡುವಂತೆ ಮತದಾರರನ್ನು ಮನವೊಲಿಸಬೇಕು ಎಂದರು.

ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ ಕೆ.ವೆಂಕಟೇಶ್ ಸೀಸನ್ ರಾಜಕಾರಣಿಯಾಗಿದ್ದಾರೆ. ಸಮಯಕ್ಕೆ ತಕ್ಕಂತೆ ರಾಜಕಾರಣ ಮಾಡುವ ಕುತಂತ್ರಿಯಾಗಿದ್ದಾರೆ. ಕಳೆದ ಐದು ವರ್ಷಗಳ ಕಾಲ ಮನೆಯಲ್ಲಿದ್ದು ಚುನಾವಣೆ ಸಮೀಪಿಸುತ್ತಿದ್ದಂತೆ ಸುಳ್ಳು ಅಪಪ್ರಚಾರ ಮಾಡುತ್ತಾ ತಿರುಗುತ್ತಿದ್ದಾರೆ. ಜೆಡಿಎಸ್ ಮುಕ್ತ ತಾಲ್ಲೂಕು ಮಾಡುವುದಾಗಿ ಕಾಂಗ್ರೆಸ್ ನವರು ಕನಸು ಕಾಣುತ್ತಿದ್ದಾರೆ. ಈ ಕನಸ್ಸು ನನಸಾಗುವುದಿಲ್ಲ. ಇದು ಮಹದೇವ್ ರವರ ಕೊನೆ ಚುನಾವಣೆಯಾಗಿದ್ದು, ಜೆಡಿಎಸ್ ಪಕ್ಷಕ್ಕೆ ಮತವನ್ನು ನೀಡುವುದರ ಮೂಲಕ ಕಾರ್ಯಕರ್ತರು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದರು.

ಸಮಾವೇಶದಲ್ಲಿ ಜಿಪಂ ಮಾಜಿ ಸದಸ್ಯ ಚಂದ್ರೇಶ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಕೆ.ಮಹೇಶ್, ಎಂಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಸಿ.ಎನ್.ರವಿ, ಮುಖಂಡರಾದ ಐಲಾಪುರ ರಾಮು, ದೊರೆಕೆರೆ ನಾಗೇಂದ್ರ, ಸುನೀತಾ, ಮಲ್ಲಿಕಾರ್ಜುನ, ರಘುನಾಥ್, ಗಗನ್, ಕುಮಾರ್, ಲಕ್ಷ್ಮಣ, ಜವರಪ್ಪ, ವಕೀಲ ನಾಗರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next