Advertisement

ಕಣಕುಂಬಿ, ಆಲಮಟ್ಟಿ, ತಲಕಾಡು ಹಾಗೂ ಸಕಲೇಶಪುರದಿಂದ ಜೆಡಿಎಸ್ ಪಾದಯಾತ್ರೆ: ಎಚ್ ಡಿಕೆ

04:22 PM Aug 23, 2021 | Team Udayavani |

ಹುಬ್ಬಳ್ಳಿ: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರದ ನಿರ್ಲಕ್ಷ್ಯ ಖಂಡಿಸಿ, ರಾಜ್ಯದ ವಿವಿಧ ಕಡೆಯಿಂದ ಜೆಡಿಎಸ್ ಪಾದಯಾತ್ರೆ ಹಮ್ಮಿಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ, ಮಹದಾಯಿ, ಮೇಕೆದಾಟು ಹಾಗೂ ಎತ್ತಿನಹೊಳೆ ಯೋಜನೆಗಳ ಬಗ್ಗೆ ನಿರ್ಲಕ್ಷ್ಯ ತೋರುವ ಮೂಲಕ ಕೇಂದ್ರ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದರು.

ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ಬೆಳಗಾವಿಯ ಕಣಕುಂಬಿ, ಆಲಮಟ್ಟಿ, ತಲಕಾಡು ಹಾಗೂ ಸಕಲೇಶಪುರದಿಂದ ಪಾದಯಾತ್ರೆ ಆರಂಭಿಸಲಾಗುವುದು. ಎಲ್ಲಾ ಯಾತ್ರೆಗಳು ಬೆಂಗಳೂರಿಗೆ ಸೇರಲಿದ್ದು, ಅಲ್ಲಿ ರೈತರ ಸಮಾವೇಶ ಮಾಡಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ ಹೋರಾಟ ಕೈಗೆತ್ತಿಕೊಂಡಿಲ್ಲ. ಕೋವಿಡ್ ತಗ್ಗಿದ ನಂತರ ಪಾದಯಾತ್ರೆ ದಿನಾಂಕ ನಿಗದಿ ಪಡಿಸಲಾಗುವುದು ಎಂದರು.

ಇದನ್ನೂ ಓದಿ:ಧ್ರುವನಾರಾಯಣ್ ಹೇಳಿಕೆ ಖಂಡಿಸಿ ಮೈಸೂರು ಬಿಜೆಪಿ ಪ್ರತಿಭಟನೆ: ಪೊಲೀಸರಿಂದ ತಡೆ

ಯುಕೆಪಿ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರದ ಜತೆ ಚರ್ಚಿಸುವುದಾಗಿ ಮುಖ್ಯಮಂತ್ರಿ ಯವರು ಹೇಳಿದ್ದು, ಕಾಯ್ದು ನೋಡುವುದಾಗಿ ತಿಳಿಸಿದರು.

Advertisement

ಕೋವಿಡ್ ತಡೆಗೆ ಸರಕಾರ ನಿಯಮಗಳನ್ನು ರೂಪಿಸುತ್ತದೆ, ಪ್ರಧಾನಿಯವರು ನಿಯಮ ಪಾಲನೆಗೆ ಮನವಿ ಮಾಡುತ್ತಾರೆ, ಅವರದ್ದೇ ಸಂಪುಟದ ಸಚಿವರು ಜನಾಶೀರ್ವಾದ ಯಾತ್ರೆ ಮೂಲಕ ನಿಯಮ ಉಲ್ಲಂಘಿಸುತ್ತಾರೆ. ಕಾಂಗ್ರೆಸ್ ನವರು ಸಹ ವಿಭಾಗವಾರು ಸಭೆಗಳ ಮೂಲಕ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬಹುದಾದ 130 ಕ್ಷೇತ್ರಗಳಲ್ಲಿ ಹೆಚ್ಚಿನ ಆದ್ಯತೆಯೊಂದಿಗೆ ಪಕ್ಷ ಸಂಘಟನೆ ಮಾಡಲಾಗುವುದು. ಪಕ್ಷ ನೀಡಿದ ಭರವಸೆ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ರೈತರ ಸಾಲ ಮನ್ನಾ ಸೇರಿದಂತೆ ಅನೇಕ ಉದಾಹರಣೆಗಳಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next