Advertisement

ರೆಬೆಲ್ಸ್‌ ಔತಣಕೂಟಕ್ಕೆ ಜೆಡಿಎಸ್‌ ಆಕ್ರೋಶ

02:57 PM May 03, 2019 | Team Udayavani |

ಮಂಡ್ಯ: ಹೈವೋಲ್ಟೇಜ್‌ ಕದನ ಕಣವಾಗಿ ಬಿಂಬಿತವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರ ಚುನಾವಣೆ ಮುಗಿದ ಬಳಿಕವೂ ಅದರ ತೀವ್ರತೆಯನ್ನು ಕಾಯ್ದುಕೊಂಡಿದೆ. ಮತದಾನ ಪ್ರಕ್ರಿಯೆ ಮುಗಿದ 13 ದಿನಗಳ ದಿನಗಳ ಬಳಿಕ ಪಕ್ಷೇತರ ಅಭ್ಯರ್ಥಿ ಸುಮಲತಾ ಜೊತೆಗೆ ಕಾಂಗ್ರೆಸ್‌ ರೆಬೆಲ್ ನಾಯಕರು ಔತಣ ಕ‌ೂಟದಲ್ಲಿ ಪಾಲ್ಗೊಂಡಿರುವುದು ಹೊಸ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

Advertisement

ಔತಣಕೂಟದ ವಿಡಿಯೋ ವೈರಲ್ ಆದ ಬಳಿಕ ಕೆಪಿಸಿಸಿ ಕೂಡ ರೆಬೆಲ್ ನಾಯಕರ ಮೇಲೆ ಕೆಂಗಣ್ಣು ಬೀರಿದೆ. ಕಾಂಗ್ರೆಸ್‌ನ ಪರಾಜಿತ ಮಾಜಿ ಶಾಸಕರು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಜೊತೆ ಔತಣಕೂಟದಲ್ಲಿ ಪಾಲ್ಗೊಂಡಿದ್ದರ ಔಚಿತ್ಯವೇನು ಎಂಬ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಮಂಡ್ಯ ಜಿಲ್ಲಾ ಸಮಿತಿಯಿಂದ ವರದಿ ಕೇಳಿದೆ. ವರದಿ ಬಂದ ಬಳಿಕ ಶಿಸ್ತು ಕ್ರಮ ಕೈಗೊಳ್ಳುವುದಕ್ಕೆ ಚಿಂತನೆ ನಡೆಸಿದೆ.

ಜೆಡಿಎಸ್‌ ತಂತ್ರಗಾರಿಕೆ: ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿರುವ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಅವರನ್ನು ಟಾರ್ಗೆಟ್ ಮಾಡಿಕೊಂಡಿರುವ ಜೆಡಿಎಸ್‌ನ ಮೇಲ್ಮ ಟ್ಟದ ನಾಯಕರು, ಲೋಕಸಭಾ ಚುನಾವಣೆಯಲ್ಲಿ ಈ ನಾಯಕರು ಜೆಡಿಎಸ್‌ ಪರವಾಗಿ ಕೆಲಸ ಮಾಡಿಲ್ಲ, ಮೈತ್ರಿ ಧರ್ಮ ಪಾಲಿಸಿಲ್ಲ ಹಾಗೂ ಪಕ್ಷೇತರ ಅಭ್ಯರ್ಥಿ ಪರವಾಗಿ ಚುನಾವಣಾ ಕಾರ್ಯಾಚರಣೆ ನಡೆಸಿರುವುದನ್ನು ಸಾಬೀತುಪಡಿಸುವುದನ್ನೇ ಗುರಿಯಾಗಿಸಿಕೊಂಡು ಈ ವಿಡಿಯೋ ವೈರಲ್ ಮಾಡಿರುವುದಾಗಿ ತಿಳಿದು ಬಂದಿದೆ. ಆ ಮೂಲಕ ಕಾಂಗ್ರೆಸ್‌ ಹೈಕಮಾಂಡ್‌ ಮೂಲಕ ರೆಬೆಲ್ ನಾಯಕರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ತಂತ್ರಗಾರಿಕೆ ನಡೆಸಿದೆ. ಇದಲ್ಲದೆ, ಒಂದು ವೇಳೆ ಜೆಡಿಎಸ್‌ ಚುನಾವಣೆಯಲ್ಲಿ ಸೋತರೆ ಅದರ ಹೊರೆಯನ್ನು ಕಾಂಗ್ರೆಸ್‌ ನಾಯಕರ ತಲೆಗೆ ಕಟ್ಟುವ ಹುನ್ನಾರವೂ ಇದರ ಹಿಂದಿದೆ ಎನ್ನಲಾಗುತ್ತಿದೆ.

ಮಾಜಿ ಶಾಸಕರೇ ಆಧಾರಸ್ತಂಭಗಳು: ಮಂಡ್ಯ ಜಿಲ್ಲೆಯೊಳಗೆ ಮಾಜಿ ಸಚಿವರಾದ ಎನ್‌.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ, ಕೆ.ಬಿ.ಚಂದ್ರಶೇಖರ್‌ ಪಕ್ಷದ ಆಧಾರ ಸ್ತಂಭಗಳಂತಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು ಕಾಂಗ್ರೆಸ್‌ಗೆ ಅಷ್ಟು ಸುಲಭವಾಗಿಯೂ ಇಲ್ಲ. ಪಕ್ಷೇತರ ಅಭ್ಯರ್ಥಿ ಜೊತೆ ಔತಣಕೂಟದಲ್ಲಿ ಪಾಲ್ಗೊಂಡಿದ್ದನ್ನೇ ಅಶಿಸ್ತು ಎಂದು ಪರಿಗಣಿಸಲಾಗದು. ಈಗ ಚುನಾವಣೆ ಮುಗಿದ ವಿಚಾರ. ಮತದಾರರು ಈಗಾಗಲೇ ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಿಯಾಗಿದೆ. ಈಗ ಯಾರು ಯಾರ ಜೊತೆ ಮಾತನಾಡಿದರೂ, ಭೋಜನ ಕೂಟದಲ್ಲಿ ಭಾಗವಹಿಸಿದರೂ ಚುನಾವಣಾ ಫ‌ಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಚುನಾವಣೆಯಲ್ಲಿ ಜೆಡಿಎಸ್‌ ವಿರುದ್ಧ ರೆಬೆಲ್ ನಾಯಕರು ಕೆಲಸ ಮಾಡಿರುವ ಸಂದೇಶವನ್ನು ರವಾನಿಸುವುದಕ್ಕಾಗಿ ಜೆಡಿಎಸ್‌ ಈ ತಂತ್ರ ಪ್ರಯೋಗಿಸಿದೆ ಎನ್ನುವುದು ಮಾಜಿ ಶಾಸಕರ ಬೆಂಬಲಿಗರ ಪಾಳಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ.

ಜೆಡಿಎಸ್‌ಗೆ ಕಾಡುತ್ತಿದೆಯೇ ಸೋಲಿನ ಭೀತಿ? ಮಂಡ್ಯ ಲೋಕಸಭಾ ಕ್ಷೇತ್ರದ ಫ‌ಲಿತಾಂಶದ ಬಗ್ಗೆ ಗುಪ್ತದಳ ಇಲಾಖೆ ವರದಿಯಿಂದ ಸಹಜವಾಗಿಯೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ದಿಕ್ಕೆಟ್ಟಿದ್ದಾರೆ. ಪುತ್ರನ ಸೋಲಿನ ಭೀತಿ ಅವರನ್ನು ಕಾಡುತ್ತಿರುವಂತೆ ವರ್ತಿಸುತ್ತಿದ್ದಾರೆ. ಈಗಾಗಲೇ ಜೆಡಿಎಸ್‌ಗೆ ಮಂಡ್ಯ, ಮದ್ದೂರು, ಮಳವಳ್ಳಿ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ ಎಂಬ ವಿಷಯ ತಿಳಿದು ಆ ಕ್ಷೇತ್ರದ ಶಾಸಕರನ್ನು ತರಾಟೆ ತೆಗೆದುಕೊಂಡಿರುವುದು ಎಲ್ಲರಿಗೂ ತಿಳಿದಿರುವ ಬಹಿರಂಗ ಸತ್ಯವಾಗಿದೆ.

Advertisement

ಇದೀಗ ಮೈತ್ರಿ ಧರ್ಮ ಪಾಲನೆ ಮಾಡದ ಕಾಂಗ್ರೆಸ್‌ ಮಾಜಿ ಶಾಸಕರನ್ನೂ ಗುರಿಯಾಗಿಸಿಕೊಂಡು ಪಕ್ಷೇತರ ಅಭ್ಯರ್ಥಿ ಜೊತೆಗೆ ಔತಣ ಮಾಡಿದ್ದನ್ನು ಮುಂದಿಟ್ಟು ಸಿಎಂ ಕುಮಾರಸ್ವಾಮಿ ಅವರು ಊಟದಲ್ಲೂ ರಾಜಕಾರಣ ಮಾಡಲು ಮುಂದಾಗಿದ್ದಾರೆ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ.

ಜಿ.ಟಿ.ದೇವೇಗೌಡರ ವಿರುದ್ಧ ಕ್ರಮವೇನು? ಚುನಾವಣಾ ಫ‌ಲಿತಾಂಶವೇ ಇನ್ನೂ ಪ್ರಕಟವಾಗಿಲ್ಲ. ಆಗಲೇ ಜೆಡಿಎಸ್‌ ಸೋಲನ್ನು ಒಪ್ಪಿಕೊಂಡವರಂತೆ, ಆವೇಶಕ್ಕೊಳಗಾದವರಂತೆ ಸಿಎಂ ಕುಮಾರಸ್ವಾಮಿ ವರ್ತಿಸುತ್ತಿದ್ದಾರೆ. ಮಂಡ್ಯ ಜಿಲ್ಲೆಯೊಳಗೆ ಕಾಂಗ್ರೆಸ್‌ನ ಮಾಜಿ ಶಾಸಕರು ಜೆಡಿಎಸ್‌ ಪರ ಕೆಲಸ ಮಾಡಿಲ್ಲವೆಂದು ಬೊಟ್ಟು ಮಾಡುವ ಕುಮಾರಸ್ವಾಮಿ ಅವರು, ಮೈಸೂರು ಲೋಕಸಭಾ ಚುನಾವಣೆಯಲ್ಲಿ ಚಾಮುಂ ಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿಸಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವ ಸಚಿವ ಜಿ.ಟಿ.ದೇವೇಗೌಡರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಚೆಲುವರಾಯಸ್ವಾಮಿ ಬೆಂಬಲಿಗ ಹಾಗೂ ತಾಪಂ ಮಾಜಿ ಅಧ್ಯಕ್ಷ ತ್ಯಾಗರಾಜು ಪ್ರಶ್ನಿಸಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್‌ ಭದ್ರಕೋಟೆ. ಇಲ್ಲಿನ 8 ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರು, ಅದರಲ್ಲಿ ಮೂವರು ಸಚಿವರು, ವಿಧಾನಪರಿಷತ್‌ ಸದಸ್ಯರಿದ್ದಾರೆ. ಇವರಲ್ಲದೆ ಮಾಜಿ ಪ್ರಧಾನಿ ದೇವೇ ಗೌಡರು, ಸಿಎಂ ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರ ಸ್ವಾಮಿ ಸೇರಿ ಜೆಡಿಎಸ್‌ ಪರ ಶ್ರಮಿಸಿದ್ದಾರೆ. ಇವರೆಲ್ಲರ ಚುನಾವಣಾ ಕಾರ್ಯಾಚರಣೆ ನಡುವೆಯೂ ಜೆಡಿಎಸ್‌ಗೆ ಸೋಲಿನ ಭೀತಿ ಏಕೆ ಕಾಡಬೇಕು. ಕಾಂಗ್ರೆಸ್‌ ಮಾಜಿ ಶಾಸಕರನ್ನೇ ಗುರಿಯಾಗಿಸಿಕೊಂಡಿರುವ ಹಿಂದಿನ ಉದ್ದೇಶ ಅರ್ಥವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಸುಮಲತಾ ಕಾಂಗ್ರೆಸ್‌ನ ಮಾಜಿ ಸಚಿವರಾಗಿದ್ದ ಅಂಬರೀಶ್‌ ಪತ್ನಿ. ಅವರೇನು ಟೆರರಿಸ್ಟ್‌ ಅಲ್ಲ. ನಿಷೇಧಿತ ಉಗ್ರ ಸಂಘಟನೆಗೆ ಸೇರಿದವರೂ ಅಲ್ಲ. ಅವರೊಂದಿಗೆ ಊಟ ಮಾಡಿದ್ದರಲ್ಲಿ ಏನು ತಪ್ಪಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗ ಡಾ.ಬಿ.ಎಸ್‌.ಶಿವಣ್ಣ ಪ್ರಶ್ನಿಸಿದ್ದಾರೆ.

ಚುನಾವಣೆ ಪೂರ್ವದಲ್ಲಿ ಈ ಬೆಳವಣಿಗೆ ನಡೆದಿದ್ದರೆ ಅದು ತಪ್ಪಾಗುತ್ತಿತ್ತು. ಈಗ ಚುನಾವಣೆ, ಮತದಾನ ಎಲ್ಲವೂ ಮುಗಿದಿದೆ. ಈಗ ಏನನ್ನೂ ಬದ ಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ವಿನಾಕಾರಣ ಭೋಜನ ವಿಷಯಕ್ಕೆ ವಿಶೇಷ ಮಹತ್ವ ನೀಡಲಾಗುತ್ತಿದೆ. ಇದು ಸರಿಯಲ್ಲ ಎಂದಿದ್ದಾರೆ.

ನಾವು ಸುಮಲತಾ ಅವರೊಂದಿಗೆ ಔತಣ ಕೂಟದಲ್ಲಿ ಭಾಗವಹಿಸಿದ್ದು ತಪ್ಪು ಎನ್ನುವುದಾದರೆ ಸಚಿವ ಡಿ.ಕೆ.ಶಿವಕುಮಾರ್‌ ಬಿಜೆಪಿ ನಾಯಕ ಎಸ್‌.ಎಂ.ಕೃಷ್ಣ ಅವರ ಮನೆಗೆ ಹೋಗಿದ್ದೇಕೆ? ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರತಾಪ್‌ಸಿಂಹ ಅವರ ಕಾಲಿಗೆ ಬಿದ್ದಿದ್ದೇಕೆ. ಇದನ್ನು ಮುಂದಿಟ್ಟುಕೊಂಡು ಸಚಿವ ಡಿ.ಕೆ. ಶಿವಕುಮಾರ್‌ ಒಕ್ಕಲಿಗ ಮತಗಳೆಲ್ಲವನ್ನು ಬಿಜೆಪಿ ಅಭ್ಯರ್ಥಿ ಪ್ರತಾಪ್‌ ಸಿಂಹ ಕಡೆಗೆ ಹರಿಸಿದ್ದಾರೆ ಎನ್ನುವುದು ಎಷ್ಟರಮಟ್ಟಿಗೆ ಸರಿ? ರಾಜಕಾರಣ ಚುನಾವಣೆಗಷ್ಟೇ ಸೀಮಿತ. ಅದಾದ ಬಳಿಕ ವಿರೋಧಿ ಅಭ್ಯರ್ಥಿ ಜೊತೆ ವಿಶ್ವಾಸ, ಸ್ನೇಹ ಇರಬಾರದು ಎಂದೇ ನಿಲ್ಲವಲ್ಲ ಎಂದು ಶಿವಣ್ಣ ಕೇಳಿಸಿದ್ದಾರೆ.

ಸುಮಲತಾ ಅಂಬರೀಶ್‌ ಅವರು ಟೆರರಿಸ್ಟೇ?

ಸುಮಲತಾ ಕಾಂಗ್ರೆಸ್‌ನ ಮಾಜಿ ಸಚಿವರಾಗಿದ್ದ ಅಂಬರೀಶ್‌ ಪತ್ನಿ. ಅವರೇನು ಟೆರರಿಸ್ಟ್‌ ಅಲ್ಲ. ನಿಷೇಧಿತ ಉಗ್ರ ಸಂಘಟನೆಗೆ ಸೇರಿದವರೂ ಅಲ್ಲ. ಅವರೊಂದಿಗೆ ಊಟ ಮಾಡಿದ್ದರಲ್ಲಿ ಏನು ತಪ್ಪಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗ ಡಾ.ಬಿ.ಎಸ್‌.ಶಿವಣ್ಣ ಪ್ರಶ್ನಿಸಿದ್ದಾರೆ. ಚುನಾವಣೆ ಪೂರ್ವದಲ್ಲಿ ಈ ಬೆಳವಣಿಗೆ ನಡೆದಿದ್ದರೆ ಅದು ತಪ್ಪಾಗುತ್ತಿತ್ತು. ಈಗ ಚುನಾವಣೆ, ಮತದಾನ ಎಲ್ಲವೂ ಮುಗಿದಿದೆ. ಈಗ ಏನನ್ನೂ ಬದ ಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ.
ವಿನಾಕಾರಣ ಭೋಜನ ವಿಷಯಕ್ಕೆ ವಿಶೇಷ ಮಹತ್ವ ನೀಡಲಾಗುತ್ತಿದೆ. ಇದು ಸರಿಯಲ್ಲ ಎಂದಿದ್ದಾರೆ. ನಾವು ಸುಮಲತಾ ಅವರೊಂದಿಗೆ ಔತಣ ಕೂಟದಲ್ಲಿ ಭಾಗವಹಿಸಿದ್ದು ತಪ್ಪು ಎನ್ನುವುದಾದರೆ ಸಚಿವ ಡಿ.ಕೆ.ಶಿವಕುಮಾರ್‌ ಬಿಜೆಪಿ ನಾಯಕ ಎಸ್‌.ಎಂ.ಕೃಷ್ಣ ಅವರ ಮನೆಗೆ ಹೋಗಿದ್ದೇಕೆ? ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರತಾಪ್‌ಸಿಂಹ ಅವರ ಕಾಲಿಗೆ ಬಿದ್ದಿದ್ದೇಕೆ. ಇದನ್ನು ಮುಂದಿಟ್ಟುಕೊಂಡು ಸಚಿವ ಡಿ.ಕೆ. ಶಿವಕುಮಾರ್‌ ಒಕ್ಕಲಿಗ ಮತಗಳೆಲ್ಲವನ್ನು ಬಿಜೆಪಿ ಅಭ್ಯರ್ಥಿ ಪ್ರತಾಪ್‌ ಸಿಂಹ ಕಡೆಗೆ ಹರಿಸಿದ್ದಾರೆ ಎನ್ನುವುದು ಎಷ್ಟರಮಟ್ಟಿಗೆ ಸರಿ? ರಾಜಕಾರಣ ಚುನಾವಣೆಗಷ್ಟೇ ಸೀಮಿತ. ಅದಾದ ಬಳಿಕ ವಿರೋಧಿ ಅಭ್ಯರ್ಥಿ ಜೊತೆ ವಿಶ್ವಾಸ, ಸ್ನೇಹ ಇರಬಾರದು ಎಂದೇ ನಿಲ್ಲವಲ್ಲ ಎಂದು ಶಿವಣ್ಣ ಕೇಳಿಸಿದ್ದಾರೆ.

ಸಿಆರ್‌ಎಸ್‌ ಮತ್ತೂಂದು ವಿಡಿಯೋ ವೈರಲ್

ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ, ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಾರಿನಿಂದ ಬಂದಿಳಿಯುವ ಚಲುವರಾಯಸ್ವಾಮಿಯವರು, ಯಾವುದೋ ಒಂದು ಬೀದಿಯಲ್ಲಿ ಬೆಂಬಲಿಗರೊಂದಿಗೆ ಓಡಾಡುತ್ತಿರುವ ದೃಶ್ಯವಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಪರವಾಗಿ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಮನೆ ಮನೆಗೆ ತೆರಳಿ ಮತ ಪ್ರಚಾರ ನಡೆಸಿರುವುದಕ್ಕೆ ಇದು ಸಾಕ್ಷಿ ಎನ್ನುವುದು ಜೆಡಿಎಸ್‌ನವರು ಹೇಳುತ್ತಿರುವ ಮಾತಾಗಿದೆ.

ಮತದಾನ ಮುಗಿದ ಮೇಲೆ ಇವೆಲ್ಲವೂ ಅಪ್ರಸ್ತುತ. ವಿನಾಕಾರಣ ಇದಕ್ಕೆ ರಾಜಕೀಯ ಬಣ್ಣ ಕಟ್ಟಲಾಗುತ್ತಿದೆ. ಯಾರೋ ಏರ್ಪಡಿಸಿದ್ದ ಭೋಜನಕೂಟಕ್ಕೆ ಸುಮಲತಾ ಬಂದಿದ್ದಾರೆ. ನಾವೂ ಅಲ್ಲಿಗೆ ಹೋಗಿದ್ದೆವು. ಒಟ್ಟಿಗೆ ಕುಳಿತು ಊಟ ಮಾಡಿದ್ದೇವೆ. ದರಲ್ಲೇನು ತಪ್ಪು? ಲೋಕಸಭಾ ಚುನಾವಣೆ ಯಲ್ಲಿ ಜೆಡಿಎಸ್‌ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆಂದು ನಾವು ಯಾರಿಗೂ ಮಾತು ಕೊಟ್ಟಿರಲಿಲ್ಲ. ನಮ್ಮ ಬೆಂಬಲವನ್ನು ಯಾರೂ ಕೇಳಿಯೂ ಇರಲಿಲ್ಲ. ನಮ್ಮಿಂದ ಪಕ್ಷದ ಅಭ್ಯರ್ಥಿ ನಿಖೀಲ್‌ಗೆ ಯಾವುದೇ ತೊಂದರೆ ಯಾಗುವುದಿಲ್ಲ ಎಂದಷ್ಟೇ ಹೇಳಿದ್ದೆವು. ಅದ ರಂತೆ ನಡೆದುಕೊಂಡಿದ್ದೇವೆ. ಇದನ್ನು ತಪ್ಪಾಗಿ ಗ್ರಹಿಸಿದರೆ ನಾವೇನೂ ಮಾಡಲಾಗದು.
● ಚಲುವರಾಯಸ್ವಾಮಿ, ಮಾಜಿ ಸಚಿವ

ಸುಮಲತಾ ಅವರೊಂದಿಗೆ ಔತಣಕೂಟದಲ್ಲಿ ಭಾಗವಹಿಸಿದ್ದೆ. ಕಾಂಗ್ರೆಸ್‌ ಪಕ್ಷ ಬಿಡಬೇಡಿ ಎಂದು ಸಲಹೆಯನ್ನೂ ನೀಡಿದೆ. ನಾವೇನು ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಿರಲಿಲ್ಲ. ಚುನಾವಣೆ ಪೂರ್ವದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬರಬೇಕು ಜೆಡಿಎಸ್‌ನವರು ಯಾರೂ ನಮ್ಮನ್ನು ಬಂದು ಕೇಳಿರಲಿಲ್ಲ. ಹಾಗಾಗಿ ನಾವೂ ಹೋಗಿರಲಿಲ್ಲ. ಜೆಡಿಎಸ್‌ನವರಿಗೆ ನಮ್ಮ ಮೇಲೇಕೆ ಕೋಪ. ಸಚಿವ ರೇವಣ್ಣ ಹಾಸನದಲ್ಲಿ ಪುತ್ರನೊಂದಿಗೆ ಎಲ್ಲ ಕಾಂಗ್ರೆಸ್‌ ಮುಖಂಡರ ಮನೆಗೆ ಹೋಗಿ ಬೆಂಬಲ ಕೇಳಲಿಲ್ಲವೇ. ಅದೇ ರೀತಿ ಮುಖ್ಯ ಮಂತ್ರಿ ಕುಮಾರಸ್ವಾಮಿ ನಮ್ಮ ಬೆಂಬಲ ಕೇಳಬೇಕಿತ್ತು. ಜೆಡಿಎಸ್‌ ಸೋತರೆ ಆ ಪಕ್ಷದವರೇ ಕಾರಣವೇ ಹೊರತು ನಾವಲ್ಲ.
● ಚಂದ್ರಶೇಖರ್‌, ಮಾಜಿ ಶಾಸಕ

ಸುಮಲತಾ ಅವರೊಂದಿಗೆ ಔತಣಕೂಟದಲ್ಲಿ ಪಾಲ್ಗೊಂಡಿರುವುದಕ್ಕೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ. ಅಲ್ಲಿ ರಾಜಕೀಯ ವಿಚಾರಗಳು ಚರ್ಚೆಗೆ ಬರಲಿಲ್ಲ. ಭೋಜನ ಕೂಟಕ್ಕೆ ರಾಜಕೀಯ ಬಣ್ಣ ಕಟ್ಟುವುದರಲ್ಲಿ ಅರ್ಥವಿಲ್ಲ. ಅದೊಂದು ಆಕಸ್ಮಿಕ, ಸೌಹಾರ್ದ ಭೇಟಿ. ಪರಸ್ಪರ ಕುಶಲೋಪರಿ ವಿಚಾರಗಳನ್ನಷ್ಟೇ ಅಲ್ಲಿ ಮಾತನಾಡಿದ್ದೇವೆ. ಇದನ್ನು ಹೊರತುಪಡಿಸಿದರೆ ಬೇರಾವುದೇ ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಿಲ್ಲ.
● ನರೇಂದ್ರಸ್ವಾಮಿ, ಮಾಜಿ ಸಚಿವ

ಮಂಡ್ಯ ಮಂಜುನಾಥ್‌
Advertisement

Udayavani is now on Telegram. Click here to join our channel and stay updated with the latest news.

Next