Advertisement
ಕೋಡಂಬಹಳ್ಳಿ ಗ್ರಾ.ಪಂ. ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದ ಅವರು, ಚನ್ನಪಟ್ಟಣ ಕ್ಷೇತ್ರಕ್ಕೆ ಕುಮಾರಣ್ಣ 1,500 ಕೋಟಿ ರೂ. ಅನುದಾನ ತಂದಿದ್ದಾರೆ. ಇದು ಕೇವಲ ನಿಖಿಲ್ ಕುಮಾರಸ್ವಾಮಿ ಗೆಲುವು, ಸೋಲಿನ ವಿಚಾರ ಅಲ್ಲ. ಪ್ರಾದೇಶಿಕ ಪಕ್ಷಗಳ ಅಳಿವು, ಉಳಿವಿನ ಪ್ರಶ್ನೆ. ಪಕ್ಷ ಉಳಿಯಬೇಕು ಅಂದ್ರೆ ಬೆಂಬಲ ಕೊಡಿ ಎಂದು ಮನವಿ ಮಾಡಿದರು.
Related Articles
Advertisement
ಕಾಂಗ್ರೆಸ್ ನಾಯಕರೂ ಚುರುಕುಕೈ ಪಡೆ ಕ್ಷೇತ್ರದಲ್ಲಿ ಇದುವರೆಗೆ ಪ್ರಚಾರ ಆರಂಭಿಸಿಲ್ಲವಾದರೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಮುಸ್ಲಿಂ ವಾರ್ಡುಗಳಲ್ಲಿ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಹುರಿದುಂಬಿಸಿದರೆ, ಇತ್ತ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯರೆಡ್ಡಿ ಭಾನುವಾರ ರಾತ್ರಿ ಮಹಿಳಾ ಮುಖಂಡರ ಸಭೆ ನಡೆಸಿದರು. ತುರುಸಿನ ಪ್ರಚಾರ: ಸಂಡೂರು ಹಾಗೂ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಪ್ರಚಾರ ಜೋರಾಗಿದೆ. ಕುರಗೋಡಿನಲ್ಲಿ ಭೈರತಿ ಬಸವರಾಜ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಪರ ಪ್ರಚಾರ ನಡೆಸಿದರು. ಕಾಂಗ್ರೆಸ್ಸಿನೊಳಗಿನ ಅಸಮಾಧಾನದ ಪ್ರತಿಫಲವಾಗಿ ಬಿಜೆಪಿ ಗೆಲ್ಲುವ ಎಲ್ಲ ಲಕ್ಷಣ ಇವೆ ಎಂದರು. ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಅನೀಲ್ ಕುಮಾರ್ ಸೇರಿದಂತೆ ಇತರರು ಸಾಥ್ ನೀಡಿದರು. ಶಿಗ್ಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್‌ಖಾನ್ ಪಠಾಣ ಪರ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಪ್ರಚಾರ ನಡೆಸಿದ್ದಾರೆ.