ದೇವದುರ್ಗ: ಮಸರಕಲ್ ಗ್ರಾಮದ ಹೊರ ವಲಯದಲ್ಲಿರುವ ಬಾಬಯ್ಯ ದರ್ಗಾದಲ್ಲಿ ಸೆ.11ರಂದು ಜೆಡಿಎಸ್ ಪಕ್ಷದ ವತಿಯಿಂದ ಅಲ್ಪಾಸಂಖ್ಯಾತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಪಕ್ಷದ ಮುಖಂಡರಾದ ಕರೆಮ್ಮ ಗೋಪಾಲಕೃಷ್ಣ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದರು. ಪಕ್ಷ ಸಂಘಟನೆ ಹಿನ್ನೆಲೆ ಸ್ವಯಂ ಪೇರಿತರಾಗಿ ಅಲ್ಪಾಸಂಖ್ಯಾತರ ಮುಖಂಡರೇ ಸಮಾವೇಶ ಆಯೋಜಿಸಿದ್ದಾರೆ. ಪಟ್ಟಣ ಸೇರಿ ತಾಲೂಕಿನಾದ್ಯಂತ ಸಮಾವೇಶದಲ್ಲಿ 8ರಿಂದ 10 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದರು.
ಜೆಡಿಎಸ್ ಪಕ್ಷದ ಅಲ್ಪಾಸಂಖ್ಯಾತರ ರಾಜ್ಯ ಮುಖಂಡರು ಭಾಗವಹಿಸಲಿದ್ದಾರೆ. ಸಿಂಧನೂರಿನ ಶಾಸಕ ವೆಂಕಟರಾವ್ ನಾಡಗೌಡ, ಜಿಲ್ಲಾಧ್ಯಕ್ಷ ಸೇರಿ ಇತರೆ ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ಪಕ್ಷ ತೊರೆದು ನೂರಾರು ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರಲಿದ್ದಾರೆ ಎಂದರು.
ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡರು ಕೊಟ್ಟಿರುವ ನೀರಾವರಿ ಕೊಡುಗೆ ಈ ಬಾರಿ ಮತದಾರರ ಋಣ ತೀರುಸುವ ಜತೆಗೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಸಮಾವೇಶಕ್ಕೆ ಈಗಾಗಲೇ ಸಿದ್ಧತೆ ನಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಾಸಂಖ್ಯಾತ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ತಬುÕಮ್ ಶಾಲಂ, ಶರಣಪ್ಪ ಬಳೆ, ಇಸಾಕ ಮೇಸ್ತ್ರೀ, ಶಾಲಂ ಉದ್ದಾರ, ಶಾಮಸುಂದರ ಅಬಕಾರಿ, ದೊಡ್ಡ ರಂಗಣ್ಣ, ಶೇಕ್ ಮುನ್ನಭೆ„, ರೇಣುಕಾ, ದಾವುದ ಹೌಟಿ ಸೇರಿದಂತೆ ಇತರರು ಇದ್ದರು.