Advertisement

ಅಧ್ಯಕ್ಷರು, ಸಿಇಒ ವಿರುದ್ಧ ಜೆಡಿಎಸ್‌ ಸದಸ್ಯರ ಆಕ್ರೋಶ

03:49 PM Oct 17, 2020 | Suhan S |

ಮಂಡ್ಯ: ಜಿಪಂ ಅಧ್ಯಕ್ಷರು ಹಾಗೂ ಸಿಇಒ ಕಾನೂನುಬಾಹಿರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದುಜಿಪಂನ ಜೆಡಿಎಸ್‌ ಸದಸ್ಯರು ಪ್ರತಿಭಟನೆ ನಡೆಸಿದರು.

Advertisement

ನಗರದ ಜಿಪಂ ಕಚೇರಿ ಮುಂದೆ ಜಮಾಯಿಸಿದ ಸದಸ್ಯರು, ಅಧ್ಯಕ್ಷೆ ನಾಗರತ್ನಸ್ವಾಮಿ ಹಾಗೂ ಸಿಇಒ ಎಸ್‌.ಎಂ.ಜುಲ್ಫಿಖಾರ್‌ ಉಲ್ಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕಳೆದ 5 ಸಾಮಾನ್ಯ ಸಭೆಗಳು ಕೋರಂ ಅಭಾವದಿಂದ ಮುಂದೂಡಿಕೆಯಾಗಿದೆ. ಇದರಿಂದ ಜಿಲ್ಲೆಯ ಅಭಿವೃದ್ಧಿಕುಂಠಿತವಾಗಿದೆ. ಆದ್ದರಿಂದ ಜಿಪಂ ಅಧ್ಯಕ್ಷರ ಉಲ್ಲೇಖೀತ ಟಿಪ್ಪಣಿಯಲ್ಲಿ ತಿಳಿಸಿರುವಂತೆಎಲ್ಲ ಇಲಾಖೆಗಳಿಂದ ಪ್ರಸ್ತಾವನೆಗಳನ್ನು ಪಡೆದು ಕ್ರಿಯಾ ಯೋಜನೆಗಳನ್ನು ಸರ್ಕಾರದಿಂದ ಅನುಮೋದಿಸಿಕೊಡಲು ಕ್ರಮ ಕೈಗೊಳ್ಳುವಂತೆ ಪತ್ರ ಬರೆಯುವ ಮೂಲಕ ಅಧ್ಯಕ್ಷರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದುಕಿಡಿಕಾರಿದರು.

ಅಧ್ಯಕ್ಷರಿಂದ ಸರ್ವಾಧಿಕಾರಿ ಧೋರಣೆ: ಜಿಪಂ ಸದಸ್ಯ ರವಿ ಮಾತನಾಡಿ, ಅಧ್ಯಕ್ಷೆ ನಾಗರತ್ನಸ್ವಾಮಿಅವರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದಾರೆ. ಸಾಮಾನ್ಯ ಸಭೆ ಕರೆದು ಕೋರಂ ಅಭಾವ ಎಂದು ಬಿಂಬಿಸಿ, ಎಲ್ಲ ಕೆಲಸ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸರ್ಕಾರದ ಸುಗ್ರೀವಾಜ್ಞೆಯಂತೆ ಪಂಚಾಯತ್‌ ರಾಜ್‌ ಕಾಯ್ದೆಯಂತೆ ಇವರ ಅವಧಿ ಮುಗಿದಿದ್ದರೂ ಅಧಿಕಾರದಲ್ಲಿ ಮುಂದುವರಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನುದಾನ ಹಂಚಿಕೆಯಲ್ಲಿ ತಾರತಮ್ಯ: ಅನುದಾನ ಹಂಚಿಕೆಯಲ್ಲೂ ತಾರತಮ್ಯ ಮಾಡುತ್ತಾ, ತಮ್ಮ ಕ್ಷೇತ್ರ ಮದ್ದೂರಿಗೆ ಆದ್ಯತೆ ನೀಡುತ್ತಿದ್ದಾರೆ. ಬೇರೆ ಯಾವ ಸದಸ್ಯರಿಗೂ ಅನುದಾನ ಹಂಚಿಕೆ ಮಾಡಿಲ್ಲ. ಜಿಪಂ ಅಧ್ಯಕ್ಷರ ಅವಧಿ ಮುಗಿದಿರುವುದರಿಂದ ಹಣಕಾಸು ಸ್ಥಾಯಿ ಸಮಿತಿ ಕರೆಯುವ ಅಧಿಕಾರವಿಲ್ಲ. ಆದರೂ, ಕರೆದಿದ್ದರಿಂದ ಸಭೆಗೆ ಹಾಜರಾಗಿಲ್ಲ. ಜಿಲ್ಲೆಯ ಸಮಸ್ಯೆಗಳಿಗೆ ಹಾಗೂ ಅಭಿವೃದ್ಧಿಗೆ ನಾವು ಸ್ಪಂದಿಸುತ್ತಿದ್ದು, ಅಧ್ಯಕ್ಷರು ಯಾವುದೇ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.

ಜಿಲ್ಲೆಯ ಅಭಿವೃದ್ಧಿ ಕುಂಠಿತ: ಅಧಿಕಾರಕ್ಕೆ ಅಂಟಿಕೊಂಡಿರುವ ನಾಗರತ್ನಸ್ವಾಮಿ ಅವರು, ಕೇವಲ ಇರುವ ಅವಧಿಯನ್ನು ಮುಗಿಸುವ ಧಾವಂತದಲ್ಲಿದ್ದಾರೆ. ಇದರಿಂದ ಕಳೆದ ಒಂದು ವರ್ಷದಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ಇವರ ಜೊತೆಗೆ ಜಿಪಂ ಸಿಇಒ ಶಾಮೀಲಾಗಿ ಕಾನೂನು ಬಾಹಿರ ಕರ್ತವ್ಯ ನಿರ್ವಹಿಸಲು ಮುಂದಾಗಿದ್ದಾರೆ. ಆದ್ದರಿಂದ ಕೂಡಲೇ ಕಾನೂನು ಬಾಹಿರ ಕರ್ತವ್ಯ ನಿಲ್ಲಿಸಿ, ಮುಂದೂಡಿದ ಸದಸ್ಯರ ಸಭೆ ಕರೆಯಬೇಕು. ಇದರ ಬಗ್ಗೆ ಸರ್ಕಾರಕ್ಕೆ ಸಿಇಒ ಅವರು ಪತ್ರ ಬರೆದು ವಿಶೇಷ ಸಾಮಾನ್ಯ ಸಭೆ ಕರೆಯಬೇಕು. ಸರ್ಕಾರ ಮೀಸಲಾತಿ ನಿಗದಿಪಡಿಸಿ ಚುನಾವಣೆ ನಡೆಸುವವರೆಗೂ ಅಧ್ಯಕ್ಷರು ಯಾವುದೇ ಅಧಿಕಾರ ಚಲಾಯಿಸಬಾರದು. ಸಭೆ ನಡೆಸಿ ಜಿಲ್ಲೆಗೆ ಅಭಿವೃದ್ಧಿ ಕೆಲಸಗಳಿಗೆ ಅನುಮೋದನೆ ಪಡೆಯಬೇಕು. ಕೂಡಲೇ ಸರ್ಕಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.

Advertisement

ಪತ್ರ ಬರೆಯುವ ಭರವಸೆ: ಸದಸ್ಯರ ಮನವಿ ಆಲಿಸಿದ ಜಿಪಂ ಸಿಇಒ ಎಸ್‌.ಎಂ.ಜುಲ್ಫಿಖಾರ್‌

ಉಲ್ಲಾ, ಸರ್ಕಾರಕ್ಕೆ ಪತ್ರ ಬರೆದು ವಿಶೇಷ ಸಾಮಾನ್ಯ ಸಭೆ ಕರೆದು ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮೋದನೆಗೆಕ್ರಮ ವಹಿಸಲಗುವುದು ಎಂದು ಭರವಸೆ ನೀಡಿದರು.

ಸದಸ್ಯರಾದ ಸಿ.ಅಶೋಕ್‌, ಬಿ.ಎಲ್‌.ದೇವರಾಜು, ಎಚ್‌.ಟಿ.ಮಂಜು, ಹನುಮಂತು, ಗಾಯಿತ್ರಿರೇವಣ್ಣ, ಪ್ರೇಮಕುಮಾರಿ, ಸುಧಾಜಯಶಂಕರ್‌, ಡಿ.ಕೆ. ಶಿವಪ್ರಕಾಶ್‌, ರಾಮದಾಸು, ತಾಪಂ ಅಧ್ಯಕ್ಷ ದಾಸೇಗೌಡ ಇದ್ದರು.

ಸರ್ಕಾರದಿಂದಲೇ ಸ್ಪಷ್ಟತೆ ಇಲ್ಲ :  ಅಧ್ಯಕ್ಷ-ಉಪಾಧ್ಯಕ್ಷರ ಅವಧಿ ಮುಗಿದಿರುವುದರಿಂದಕ್ರಮಕೈಗೊಳ್ಳಲು ಸ್ಪಷ್ಟೀಕರಣಕ್ಕೆ ಜಿಪಂ ಸಿಇಒ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದಕ್ಕೆ ಸ್ಪಷ್ಟೀಕರಣ ನೀಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಸರ್ಕಾರದ ಪ್ರಧಾನ ಕಾರ್ಯದರ್ಶಿ, ಪ್ರಸ್ತುತ ಸರ್ಕಾರವು ತಿದ್ದುಪಡಿಗೆ ಮುಂಚಿತವಾಗಿ 5 ವರ್ಷಗಳ ಅವಧಿಗೆ ಮೀಸಲಾತಿ ನಿಗದಿಪಡಿಸಿರುವುದರಿಂದ ಸರ್ಕಾರವು 30 ತಿಂಗಳ ಅವಧಿಗೆ ಮೀಸಲಾತಿ ಬದಲಾಯಿಸಿ,ಅಧಿಸೂಚಿಸುವವರೆಗೂ ಜಾರಿ ಮಾಡಲು ಸಾಧ್ಯವಿಲ್ಲ ಎಂದು ನಿರ್ದೇಶಿಸಿದ್ದಾರೆ. ಇದು ಗೊಂದಲಕ್ಕೆ ಕಾರಣವಾಗಿದೆ. ಇದರ ವಿರುದ್ಧ ಸ್ಪಷ್ಟನೆ ಕೇಳಿರುವ ಸದಸ್ಯರು, ಸರ್ಕಾರದ ಅಧಿಸೂಚನೆಯಂತೆ ಕೆಪಿಆರ್‌ಎ ಕಾಯ್ದೆಯ ತಿದ್ದುಪಡಿ ವಿಧೇಯಕ 2020ರಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಅವಧಿ 30 ತಿಂಗಳಾಗಿದೆ. ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಅನುಮೋದನೆಗೊಂಡು ರಾಜ್ಯಪಾಲರ ಮೂಲಕ ಸುಗ್ರೀವಾಜ್ಞೆಯನ್ನು ಮಾರ್ಚ್ ನಲ್ಲಿಯೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರು, ಸರ್ಕಾರದ ಸ್ಪಷ್ಟೀಕರಣದಲ್ಲಿ ಮೀಸಲಾತಿ ನಿಗದಿಪಡಿಸುವ ತನಕ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವುದು ಶಾಸಕಾಂಗದ ತೀರ್ಮಾನಗಳಿಗೆ ವಿರುದ್ಧವಾಗಿದೆ. ಅಲ್ಲದೆ, ಇದಕ್ಕೆ ಇನ್ನೂ ಸ್ಪಷ್ಟೀಕರಣ ನೀಡಿಲ್ಲ ಎಂದು ಸದಸ್ಯರು ವಾದಿಸಿದರು.

ಅಧ್ಯಕ್ಷರ ಅವಧಿ ಮುಗಿದಿದೆ. ಆದರೂ ಇವರು ಸಭೆಕರೆದಿದ್ದರು. ಅದಕ್ಕಾಗಿಯಾವ ಸದಸ್ಯರು ಹೋಗಿಲ್ಲ. ಸರ್ಕಾರ ಇದರ ಬಗ್ಗೆಕ್ರಮ ಕೈಗೊಳ್ಳಬೇಕು.ಕೆಪಿಆರ್‌ಎ ಕಾಯ್ದೆಯ ಸುಗ್ರೀವಾಜ್ಞೆಯಂತೆಕ್ರಮಕೈಗೊಳ್ಳಬೇಕು. ಕೂಡಲೇ ಸರ್ಕಾರ ಮೀಸಲಾತಿ ನಿಗದಿಪಡಿಸಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಸಬೇಕು. ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗಲಿ. ಇದರ ಬಗ್ಗೆ ಸರ್ಕಾರಕ್ರಮ ಕೈಗೊಳ್ಳದಿದ್ದರೆ ಹೋರಾಟ ಮುಂದುವರಿಯಲಿದೆ.- ಸಿ.ಅಶೋಕ್‌, ಅಧ್ಯಕ್ಷ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ  ಸಿ.ಅಶೋಕ್‌, ಅಧ್ಯಕ್ಷ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ

ಜಿಪಂ ಸಾಮಾನ್ಯ ಸಭೆಕೇವಲ ಕಾಟಾಚಾರಕ್ಕೆಕರೆದು 5 ನಿಮಿಷಕೂತು ನಿಧನರಾದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಭೆಗೆಯಾರೂ ಬಂದಿಲ್ಲ ಎಂದು ಸಭೆ ಮುಂದೂಡಿದ್ದಾರೆ. ಈ ಸರ್ವಾಧಿಕಾರಿ ಧೋರಣೆ ಸರಿಯಲ್ಲ. ಅಧಿಕಾರವಧಿ ಮುಕ್ತಾಯಗೊಂಡಿದೆ. ಅದಕ್ಕೆ ಅನುಗುಣವಾಗಿ ನಿಯಮದಂತೆ ಕರ್ತವ್ಯ ನಿರ್ವಹಿಸಬೇಕು. ಎಚ್‌.ಎನ್‌.ಯೋಗೇಶ್‌, ಜಿಪಂ ಸದಸ್ಯ

ಸರ್ಕಾರಕ್ಕೆ ಪತ್ರ ಬರೆದು ಸ್ಪಷ್ಟೀಕರಣ ಪಡೆದುಕೊಂಡಿದ್ದು, ಅದರಂತೆ ಕಾನೂನು ರೀತಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸರ್ಕಾರವೇ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ನಿಗದಿಪಡಿಸುವವರೆಗೂ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಅ.13ರಂದು ಸಭೆ ನಡೆದಿದ್ದರೆಯಾವುದೇ ಗೊಂದಲ ಇರುತ್ತಿರಲಿಲ್ಲ. ನಾನುಯಾರ ಪರವೂ ಕೆಲಸ ಮಾಡುತ್ತಿಲ್ಲ. ಸರ್ಕಾರದ ನಿರ್ದೇಶನದಂತೆಕಾನೂನು ರೀತಿ ಕರ್ತವ್ಯನಿರ್ವಹಿಸುತ್ತಿದ್ದೇನೆ ಎಸ್‌.ಎಂ.ಜುಲ್ಫಿಖಾರ್‌ ಉಲ್ಲಾ, ಸಿಇಒ, ಮಂಡ್ಯ

Advertisement

Udayavani is now on Telegram. Click here to join our channel and stay updated with the latest news.

Next