ಕಲಬುರಗಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ, ವಾರ್ಡ್ ಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಲ್ಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಹೇಳಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಗ್ರಾಮ ಪಂಚಾಯಿತಿ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಜರುಗಿತು. ಎಲ್ಲ ಗ್ರಾಪಂಗಳಲ್ಲೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ನಿಲ್ಲಿಸಲು ನಿರ್ಧರಿಸಲಾಯಿತು. ಬೆಂಬಲಿತ ಅಭ್ಯರ್ಥಿಗಳು ಜಯಿಸಲು ಪಕ್ಷದಿಂದ ಎಲ್ಲ ರೀತಿ ಸಹಕಾರ ನೀಡಲಿದೆ ಎಂದು ಹೇಳಿದರು. ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್ ಗ್ರಾಮ ಪಂಚಾಯತಿ ಚುನಾವಣೆ ಎದುರಿಸಲು ಸಿದ್ಧರಾಗಿ ಎಂದರು.
ಮುಖಂಡರಾದ ನಾಸಿರ ಹುಸೇನ ಉಸ್ತಾದ್, ಮನೋಹರ ಪೋದ್ದಾರ, ಮಹ್ಮದ ಅಲಿ ಇನಾಮದಾರ, ಕೆ.ಸಿ.ಕೊಬಾಳ, ಗುರುನಾಥ ಪೂಜಾರಿ, ಕೃಷ್ಣ ರೆಡ್ಡಿ, ಶಂಕರ ಕಟ್ಟಿಸಂಗಾವಿ, ಸಿದ್ದು ಮಾವನೂರ, ಚಂದ್ರಶೇಖರ ಮಲ್ಲಾಬಾದ, ಮಹೆಮೂದ ಖೂರೇಷಿ, ಮಲ್ಲಿಕಾರ್ಜುನ್ ಸಂಗಾಣಿ, ಬಸವರಾಜ ಸಿದ್ರಾಮಗೋಳ, ವಲಸಲಕುಮಾರ, ಮೈನುದ್ದೀನ, ರಾಮಚಂದ್ರ ಅಟ್ಟೂರ, ಸುನಿತಾ ಕೋರವಾರ, ಮಹಾನಂದ ಪಡಶೆಟ್ಟಿ, ಶಕುಂತಲಾ ಪಾಟೀಲ, ಸುನಿತಾ ತಳವಾರ, ಪ್ರವೀಣ ಜಾಧವ, ರಾಘವೇಂದ್ರ ಕೆರಂಗಿ, ರವೀಂದ್ರ ರಂಜೇರಿ, ಸುಭಾಶ ಕಾಬಾ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ರೈತರ ಮೇಲೆ ದೌರ್ಜನ್ಯಕ್ಕೆ ಖಂಡನೆ :
ಆಳಂದ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೆಹಲಿ ಚಲೋ ಕೈಗೊಂಡ ರೈತರನ್ನು ತಡೆದು ದೌರ್ಜನ್ಯ ಎಸಗಿದ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳುವಂತೆ ಹಾಗೂ ಇತರೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಖೀಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಪಾಂಡುರಂಗ ಮಾವೀನಕರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖಂಡ ಸುಧಾಮ ಧನ್ನಿ, ದತ್ತಾತ್ರೇಯ ಕಬಾಡೆ, ಮೈಲಾರಿ ಜೋಗೆ, ಫಯಾಜ್ ಸೈಯದ್, ಆಶಾಕ್ ಮುಲ್ಲಾ, ಚಂದ್ರಕಾಂತ ಖೋಬ್ರೆ ಪಾಲ್ಗೊಂಡಿದ್ದರು.
ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಮೂಲಕ ಪ್ರಧಾನಿಗೆ ಮನವಿ ಪತ್ರ ಸಲ್ಲಿಸಿ, ಕೃಷಿ ಕೂಲಿಕಾರರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.