Advertisement
ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಮುಸ್ಲಿಂ ಮತಗಳು ಬಂದಿಲ್ಲ ಎಂಬ ಮಾಧ್ಯಮದವರು ಪ್ರಶ್ನೆಗೆ, ನನಗೆ ಹೆಚ್ಚಿನ ಮತ ಬಂದಿವೆ. ಆದರೆ ಒಂದು ಸಮುದಾಯದ ಮತಗಳು ಬಂದಿಲ್ಲ. ದೇವೇಗೌಡರ ಕೊಡುಗೆಯನ್ನು ನೆನಪಿಸಿ ಕೊಂಡಿಲ್ಲ, ನಮ್ಮ ಆವಶ್ಯಕತೆ ಅವರಿಗೆ ಇಲ್ಲ ಅನಿಸುತ್ತೆ. ಸೋಲಿನ ಅಂತರದಲ್ಲಿ ಆ ಸಮುದಾಯದವನ್ನು ಬದಿಗಿಟ್ಟು ನೋಡಿದರೆ ಸಮಬಲದ ಹೋರಾಟ ಮಾಡಿದ್ದೇವೆ ಎಂದರು.
ಚಿಕ್ಕಮಗಳೂರು: ಕಡೂರು ಮೂಲದ ಜೆಡಿಎಸ್ ಕಾರ್ಯ ಕರ್ತ ಹರ್ಷಿತ್ ರಕ್ತದಲ್ಲಿ ಪತ್ರ ಬರೆದು ನಿಖೀಲ್ಗೆ ರವಾನಿಸಿದ್ದು, ಸೋಲಿನಿಂದ ಧೃತಿಗೆಡದಂತೆ ಧೈರ್ಯ ತುಂಬಿದ್ದಾರೆ. “ನೀವು ಚುನಾವಣೆಯಲ್ಲಿ ಸೋತಿರ ಬಹುದು. ಆದರೆ ಜನರ ಮನಸ್ಸಿನ ಲ್ಲಿದ್ದೀರಿ. ಒಂದಲ್ಲ ಒಂದು ದಿನ ಒಳ್ಳೆಯತನ ಗೆದ್ದೇ ಗೆಲ್ಲುತ್ತದೆ. ಧೈರ್ಯವಾಗಿರಿ’ ಎಂದು ಬರೆದಿದ್ದಾರೆ.