Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ರಾಜ್ಯಾದ್ಯಂತ 70 ಶಾಸಕರು ಜೆಡಿಎಸ್ ಸೇರಲಿದ್ದಾರೆ. ಕಾಂಗ್ರೆಸ್- ಬಿಜೆಪಿ ಎರಡೂ ಪಕ್ಷದ ನಾಯಕರು ಪಕ್ಷ ಸೇರಲಿದ್ದಾರೆ. ರಾಜ್ಯದಲ್ಲಿ ಅಕ್ಟೋಬರ್ ನಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆಯಲಿದೆ ಎಂದರು.
Related Articles
Advertisement
ಈಗಾಗಲೇ ನಾವು ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದೇವೆ. ಈಗಲೂ ನಮ್ಮ ಪಕ್ಷಕ್ಕೆ ಸಾಕಷ್ಟು ಟಿಕೆಟ್ ಆಕಾಂಕ್ಷಿಗಳು ಬರುತ್ತಿದ್ದಾರೆ. ಬೆಜೆಪಿಗೆ ಜನರ ಬಗ್ಗೆ ಕಾಳಜಿ ಇಲ್ಲ, ಬರೀ ವಿವಾದ ಸೃಷ್ಠಿ ಮಾಡುತ್ತಿದ್ದಾರೆ ಎಂದರು.
ಮುಸ್ಲಿಂಮರ ಮಾಂಸದಂಗಡಿ ಬಹಿಷ್ಕಾರ ಮಾಡುತ್ತೇವೆ ಎಂಬ ಪ್ರಮೋದ ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟ ಅವರು, ಅಯ್ಯೋ ಆ ಮುತಾಲಿಕ್ ಗೆ ತಲೆಯಲ್ಲಿ ಕೂದಲಿಲ್ಲ. ಅದಕ್ಕೆ ಯಾಕೆ ಕಟ್ಟಿಂಗ್ ಶಾಪ್ ಬೇಕೆಂದು ವ್ಯಂಗ್ಯವಾಡಿದರು.
ಸಂಸದ ಸಂಗಣ್ಣ ಕರಡಿ, ಇಕ್ಬಾಲ್ ಅನ್ಸಾರಿ ಜೆಡಿಎಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರೇ ಬಂದರೂ ಜೆಡಿಎಸ್ ಗೆ ಸ್ವಾಗತ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯರ ಬಗ್ಗೆ ನನಗೆ ಅನುಕಂಪ ಇದೆ. ಅವರು ಅಸೆಂಬ್ಲಿಗೆ ಬರಬೇಕು ಅನ್ನೋದು ನನಗೂ ಆಸೆ ಇದೆ. ಅವರು ಎಲ್ಲಿ ನಿಂತರೂ ಗೆಲ್ಲುವುದು ಕಷ್ಟ ಇದೆ. ಸಿದ್ದರಾಮಯ್ಯ ದಾರಿ ತಪ್ಪಿದ್ದಾರೆ. ಸಿದ್ದರಾಮಯ್ಯರನ್ನು ನಾನೇ ಸಿಎಂ ಮಾಡಿದ್ದೇನೆ. ಸಿದ್ದರಾಮಯ್ಯ ಬಾದಾಮಿಯಲ್ಲಿ ಗೆಲ್ಲಲು ನಾನೇ ಕಾರಣ. ಹಗಲೆಲ್ಲ ಒಂದು ಕಡೆ, ರಾತ್ರಿ ಇಡೀ ಬಾದಾಮಿಯಲ್ಲಿ ಕೆಲಸ ಮಾಡಿ ಸಿದ್ದರಾಮಯ್ಯ ಗೆಲ್ಲಿಸಿದ್ದೇವೆ ಎಂದರು.
ಮಾಜಿ ಸಿಎಂ ಯಡಿಯೂರಪ್ಪ ಕ್ಷೇತ್ರ ತ್ಯಾಗ ಮಾಡಿಲ್ಲ. ಬಿಜೆಪಿ ಯಡಿಯೂರಪ್ಪರನ್ನು ಹೊರಗೆ ದಬ್ಬಿದೆ. ಇವರು ಕ್ಷೇತ್ರ ಬಿಟ್ಟು ಕೊಡೋದಲ್ಲ. ಬಿಜೆಪಿಗರು ಟಿಕೆಟ್ ಕೊಡೋದಿಲ್ಲ ಅಂತಾ, ಘೋಷಣೆ ಮಾಡಿದ್ದಾರೆ. ಲಿಂಗಾಯತರ ವೋಟ್ ಪಡೆದ ಬಿಜೆಪಿ, ಯಡಿಯೂರಪ್ಪರಿಗೆ ವಂಚನೆ ಮಾಡಿದೆ ಎಂದರು.