ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಮೂರನೇ ಸ್ಥಾನಕ್ಕಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಕಾಂಗ್ರೆಸ್‌ನಿಂದ ಈಗಾಗಲೇ ಮೂರನೇ ಅಭ್ಯರ್ಥಿಘೋಷಣೆ ಮಾಡಿ, ನಾಮ ಪತ್ರ ಸಲ್ಲಿಕೆ ಮಾಡಲಾಗಿದ್ದರೂ, ಜೆಡಿಎಸ್ ಕೂಡ ತಮ್ಮ ಅಭ್ಯರ್ಥಿ ಗೆಲುವಿಗಾಗಿ ತಂತ್ರಗಾರಿಕೆ ನಡೆಸುತ್ತಿದೆ.
ಹೀಗಾಗಿ ಹೈಕಮಾಂಡ್ ಮಟ್ಟದಲ್ಲಿ ಜೆಡಿಎಸ್ ಹೊಂದಾಣಿಕೆ ಮಾತುಕತೆ ಮುಂದುವರಿಸಿರುವುದರಿಂದ ನಾಮಪತ್ರ ವಾಪಸ್ ಪಡೆಯುವ ದಿನದವರೆಗೂ ಮೂರನೇ ಅಭ್ಯರ್ಥಿಯಾಗಿ ಯಾರು ರಾಜ್ಯಸಭೆಗೆ ಹೋಗುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಇದರ ನಡುವೆಯೇ ಒಂದು ವೇಳೆ ಕಾಂಗ್ರೆಸ್ ಜತೆಗೆ ಮಾತುಕತೆ ಯಶಸ್ವಿಯಾಗದಿದ್ದರೆ, ಕಾಂಗ್ರೆಸ್‌ನಲ್ಲಿನ ಅತೃಪ್ತ ಹಾಗೂ ಟಿಕೆಟ್ ಸಿಗದೇ ಇರುವ ಮುನ್ಸೂಚನೆ ಪಡೆದಿರುವ ಶಾಸಕರನ್ನು ಸಂಪರ್ಕಿಸುವ ಪ್ರಯತ್ನವನ್ನೂ ಜೆಡಿಎಸ್ ಮಾಡುತ್ತಿದೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್‌ನಿಂದ ಸೋಮವಾರ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಹಾಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಬಿಜೆಪಿಗೆ ಸೇರ್ಪಡೆಯಾಗಿ ನಾಮಪತ್ರ ಸಲ್ಲಿಸಿದ್ದರೆ, ಜೆಡಿಎಸ್‌ನಿಂದ ಬಿ.ಎಂ. ಫಾರೂಕ್ ಮತ್ತೂಮ್ಮೆ ನಾಮಪತ್ರ ಸಲ್ಲಿಸಿದ್ದಾರೆ. ಮಾರ್ಚ್ 13ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮಾರ್ಚ್ 15 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ.
ಯಾರು ಅಭ್ಯರ್ಥಿಗಳು ?
ಎಲ್. ಹನುಮಂತಯ್ಯ-ಕಾಂಗ್ರೆಸ್
ನಾಸೀರ್ ಹುಸೇನ್-ಕಾಂಗ್ರೆಸ್
ಜಿ.ಸಿ. ಚಂದ್ರಶೇಖರ್-ಕಾಂಗ್ರೆಸ್
ರಾಜೀವ್ ಚಂದ್ರಶೇಖರ್-ಬಿಜೆಪಿ
ಬಿ.ಎಂ.ಫಾರೂಕ್-ಜೆಡಿಎಸ್.