Advertisement

ಯೋಜನೆ ವಿಳಂಬಕ್ಕೆ ಜೆಡಿಎಸ್‌ ಕಾರಣ

02:35 PM Jan 23, 2022 | Team Udayavani |

ಅರಸೀಕೆರೆ: ನಗರದ ಒಳಚರಂಡಿ ಯೋಜನೆ ನನೆಗುದಿಗೆ ಬೀಳಲು ಕ್ಷೇತ್ರದ ಶಾಸಕರು, ನಗರಸಭೆ ಮಾಜಿ ಅಧ್ಯಕ್ಷರು ಹಾಗೂ ಜೆಡಿಎಸ್‌ ಮುಖಂಡರ ತಾತ್ಸಾರ ಮನೋಭಾವನೆ ಕಾರ್ಯ ವೈಖರಿಯೇ ಕಾರಣವಾಗಿದೆ ಎಂದು ನಿಕಟಪೂರ್ವ ಸಿಎಂ ರಾಜಕೀಯ ಕಾರ್ಯದರ್ಶಿ ಎನ್‌.ಆರ್‌ ಸಂತೋಷ್‌ ಹಾಗೂ ನಗರ ಸಭೆ ಅಧ್ಯಕ್ಷ ಸಿ. ಗಿರೀಶ್‌ ಆರೋಪಿಸಿದರು.

Advertisement

ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 10 ವರ್ಷಗಳ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸ್ಪಂದಿಸುವನಿಟ್ಟಿನಲ್ಲಿ ರಾಜ್ಯ ಕುಡಿವ ನೀರು ಸರಬರಾಜುಹಾಗೂ ಒಳಚರಂಡಿ ಅಭಿವೃದ್ಧಿ ಮಂಡಳಿಯಿಂದ 121 ಕೋಟಿ ರೂ. ವೆಚ್ಚದ ಕುಡಿವ ನೀರಿನ ಕಾಮಗಾರಿ ಹಾಗೂ 64 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿದ್ದ ಒಳಚರಂಡಿಕಾಮಗಾರಿಗಳು ಶಾಸಕರು ಹಾಗೂ ಅವರಪಕ್ಷದ ಮುಖಂಡ ಮಾಜಿ ಅಧ್ಯಕ್ಷರು ಖಾಸಗಿಲೇಔಟ್‌ಗಳಿಗೆ ಒಳಚರಂಡಿ ಕಾಮಗಾರಿಯನ್ನುಕೈಗೊಂಡ ಕಾರಣ ಭೂಸ್ವಾಧೀನ ಪ್ರಕ್ರಿಯೆಗೆಹಣದ ಕೊರತೆ ಉಂಟಾಗಿ ಆಮೆಗತಿ ವೇಗದಲ್ಲಿಕಾಮಗಾರಿ ಗಳು ಸಾಗುತ್ತಿದ್ದು, ನಗರದ ಜನತೆತೀವ್ರ ತೊಂದರೆಯನ್ನು ಅನುಭವಿಸಲುಕಾರಣ ವಾಗಿತ್ತು. ಈ ಯೋಜನೆಗೆ ಭೂಮಿ ಕಳೆದುಕೊಂಡ ಭೂ ಮಾಲೀಕರು ಲಿಖಿತವಾಗಿನಮಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ನಮ್ಮದೇ ಸರ್ಕಾರ ಅಧಿಕಾರದಲ್ಲಿರುವ ಕಾರಣ ಪರಿಹಾರ ಕೊಡಿಸುವ ಭರವಸೆಯನ್ನು ನಾನು ಮತ್ತು ನಮ್ಮ ಪಕ್ಷದ ಮುಖಂಡರು ನೀಡಿದ್ದೆವುಅದರಂತೆ ಭೂಮಿ ಕಳೆದುಕೊಂಡಮಾಲೀಕರಿಗೆಸರ್ಕಾರದಿಂದ 9.62 ಕೋಟಿ ರೂ ಮಂಜೂರುಮಾಡಿಸುವ ಮೂಲಕ ನಾವು ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಜನಪರ ಕಾರ್ಯಕ್ರಮ ಗಳನ್ನು ಕ್ಷೇತ್ರದಲ್ಲಿ ಸಮರ್ಪಕವಾಗಿಅನುಷ್ಠಾನ ಗೊಳಿಸುವಲ್ಲಿ ವಿಫ‌ಲವಾಗಿರುವ ಜೆಡಿಎಸ್‌ ಶಾಸಕರು ತಮ್ಮ ಪಕ್ಷದ ಮುಖಂಡರು ಮಾಡಿರುವ ತಪ್ಪನ್ನು ಮುಚ್ಚಿಹಾಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ, ನಾವು ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಭೂಮಿಕಳೆದುಕೊಂಡ ಭೂ ಮಾಲೀಕರಿಗೆ ಸೂಕ್ತಪರಿಹಾರ ನೀಡಲು ಹಣ ಬಿಡುಗಡೆಮಾಡಿಸಿದ್ದೇವೆ. ಈ ಸತ್ಯವನ್ನು ಮರೆಮಾಚಿಶಾಸಕ ಕೆ.ಎಂ.ಶಿವಲಿಂಗೇಗೌಡರು ತಮ್ಮಸಾಧನೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಬಿ.ಎನ್‌ವಿದ್ಯಾಧರ್‌, ನಗರಸಭೆ ಸದಸ್ಯ ಭಾಸ್ಕರ್‌,ಮೇಲಗಿರಿ ಗೌಡ, ನಗರದ ಯೋಜನಾಪ್ರಾಧಿಕಾರದ ಸದಸ್ಯ ಶಿವರಾಜ್‌, ಮಾಜಿಸದಸ್ಯ ಉಮಾಶಂಕರ್‌, ಬಿಜೆಪಿ ಮುಖಂಡರಾದ ರಮೇಶ್‌ ನಾಯ್ಡು, ಚಂದ್ರಶೇಖರ್‌ ಯಾದವ್‌, ಸಿಕಂದರ್‌ ಇತರರಿದ್ದರು.

ಅವ್ಯವಹಾರಗಳ ದಾಖಲೆ ಬಿಡುಗಡೆ :

Advertisement

ಶಾಸಕರು ಹಾಗೂ ಜೆಡಿಎಸ್‌ನ ಕೆಲವು ಸದಸ್ಯರು ನಗರಸಭೆ ಆಡಳಿತದಲ್ಲಿ ದುರುದ್ದೇಶಪೂರ್ವಕವಾಗಿ ಅಡ್ಡಿ ಆತಂಕ ಸೃಷ್ಟಿಸುತ್ತಿದ್ದಾರೆ. ಇಂತಹ ಬೇದರಿಕೆಗಳಿಗೆ ನಾವುಗಳುಅಂಜದೆ ಹಿಂದಿನ ಮಾಜಿ ಅಧ್ಯಕ್ಷರ ಅವಧಿಯಲ್ಲಿ ನಗರ ಅಭಿವೃದ್ಧಿ ಹೆಸರಿನಲ್ಲಿ ನಡೆದಿರುವಅವ್ಯವಹಾರಗಳನ್ನು ದಾಖಲೆ ಸಮೇತ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲು ನಾವುಗಳು ಸಿದ್ದರಾಗಿದ್ದೇವೆ ಎಂದು ನಗರಸಭೆ ಅಧ್ಯಕ್ಷ ಸಿ. ಗಿರೀಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next