ಶ್ರೀರಂಗಪಟ್ಟಣ: ಪಟ್ಟಣ ಪುರಸಭೆ ಅಧ್ಯಕ್ಷರಾಗಿ ನಿರ್ಮಲ ವೇಣುಗೋಪಾಲ್ ಹಾಗೂ ಉಪಾಧ್ಯಕ್ಷರಾಗಿ ಎಸ್.ಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಸದೆ ಸುಮಲತಾ ಹಾಗೂ ಪ್ರತಿಪಕ್ಷವಾದ ಕಾಂಗ್ರೆಸ್‌ನಿಂದಯಾವುದೇಸದಸ್ಯರುನಾಮಪತ್ರ ಸಲ್ಲಿಸದೆ, ಸಭೆಗೆ ಗೈರಾಗಿದ್ದರು. ಇದರಿಂದ ಅವಿರೋಧ ಆಯ್ಕೆ ಸುಲಭವಾಯಿತು.
ಶ್ರೀರಂಗಪಟ್ಟಣ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ 12 ಜೆಡಿಎಸ್ ಸದಸ್ಯರು, 8 ಕಾಂಗ್ರೆಸ್ ಸದಸ್ಯರು ಹಾಗೂ ಒಬ್ಬರು ಬಿಜೆಪಿ ಸದಸ್ಯರು, ಇಬ್ಬರು ಪಕ್ಷೇತರ ಸದಸ್ಯರಾಗಿ ಆಯ್ಕೆ ಯಾಗಿದ್ದರು. ಜೆಡಿಎಸ್‌ನ12 ಸದಸ್ಯರು, ಒಬ್ಬರು ಪಕ್ಷೇತರು, ಒಬ್ಬರು ಬಿಜೆಪಿ ಸದಸ್ಯರು ಹಾಗೂ ಒಂದು ಶಾಸಕರು ಒಟ್ಟು 15 ಮಂದಿ ಬೆಂಬಲ ದೊಂದಿಗೆ 19ನೇ ವಾರ್ಡ್‌ನ ಜೆಡಿಎಸ್ ಸದಸ್ಯೆ ನಿರ್ಮಲ ವೇಣುಗೋಪಾಲ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 10ನೇ ವಾರ್ಡ್‌ನ ಜೆಡಿಎಸ್ ಸದಸ್ಯ ಎಸ್. ಪ್ರಕಾಶ್ ಅವರು ನಾಮ ಪತ್ರ ಸಲ್ಲಿಸಿದರು. ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿ ಕಾರಿಯಾದ ತಹಶೀಲ್ದಾರ್ ಎಂ.ವಿ.ರೂಪಾ ಅಧ್ಯಕ್ಷರನ್ನು ಅವಿರೋಧ ಆಯ್ಕೆ ಎಂದು ಘೋಷಣೆ ಮಾಡಿದರು.
ಶ್ರೀರಂಗಪಟ್ಟಣ ಅಭಿವೃದ್ಧಿ ಕುಂಠಿತ: ನೂತನ ಅಧ್ಯಕ್ಷರನ್ನು ಅಭಿನಂದಿಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಕಳೆದ 10 ವರ್ಷ ದಿಂದ ಶ್ರೀರಂಗಪಟ್ಟಣಪುರಸಭೆಅಭಿವೃದ್ಧಿಯಲ್ಲಿ ಕುಂಠಿತಗೊಂಡಿದ್ದು, ಯಾವುದೇ ಬದಲಾವಣೆ ಕಂಡಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಅವಧಿಯಲ್ಲಿ ಹಲವು ಅನುದಾನ ಬಂದು, ಈಗ ಪಟ್ಟಣ ಅಭಿವೃದ್ಧಿಯತ್ತ ಸಾಗುತ್ತಿದೆ. ಜೆಡಿಎಸ್ ಪಕ್ಷದ ಸದಸ್ಯರನ್ನು ಪಟ್ಟಣದ ಜನರು ಆಯ್ಕೆ ಮಾಡಿದ್ದು, ಅಭಿವೃದ್ಧಿಗೆ ಬಲ ತುಂಬಿದ್ದಾರೆ.ಸಂಸದರು ಹಾಗೂ ಕಾಂಗ್ರೆಸ್ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸದೆ, ಜೆಡಿಎಸ್ ಸದಸ್ಯರನ್ನು ಬೆಂಬಲಿಸಿ ಗೈರಾಗುವ ಮೂಲಕ ಅವಿರೋಧ ಆಯ್ಕೆಗೆ ಸಹಕಾರ ನೀಡಿದ್ದಾರೆ. ಅವರಿಗೆ ನಾನು ಅಭಿನಂದಿಸುತ್ತೇನೆ ಎಂದರು.
ಮೂಲಸೌಲಭ್ಯಕ್ಕೆ ಆದ್ಯತೆ: ನೂತನ ಅಧ್ಯಕ್ಷೆ ನಿರ್ಮಲಾ ವೇಣುಗೋಪಾಲ್ ಹಾಗೂ ಉಪಾಧ್ಯಕ್ಷ ಎಸ್.ಪ್ರಕಾಶ್ ಮಾತನಾಡಿ, ಶ್ರೀರಂಗಪಟ್ಟಣ ಅಭಿವೃದ್ಧಿಗೆ ಎಲ್ಲಾ ಸದಸ್ಯ ಸಹಕಾರ ಅಗತ್ಯವಿದೆ. ಕುಡಿಯುವ ಶುದ್ಧ ನೀರಿಗೆ ಹೆಚ್ಚು ಆದ್ಯತೆ ನೀಡಿ, ರಸ್ತೆ ಚರಂಡಿ ಅಭಿವೃದ್ಧಿ ಹಾಗೂ ಸ್ವತ್ಛತೆಗೆ ಮುಂದಾಗುತ್ತೇವೆ ಎಂದು ತಿಳಿಸಿದರು.
ಸದಸ್ಯರಾದ ಕೃಷ್ಣಪ್ಪ, ಎಂ.ನಂದೀಶ್, ಶಿವು, ಪೂರ್ಣಿಮಾ, ಶ್ರೀನಿವಾಸ್, ರಾಜು, ಚೈತ್ರ ಹಾಜರಿದ್ದರು.