Advertisement
ತಾಲೂಕಿನ ಧೀಮಂತ ರಾಜಕಾರಣಿ ಆಲಂಗೂರು ಆರ್.ಶ್ರೀನಿವಾಸ್ ಅವರು 1994 ಮತ್ತು 2004ರಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆದ್ದು ಪೌರಾಡಳಿತ, ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮ ಕೆಲಸ ಮಾಡಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಜೆಡಿಎಸ್ ಅನ್ನು ಜನರ ಮನದಲ್ಲಿ ಪ್ರಬಲಗೊಳಿಸಿದ್ದರು. ಅಂತಹ ಉಚ್ಚ್ರಾಯ ಸ್ಥಿತಿಯ ಲ್ಲಿದ್ದ ಪಕ್ಷವು ಪ್ರಸ್ತುತ ತಾಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಸಮೃದ್ಧಿ ಮಂಜುನಾಥ್, ನಿಕಟ ಪೂರ್ವಾ ಧ್ಯಕ್ಷ ಆಲಂಗೂರು ಶಿವಣ್ಣ ಬಣಗಳ ನಡೆಯಿಂದ ಕಾರ್ಯಕರ್ತರ ಸ್ಥಿತಿಯಂತೂ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ.
Related Articles
ದಕ್ಕೆ ಕೆ.ಶ್ರೀನಿವಾಸಗೌಡರ ವಿರುದ್ಧ ಸಮೃದ್ಧಿ ಮಂಜು ನಾಥ್ ವಾಗ್ಧಾಳಿ ನಡೆಸಿದ್ದರು. ಇದು ಆಲಂಗೂರು ಶಿವಣ್ಣ, ಇತರರನ್ನು ಕೆರಳಿಸಿತ್ತು.
Advertisement
ಆಲಂಗೂರು ಶ್ರೀನಿವಾಸ್ ಕಡೆಗಣನೆ: ನಗರಸಭೆಯ ವಾರ್ಡ್ 2ರ ಉಪಚುನಾವಣೆಯಲ್ಲಿ ಕೊತ್ತೂರು ಬಣದಿಂದ ಬಂದ ಎಂ.ಆರ್.ಮುರಳಿಗೆ ಮುಖಂಡರ ಮಾತನ್ನು ಲೆಕ್ಕಿಸದೇ, ಜೆಡಿಎಸ್‌ನಲ್ಲಿ ಟಿಕೆಟ್ ನೀಡಿ ದ್ದರು. ಅಲ್ಲದೆ, ಪಂಚರತ್ನ ಯಾತ್ರೆಯಲ್ಲಿ ಯಾವೊಬ್ಬ ನಾಯಕರೂ ಡಾ.ಬಿ.ಆರ್.ಅಂಬೇಡ್ಕರ್, ಆಲಂಗೂರು ಶ್ರೀನಿವಾಸ್ ಪ್ರತಿಮೆಗೆ ಮಾಲಾರ್ಪಣೆ ಮಾಡಿಲ್ಲ. ಕನಿಷ್ಠ ಜೆಡಿಎಸ್ ಕಟ್ಟಿ ಬೆಳೆಸಿದ ದಿ.ಆಲಂ ಗೂರು ಶ್ರೀನಿವಾಸ್ ಅವರ ಹೆಸರನ್ನು ಯಾರೊಬ್ಬರೂ ಕಾರ್ಯಕ್ರಮದಲ್ಲಿ ಜ್ಞಾಪಕ ಮಾಡಿಕೊಳ್ಳದೇ ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಭಿನ್ನಮತ ಶಮನ ಮಾಡುತ್ತಿಲ್ಲ: ಆದರೆ, ಪಕ್ಷದಲ್ಲಿನ ಭಿನ್ನಮತಕ್ಕೆ ನಾಂದಿ ಹಾಡಬೇಕಾದ ಸಮೃದ್ಧಿ ಮಂಜುನಾಥ್, ಮುಂದಿನ ವಿಧಾನ ಸಭೆ ಚುನಾವಣೆಗೆ ತಮ್ಮ ಪಕ್ಷದಲ್ಲಿ ಕೆಲವರು ಕೈಕೊಟ್ಟರೂ ಕೆ.ಎಚ್.ಮುನಿಯಪ್ಪ ಸೇರಿ ಕಾಂಗ್ರೆಸ್, ಬಿಜೆಪಿಯಲ್ಲಿನ ಕೆಲವು ಮುಖಂಡರು ಪರೋಕ್ಷವಾಗಿ ತಮಗೆ ಸಹಕಾರ ನೀಡಲಿದ್ದಾರೆ ಎಂಬ ಭ್ರಮೆಯಲ್ಲಿ ದ್ದಾರೆ. ಆದ್ದರಿಂದ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಮೃದ್ಧಿ ಮಂಜುನಾಥ್‌ಗೆ ಬಂದ 67,498 ಮತ ಹಿಡಿದುಕೊಳ್ಳುವ ಗೋಜಿಗೆಹೋಗದೇ ನಿರ್ಲಕ್ಷಿಸಿದ್ದಾರೆ. ಅದರಂತೆ ಪಕ್ಷದಲ್ಲಿನ ಮೂಲ ಜೆಡಿಎಸ್ ಮುಖಂಡರು, ಹಿರಿಯರನ್ನು ಮೂಲೆ ಗುಂಪು ಮಾಡಿ ಭಿನ್ನಮತ ಸಂಪೂರ್ಣ ಶಮನ ಮಾಡುವ ಗೋಜಿಗೆ ಹೋಗುತ್ತಿಲ್ಲ ಎನ್ನಲಾಗಿದೆ. ಅಲ್ಲದೇ, ಕಾಲ ಕಾಲಕ್ಕೆ ಉಂಟಾಗುತ್ತಿದ್ದ ಭಿನ್ನ ಮತವನ್ನು ಶಮನ ಮಾಡುವ ಗೋಜಿಗೆ ಹೋಗದೇ ಕಾಲ ಹಾಕಿದ್ದರಿಂದ ಭಿನ್ನಮತವು ಹೆಮ್ಮರವಾಗಿ ಬೆಳೆ ಯುವಂತಾಗಿದೆ. ಇದು ಸಮೃದ್ಧಿ ಮಂಜುನಾಥ್ ವಿರೋಧಿ ಬಣ ಒಗ್ಗೂಡಲು ಪ್ರೇರಣೆ ನೀಡಿದೆ. ಅದಕ್ಕೆ, ಪೂರಕವಾಗಿ ನ.27ರಂದು ಆಲಂಗೂರು ಜೋಡಿಯಲ್ಲಿ ಭಿನ್ನಮತೀಯ ಮುಖಂಡರ ಸಭೆಯನ್ನು ಏರ್ಪಡಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್‌ನ ಅಭ್ಯರ್ಥಿ ಎಂದು ಘೋಷಿಸಿರುವ ಸಮೃದ್ಧಿ ಮಂಜುನಾಥ್ ವಿರುದ್ಧ ಅವರ ಪಕ್ಷದಲ್ಲಿಯೇ ನಡೆಯುತ್ತಿರುವ ಬೆಳವಣಿಗೆ ಮುಂದಿನ ಅವರ ಗೆಲುವಿಗೆ ಅಡ್ಡಗಾಲು ಆಗುವುದೇ ಎನ್ನುವುದು ಜೆಡಿಎಸ್ ಕಾರ್ಯಕರ್ತರ ಅನುಮಾನವಾಗಿದೆ. ನ.27ರಂದು ನಡೆಯಲಿರುವ ಭಿನ್ನಮತೀಯರ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರವು ಸಮೃದ್ಧಿ ಮಂಜುನಾಥ್ ಭವಿಷ್ಯವನ್ನು ನಿರ್ಧರಿಸಲಿದೆ. ●ಎಂ.ನಾಗರಾಜಯ್ಯ