Advertisement
ಜೆಡಿಎಸ್ ಭದ್ರ ಕೋಟೆ ಉಳಿಸಿ ಕೊಳ್ಳಲು ಯತ್ನ: ಶಿರಾ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಟ್ಟರೆ ಇಲ್ಲಿ ಜೆಡಿಎಸ್ ಪಕ್ಷವೇ ಇಲ್ಲಿ ಪ್ರಾಬಲ್ಯ ಈ ಕ್ಷೇತ್ರದಲ್ಲಿ ತಮ್ಮದೇಆದ ದೊಡ್ಡ ಪಡೆ ಯನ್ನು ಹೊಂದಿರುವ ಜೆಡಿಎಸ್ ತನ್ನ ಪಡೆಯನ್ನು ಗಟ್ಟಿ ಮಾಡಲು ಹೊರಟಿದೆ.
Related Articles
Advertisement
ಚುನಾವಣಾ ಪ್ರಚಾರದ ಅಖಾಡಕ್ಕಿಳಿದ ಅಮ್ಮಾಜಮ್ಮ : ದಿ.ಶಾಸಕ ಬಿ.ಸತ್ಯನಾರಾಯಣ ಅವರ ನಿಧನ ದಿಂದ ತೆರವಾಗಿರುವ ಸ್ಥಾನಕ್ಕೆ ಅವರ ಪತ್ನಿ ಅಮ್ಮಾಜಮ್ಮ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಶಿರಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ವರಿಷ್ಠರು ಘೋಷಣೆ ಮಾಡಿದ ದಿನದಿಂದ ಕೋವಿಡ್ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಮ್ಮಾಜಮ್ಮ ಅವರು ಸ್ವತಃ ನಾಮಪತ್ರ ಸಲ್ಲಿಸಲೂ ಸಾಧ್ಯವಾಗದೇ ಅವರ ಪರವಾಗಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್.ಕೆ.ಕುಮಾರ ಸ್ವಾಮಿ ನಾಮಪತ್ರ ಸಲ್ಲಸಿದ್ದರು.
ಈಗ ಕೋವಿಡ್ ದಿಂದ ಮುಕ್ತರಾಗಿರುವ ಅಮ್ಮಾ ಜಮ್ಮ ಚುನಾವಣಾ ಪ್ರಚಾರದ ಕಣಕ್ಕೆ ಧುಮಿಕಿದ್ದಾರೆ. ಕ್ಷೇತ್ರಾತ್ಯಂತ ಬಿರುಸುನ ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ತಮ್ಮ ಪತಿ ಬಿ.ಸತ್ಯನಾರಾಯಣ ಅವರ ಜನಪರ ಸೇವೆ ನನಗೆ ವರವಾಗಲಿದೆ, ಶಿರಾ ಕ್ಷೇತ್ರದ ಮತದಾರರು ನಮ್ಮ ಕುಟುಂಬವನ್ನು ಕೈಬಿಡುವುದಿಲ್ಲ ಎನ್ನುವ ನಂಬಿಕೆ ಮೇಲೆ ಮತಯಾಚನೆ ಮಾಡುತ್ತಿದ್ದಾರೆ.
ಘಟಾನುಘಟಿಗಳಿಂದ ಪ್ರಚಾರ : ಶಿರಾ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಸತ್ಯನಾರಾಯಣ ಅವರನ್ನು ಗೆಲ್ಲಿಸಲು ಜೆಡಿಎಸ್ ನ ಎಲ್ಲಾ ಮುಖಂಡರು ಒಗ್ಗಟ್ಟಾಗಿ ಕೆಲಸಮಾಡಲು ಮುಂದಾಗಿದ್ದಾರೆ. ಶಾಸಕ ಡಿ.ಸಿ. ಗೌರಿಶಂಕರ್, ಮಾಜಿ ಸಚಿವ ಶಾಸಕ ಎಚ್.ಡಿ. ರೇವಣ್ಣ, ಸಂಸತ್ ಸದಸ್ಯ ಪ್ರಜ್ವಲ್ ರೇವಣ್ಣ, ಜೆಡಿಎಸ್ ಯುವ ಮುಖಂಡ ನಿಖೀಲ್ ಕುಮಾರ ಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರ ಸ್ವಾಮಿ, ವಿ.ಪ. ಸದಸ್ಯ ತಿಪ್ಪೇಸ್ವಾಮಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆಂಜನಪ್ಪ, ನಾಗರಾಜ್, ಬೆಳ್ಳಿ ಲೋಕೇಶ್, ಅಮ್ಮಾಜಮ್ಮ ಅವರ ಪುತ್ರ ಸತ್ಯ ಪ್ರಕಾಶ್, ಜಿಪಂ ಮಾಜಿ ಉಪಾಧ್ಯಕ್ಷ ಮುದಮಡು ರಂಗಸ್ವಾಮಯ್ಯ ಸೇರಿದಂತೆ ಅನೇಕ ಜೆಡಿಎಸ್ ಮುಖಂಡರು ಪ್ರಚಾರದಲ್ಲಿ ನಿರತರಾಗಿದ್ದಾರೆ.
ಶಿರಾ ಕ್ಷೇತ್ರದ ಅಭಿವೃದ್ಧಿಗೆ ಬಿ.ಸತ್ಯನಾರಾಯಣ ಅವರು ಶ್ರಮಿಸುತ್ತಿದ್ದರು. ಆದರೆ ಅವರು ಅಕಾಲಿಕವಾಗಿ ಮೃತಪಟ್ಟಿದ್ದಾರೆ. ಈ ಕ್ಷೇತ್ರದ ಅಭಿವೃದ್ಧಿಗೆ ಸತ್ಯನಾರಾಯಣ ಅವರು ಅಪಾರ ಕನಸು ಕಟ್ಟಿದ್ದರು, ಆ ಕನಸ್ಸನ್ನು ನನಸು ಮಾಡಲು ಜೆಡಿಎಸ್ ನನಗೆ ಟಿಕೆಟ್ ನೀಡಿದೆ. ತಾವೆಲ್ಲ ಈ ಚುನಾವಣೆಯಲ್ಲಿ ನಮ್ಮ ಕೈ ಹಿಡಿದು ಮುಂದೆ ನಡೆಸಿ ಎಂದು ಮತದಾರರಲ್ಲಿ ಬೇಡುತ್ತೇನೆ. –ಅಮ್ಮಾಜಮ್ಮ ಸತ್ಯನಾರಾಯಣ, ಜೆಡಿಎಸ್ ಅಭ್ಯರ್ಥಿ
-ಚಿ.ನಿ.ಪುರುಷೋತ್ತಮ್