Advertisement

ಜೆಡಿಎಸ್ ಹಣದಿಂದ ರಾಜಕೀಯ ಮಾಡ್ತಿಲ್ಲ, ಹಣಕ್ಕಿಂತ ಜನ ಮುಖ್ಯ: ದೇವೇಗೌಡ

02:39 PM Dec 02, 2022 | Team Udayavani |

ಕಲಬುರಗಿ: ನಾನಾಗಲಿ, ಕುಮಾರಸ್ವಾಮಿ ಅವರಾಗಲಿ ದುಡ್ಡು ನೋಡಿ ರಾಜಕೀಯ ಮಾಡಿಲ್ಲ. ಹಾಗೆ ಮಾಡೋ ಹಾಗಿದ್ದರೆ ಪಂಚರತ್ನ ಯಾತ್ರೆ ನಡೆಯುತ್ತಿತ್ತೇ? ಜನತಾ ಜಲಧಾರೆ ಜನರಿಂದ ನಡೆಯುತ್ತಿದೆ, ಹಣದಿಂದಲ್ಲ. ಹಣದಿಂದ ರಾಜಕೀಯ ಮಾಡುವ ಅವಶ್ಯಕತೆ ನಮಗಿಲ್ಲ. ಹಣಕ್ಕಿಂತ ಜನ ಮುಖ್ಯ ಎಂದು ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡ ಹೇಳಿದರು.

Advertisement

ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ ಹಣದಿಂದ ಉಳಿದಿಲ್ಲ. ಜನರಿಂದ ಉಳಿದಿದೆ. ಹಣದಿಂದ ನಡೆಯುತ್ತಿದ್ದರೆ, ಪಂಚರತ್ನ, ಜನತಾ ಜಲಧಾರೆ ಸೇರಿದಂತೆ ಇತರೆ ಚಟುವಟಿಕೆಗಳನ್ನು ವರ್ಷಾನುಗಟ್ಟಲೇ ನಡೆಸಲು ಸಾಧ್ಯವಿಲ್ಲ ಯಾರನ್ನು ಹಣ ಕೊಟ್ಟು ಕರೆಯಿಸುತ್ತಿಲ್ಲ ಎಂದ ಅವರು, ವಿರೋಧ ಪಕ್ಷಗಳಿಗೆ ಆರೋಪ ಮಾಡಲಿಕ್ಕೆ ಏನು ಇಲ್ಲ ಇದರಿಂದಾಗಿ ಅವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದರು.

ಕಳೆದ ಬಾರಿ ಜನತಾದಳ ಅಧಿಕಾರದಲ್ಲಿದ್ದಾಗ ರೈತರ 25 ಸಾವಿರ ಕೋಟಿ ರೂ.ಗಳನ್ನು ಮನ್ನಾ ಮಾಡಿದ್ದು ಜನ ಮತ್ತು ರೈತರ ಹಿತಕ್ಕಾಗಿ ಹಣಕ್ಕಾಗಿ ಅಲ್ಲ ಎಂದು ಸ್ಪಷ್ಟ ಪಡಿಸಿದರು.

ಇದನ್ನೂ ಓದಿ;ಇದು ಪ್ರಧಾನಿ ಮೋದಿಯವರ “ಅತಿದೊಡ್ಡ ಮತ್ತು ಸುದೀರ್ಘ” ರೋಡ್‌ಶೋ

ಬಿಜೆಪಿಯಲ್ಲಿ ರೌಡಿಗಳನ್ನು ಕಾರ್ಯಕತರನ್ನಾಗಿ ಸೇರಿಸಿಕೊಳ್ಳಲಾಗುತ್ತಿಯಲ್ಲಾ ಎಂದು ಕೇಳಿದ ಪ್ರಶ್ನೆಗೆ, ತುಸು ಸಿಡಿಮಿಡಿಗೊಂಡ ಅವರು, ರೌಡಿ ರಾಜಕೀಯ ಕುರಿತು ನನಗೆ ಕೇಳಬೇಡಿ. ಯಾರೂ ಸೇರಿಸಿಕೊಳ್ಳುತ್ತಿದ್ದಾರೋ ಅವರನ್ನೇ ಕೇಳಿ ಎಂದರು.

Advertisement

ಗಡಿ ವಿವಾದ ನಿಲುವು ಬದಲಿಲ್ಲ: ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ವಿಚಾರದಲ್ಲಿ ಜೆಡಿಎಸ್ ಹಿಂದೆ ಆಗಿರುವ ತೀರ್ಮಾನವನ್ನೇ ಬೆಂಬಲಿಸುತ್ತದೆ. ಸರಕಾರ ತನ್ನ ನಿರ್ಧಾರವನ್ನು ಬದಲಿಸುವ ಅಗತ್ಯವಿಲ್ಲ ನಾವು ಅದೇ ನಿರ್ಧಾರವನ್ನು ಬೆಂಬಲಿಸುತ್ತೇವೆ ಎಂದ ಅವರು, ವಿನಾಕಾರಣ ವಿವಾದಗಳನ್ನು ಚುನಾವಣೆ ಮುನ್ನ ಹುಟ್ಟು ಹಾಕುವುದು ಸರಿಯಲ್ಲ ಎಂದರು.

ಮೊಮ್ಮಕ್ಕಳು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸದೆ ಮುನ್ನಡೆದರು.

ಈ ವೇಳೆಯಲ್ಲಿ ಅನಿತಾ ಕುಮಾರಸ್ವಾಮಿ, ನಜೀರ್ ಸೇರಿದಂತೆ ಪಕ್ಷದ ಹಲವು ಮುಖಂಡರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next