Advertisement

ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಜನತೆಗೆ ನ್ಯಾಯ : ಜೆಡಿಎಸ್‌ ಅಭ್ಯರ್ಥಿ ನಿಯಾಜ 

04:21 PM Oct 05, 2021 | Team Udayavani |

ಹಾನಗಲ್ಲ: ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿಯಲ್ಲಿ ವಿಫಲವಾಗಿದ್ದು, ಪ್ರಾದೇಶಕ ಪಕ್ಷಗಳಿಂದ ಮಾತ್ರ ಜನತೆಗೆ ನ್ಯಾಯ ಸಿಗಲು ಸಾಧ್ಯ ಎಂದು ಜೆಡಿಎಸ್‌ ಅಭ್ಯರ್ಥಿ ನಿಯಾಜ ಶೇಖ್‌ ಹೇಳಿದರು.

Advertisement

ಮಾಧ್ಯಮಗಳಿಗೆ ಮಾತನಾಡಿದ ಅವರು, ಈ ಬಾರಿ ಇಲ್ಲಿ ನಮ್ಮದೇ ಗೆಲುವು. ರಾಜ್ಯ ಅಧ್ಯಕ್ಷರೂ ಹಾಗೂ ಪಕ್ಷದ ನಾಯಕರಾದ ಎಚ್‌.ಡಿ. ಕುಮಾರಸ್ವಾಮಿ ಹಾಗೂ ದೇವೇಗೌಡರ ದೂರ ದೃಷ್ಟಿಯಿಂದ ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲೇ ನನ್ನನ್ನು ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ನಮ್ಮ ಕ್ಷೇತ್ರದ ಕಾರ್ಯಕರ್ತರು 6 ತಿಂಗಳಿಂದ ತಾಲೂಕಿನ ಹಳ್ಳಿ ಹಳ್ಳಿ, ಮನೆ ಮನೆಗೆ ಭೇಟಿ ಮಾಡಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸರಕಾರದ ಕಾರ್ಯವೈಖರಿಯನ್ನು ಮನದಟ್ಟು ಮಾಡಿದ್ದಾರೆ. ಕಾರ್ಯಕರ್ತರೇ ನಮ್ಮ ಶಕ್ತಿ. ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸುವ ಪಣ ತೊಟ್ಟಿದ್ದಾರೆ ಎಂದರು.

2023ರ ಚುನಾವಣೆಗೆ ಎಚ್‌.ಡಿ. ಕುಮಾರಸ್ವಾಮಿ ಅವರ ಮಿಷನ್‌ 123 ಗುರಿಗೆ ಹಾನಗಲ್ಲ ಚುನಾವಣೆ ಮೊದಲ ಮೈಲುಗಲ್ಲಾಗಲಿದ್ದು, ನಮ್ಮ ಗೆಲುವಿನ ಮೂಲಕ ರಾಜ್ಯದಲ್ಲಿ ಹೊಸ ರಾಜಕೀಯ ಇತಿಹಾಸ ನಿರ್ಮಾಣ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅ. 7ರಂದು ಅವಕಾಶ ಕೊಟ್ಟರೆ ಹಾನಗಲ್ಲ ವಿರಕ್ತಮಠದಿಂದ ಬೃಹತ್‌ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಲಾಗುತ್ತದೆ. ಇಲ್ಲದಿದ್ದರೆ ನೀತಿಸಂಹಿತೆ, ಕೋವಿಡ್‌ ನಿಯಮ ಪಾಲಿಸಿ ನಾಮಪತ್ರ ಸಲ್ಲಿಸಲಾಗುವುದು. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖೀಲ್‌, ಎನ್‌.ಎಚ್‌. ಕೋನರಡ್ಡಿ, ಬಂಡೆಪ್ಪ ಕಾಶಂಪೂರ, ಮಲ್ಲಿಕಾರ್ಜುನ ಹಲಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next